

ಬೆಂಗಳೂರು: ಮಹಿಳೆಯ ಇನ್‌ಸ್ಟಾಗ್ರಾಮ್ ಫೋಟೋ ಮತ್ತು ವೀಡಿಯೊಗಳನ್ನು ಡೌನ್‌ಲೋಡ್ ಮಾಡಿ, ಅವರ ಮುಖ ಇರುವ ಮಾರ್ಪಿಂಗ್ ಮಾಡಿದ ನಗ್ನ ವಿಡಿಯೋಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಬಾಗಲೂರಿನ ಕೃಷ್ಣ ಎಂದು ಗುರುತಿಸಲಾಗಿದೆ.
ಮಹಿಳೆಯೊಬ್ಬರ ಇನ್‌ಸ್ಟಾಗ್ರಾಮ್ ಫೋಟೋಗಳನ್ನು ಡೌನ್‌ಲೋಡ್ ಮಾಡಿ ನಗ್ನ ವಿಡಿಯೋಗಳಲ್ಲಿ ಬಳಸಿರುವುದಾಗಿ ಬಾಗಲೂರಿನ ಮಹಿಳೆಯೊಬ್ಬರು ಹೇಳಿದ ನಂತರ ಈ ಅಪರಾಧ ಬೆಳಕಿಗೆ ಬಂದಿದೆ.
ವೈಯಕ್ತಿಕ ದ್ವೇಷದ ಕಾರಣ ವೆಂಕಟೇಶ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಸಿಲುಕಿಸುವ ಮಾಸ್ಟರ್ ಪ್ಲಾನ್ ಮಾಡಲು ಹೋಗಿ ಕೃಷ್ಣ ಈ ಅಪರಾಧ ಮಾಡಿದ್ದಾನೆ. ಸಂತ್ರಸ್ತ ಮಹಿಳೆಯೊಂದಿಗೆ ವೆಂಕಟೇಶ್ ಮಾತನಾಡಿದ್ದನ್ನು ತಿಳಿದು ಆಕ್ರೋಶಗೊಂಡಿದ್ದ ನಂತರ ಕೃಷ್ಣ ಹೀಗೆ ಮಹಿಳೆಯ ಫೋಟೋಗಳನ್ನು ಇನ್ಸಾಟಾಗ್ರಾಮ್ ನಿಂದ ಡೌನ್ ಲೋಡ್ ಮಾಡಿಕೊಂಡು, ವೆಂಕಟೇಶ್ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಯೊಂದನ್ನು ರಚಿಸಿಕೊಂಡು, ಆಕೆಯ ಮುಖ ಇರುವ ಮಾರ್ಪಿಂಗ್ ಮಾಡಿದ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ.
ಈ ಸಂಬಂಧ ಮಹಿಳೆ ದೂರು ನೀಡಿದ ನಂತರ ಆರೋಪಿ ಕೃಷ್ಣನನ್ನು ಬಂಧಿಸಲಾಗಿದೆ. ಕೆಲಸಕ್ಕೆ ಹೋಗುವ ಯುವತಿಯರೊಂದಿಗೆ ಸ್ನೇಹ ಬೆಳೆಸಿ ಅವರ ಇನ್‌ಸ್ಟಾಗ್ರಾಂ ಖಾತೆಗೆ ಹೋಗಿ ಅವರ ಫೋಟೋ ಮತ್ತು ವಿಡಿಯೋಗಳನ್ನು ಕೃಷ್ಣ ಕದಿಯುತ್ತಿದ್ದ. ನಂತರ ಅವರು ಮುಖ ಇರುವ ಮಾರ್ಪಿಂಗ್ ಮಾಡಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಯ ಮೊಬೈಲ್ ಫೋನ್ ನ್ನು ಪೊಲೀಸರು ಪರಿಶೀಲಿಸಿದಾಗ, ನೂರಾರು ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಇರುವುದು ತಿಳಿದುಬಂದಿದೆ. ಸದ್ಯ ಕೃಷ್ಣ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement