

ಹಾಸನ: ಹಾಸನದ ವಿದ್ಯಾನಗರದಲ್ಲಿರುವ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಹಾಗೂ ಜಿಪಿಎ ಹೋಲ್ಡರ್ ದೇವರಾಜ್ ನಡುವಿನ ಭೂ ಸಂಘರ್ಷ ಮತ್ತೆ ತಾರಕ್ಕಕೇರಿದ್ದು, ಇದೀಗ ಮತ್ತೆ ಭಾರಿ ಸದ್ದು ಮಾಡುತ್ತಿದೆ.
ಹೌದು.. ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಸೈಟ್ ಒತ್ತುವರಿ ಮಾಡಿದ್ದಾರೆ ಎನ್ನುವ ಆರೋಪ ಕುರಿತ ಪ್ರಕರಣ ಮತ್ತೆ ಸದ್ದು ಮಾಡುತ್ತಿದ್ದು, ನಿರ್ಮಾಪಕಿಯೂ ಆಗಿರುವ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್, ವಿವಾದಿತ ಜಾಗದಲ್ಲಿ ಮತ್ತೆ ಕಂಪೌಂಡ್ ಹಾಕಲು ಮುಂದಾಗಿದ್ದು ಇದು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತಾಗಿ ಯಶ್ ತಾಯಿ ಮತ್ತು ಜಿಪಿಎ ಹೋಲ್ಡರ್ ದೇವರಾಜ್ ನಡುವೆ ಭಾರೀ ಜಗಳ ನಡೆದಿದ್ದು, ಹಾಸನದ ವಿದ್ಯಾನಗರದಲ್ಲಿರುವ ಯಶ್ ಮನೆಯ ಪಕ್ಕದಲ್ಲಿರುವ ಸೈಟ್ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ದೇವರಾಜ್, ಪುಷ್ಪಾ ಅರುಣ್‌ಕುಮಾರ್ ಹಾಕಿದ್ದ ಕಾಂಪೌಂಡ್ ತೆರವು ಮಾಡಿದ್ದರು. ಈಗ ಮತ್ತೆ ಕಾಂಪೌಂಡ್ ಹಾಕಲು ಪುಷ್ಪ ಅರುಣ್‌ಕುಮಾರ್ ಮುಂದಾಗಿದ್ದರು.
ಏನ್ ರೌಡಿಸಂ ಮಾಡ್ತೀಯಾ?
ಸೈಟ್ ನ ಜಿಪಿಎ ಹೋಲ್ಡರ್ ದೇವರಾಜ್ ವಿವಾದಿತ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾನೆ ಎಂದು ಯಶ್ ತಾಯಿ ಪುಷ್ಪಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕೋರ್ಟ್ ಆದೇಶ ನೀಡಲು ದೇವರಾಜ್‌ಗೆ ಆವಾಜ್ ಹಾಕಲಾಗಿದೆ. ಆರು ವರ್ಷದಿಂದ ಯಾಕೆ ಬಂದಿಲ್ಲ? ಕೋರ್ಟ್ ಆರ್ಡರ್ ಎಲ್ಲಿದೆ? ಸೈಟ್ ಮೇಲೆ ಬಂದಿರೋ ಆರ್ಡರ್ ತೋರಿಸಿ. ನಾನು ಸಿಐಡಿ ಅಲ್ಲ. ಅವನಿಗೆ ಬಿಟ್ಟಿ ಬೇಕು. ನಾನು ಅದರ ಮಾಹಿತಿ ತೆಗೆದಿದ್ದೇನೆ. ಅದನ್ನು ಸರ್ಕಾರಕ್ಕೆ ಕೊಡುತ್ತೇನೆ ಎಂದಿದ್ದಾರೆ.
ನಿನ್ನೆ ಮೊನ್ನೆ ಗಲಾಟೆ. ಪಿಡಿಒ ಈ ಬೌಂಡರಿನಲ್ಲಿ ಹಿಂದೆ ಕೆಲಸ ಮಾಡಿದ್ದರು. ಅವರದ್ದೇ ಕೆಲಸ. ನಮ್ಮದು ಇದು. ಅವರದ್ದು ಎಲ್ಲಿದೆ? ಕೋರ್ಟ್ನಿಂದ ಆರ್ಡರ್ ತಂದರೆ ಕೊಡ್ತೀವಿ. ಕ್ಯಾಮೆರಾ ಕಿತ್ತಾಕಿದ್ದಾರೆ. ಬೀಗ ಬಿಚ್ಚಿದ್ದಾರೆ. ಎಲೆಕ್ಟ್ರಿಕ್ ಸಾಮಾನು ಕದ್ದಿದ್ದಾರೆ. ರೌಡಿಸಂ ಮಾಡೋದು ಇಲ್ಲಿ. ಈ ಏರಿಯಾದಲ್ಲಿ ಒಂದು ದಂಧೆ ಇದು. ನಾನು ಇಲ್ಲದೇ ಇದ್ದಾಗ ಒಡೆದಿರೋದಕ್ಕೆ ಸಮಸ್ಯೆಯಾಗಿರೋದು. ನಾನು ಇದ್ದಾಗ ಆರ್ಡರ್ ತೋರಿಸಿ ತೆರವು ಮಾಡಬೇಕಾಗಿತ್ತು. ಸದ್ಯ ಕಾಂಪೌಂಡ್ ಹಾಕಿಕೊಳ್ತೇನೆ. ಅವನು ಇಲ್ಲಿ ಬರಬಾರದು ಎಂದು ಪುಷ್ಪಾ ಅವರು ಕಿಡಿಕಾರಿದ್ದಾರೆ.
ಹಲವು ವಸ್ತುಗಳ ಕಳ್ಳತನ
ಇದೇ ವೇಳೆ ತಮ್ಮ ಕಾಪೌಂಡ್ ತೆರವು ವೇಳೆ ಆವರಣದಲ್ಲಿದ್ದ ಹಲವು ವಸ್ತುಗಳನ್ನು ಕದ್ದಿದ್ದಾರೆ ಎಂದು ಪುಷ್ಪಾ ಅವರು ಆರೋಪಿಸಿದ್ದಾರೆ. 'ಕ್ಯಾಮೆರಾ ಕಿತ್ತಾಕಿದ್ದಾರೆ. ಬೀಗ ಬಿಚ್ಚಿದ್ದಾರೆ. ಎಲೆಕ್ಟ್ರಿಕ್ ಸಾಮಾನು ಕದ್ದಿದ್ದಾರೆ' ಎಂದು ಪುಷ್ಪಾ ಅವರು ಆರೋಪಿಸಿದ್ದಾರೆ.
ಕೋರ್ಟ್ ಆದೇಶ ಇದೆ ಎಂದು ಯಶ್ ತಾಯಿ ಹಾಕಿದ್ದ ಕಾಂಪೌಂಡ್‌ಅನ್ನು ಜಿಪಿಎ ಹೋಲ್ಡರ್ ದೇವರಾಜ್ ಒಡೆದು ಹಾಕಿದ್ದರು. ಆದರೆ, ಆರು ವರ್ಷದ ಹಿಂದೆ ಸೈಟ್ ಖರೀದಿಸಿದ್ದೇನೆ ಎಂದಿರುವ ಪುಷ್ಪಾ ಅರುಣ್ ಕುಮಾರ್ ಇದೇ ಕಾರಣಕ್ಕೆ ಕಂಪೌಂಡ್ ಹಾಕಿದ್ದೇನೆ ಎಂದಿದ್ದರು. ಆದರೆ, ಅದನ್ನು ಒಡೆದು ಜಿಪಿಎ ಹೋಲ್ಡರ್ ದೇವರಾಜ್, ತಂತಿಬೇಲಿ ಹಾಕಿದ್ದರು.
ಇಂದು ಮತ್ತೆ ದೇವರಾಜ್ ಹಾಕಿದ್ದ ತಂತಿ ಬೇಲಿಯನ್ನು ಯಶ್ ತಾಯಿ ತೆರವುಗೊಳಿಸಿದ್ದರು. ಮತ್ತೆ ಸೈಟ್ ಗೆ ಕಾಂಪೌಂಡ್ ಹಾಕಲು ಪುಷ್ಪ ತಯಾರಿ ಮಾಡಿಕೊಂಡಿದ್ದಾರೆ. ಕೋರ್ಟ್ ಆದೇಶವಿದೆ ಎಂದು ದೇವರಾಜ್ ಹಾಕಿದ್ದ ಬೋರ್ಡ್ಅನ್ನು ಪುಷ್ಪಾ ಅವರು ಕಿತ್ತುಹಾಕಿದ್ದಾರೆ. ಇದೇ ವೇಳೆ ಮನೆ ಮುಂದೆ ಬಂದ ದೇವರಾಜ್‌ಗೆ ಯಶ್ ತಾಯಿ ತರಾಟೆ ತೆಗೆದುಕೊಂಡಿದ್ದಾರೆ.
Advertisement