ಮುಂಗಾರು ಮಳೆ ಕೊರತೆ: ಮೈಸೂರಿನಲ್ಲಿ ವರುಣನಿಗೆ ಕಪ್ಪೆ ಮೆರವಣಿಗೆ ಹೊರಟ ಮಕ್ಕಳು-Video

ಈ ವರ್ಷ ಮುಂಗಾರು ಮಳೆ ಕೊರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲೆಯ ತುಂಬಸೋಗೆ ಗ್ರಾಮದ ಗ್ರಾಮಸ್ಥರು ಮಳೆಯಾಗಲೆಂದು ದೇವರನ್ನು ಪ್ರಾರ್ಥಿಸುವ ಉದ್ದೇಶದಿಂದ ಸಾಂಪ್ರದಾಯಿಕ ಕಪ್ಪೆ ಮೆರವಣಿಗೆ ನಡೆಸಿದರು.
Frog procession in Mysuru
ಮೈಸೂರಿನಲ್ಲಿ ಮಕ್ಕಳಿಂದ ಕಪ್ಪೆ ಮೆರವಣಿಗೆ
Updated on

ಮೈಸೂರು: ಈ ವರ್ಷ ಮುಂಗಾರು ಮಳೆ ಕೊರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲೆಯ ತುಂಬಸೋಗೆ ಗ್ರಾಮದ ಗ್ರಾಮಸ್ಥರು ಮಳೆಯಾಗಲೆಂದು ದೇವರನ್ನು ಪ್ರಾರ್ಥಿಸುವ ಉದ್ದೇಶದಿಂದ ಸಾಂಪ್ರದಾಯಿಕ ಕಪ್ಪೆ ಮೆರವಣಿಗೆ ನಡೆಸಿದರು.

ಡೊಳ್ಳು-ತಮಟೆಗಳ ನಾದದೊಂದಿಗೆ ಆರಂಭವಾದ ಮೆರವಣಿಗೆಯಲ್ಲಿ ಗ್ರಾಮಸ್ಥರು ಕಪ್ಪೆಗೆ ವಿಶೇಷ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

Frog procession in Mysuru
ಕೈಕೊಟ್ಟ ಮುಂಗಾರು: ರಾಜ್ಯದ 16 ಜಿಲ್ಲೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಮಳೆ; ಮಲೆನಾಡಿನಲ್ಲೂ ಬರದ ಛಾಯೆ, ಬೆಳೆ ನಷ್ಟದ ಆತಂಕ

ತುಂಬಸೋಗೆ ಗ್ರಾಮದ ಮಕ್ಕಳಿಗೆ ಮರದ ಎಲೆಗಳಿಂದ ಉಡುಪು ತೊಡಿಸಿ, ದೇಹಕ್ಕೆ ಅರಿಶಿನ ಮತ್ತು ಕುಂಕುಮ ಹಚ್ಚಲಾಯಿತು. ಕೋಲಿಗೆ ಕಟ್ಟಿದ ಕಪ್ಪೆಯನ್ನು ಮಕ್ಕಳು ಗ್ರಾಮದೆಲ್ಲೆಡೆ ಮೆರವಣಿಗೆಯಲ್ಲಿ ಹೊತ್ತು ಸಾಗಿದರು.

ಮೆರವಣಿಗೆ ಬಳಿಕ ಗ್ರಾಮಸ್ಥರು ಗ್ರಾಮದ ಅಧಿದೇವತೆ ಮಾರಮ್ಮ ದೇವಿಗೆ ನೈವೇದ್ಯವಾಗಿ ಅನ್ನ ಮತ್ತು ಧಾನ್ಯಗಳನ್ನು ಅರ್ಪಿಸಿ, ಉತ್ತಮ ಮಳೆಯಾಗುವಂತೆ ಪ್ರಾರ್ಥಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com