ಬೆಂಗಳೂರು: ಡೇಕೇರ್ ಸೆಂಟರ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ; ಇಬ್ಬರು ದಾದಿಯರ ಬಂಧನ

ಐಟಿ ಕಂಪನಿ ಆವರಣದೊಳಗಿನ ಡೇಕೇರ್ ಕೇಂದ್ರದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಬಯಲಾದ ನಂತರ ಡೇಕೇರ್ ಕೇಂದ್ರದ ಇಬ್ಬರು ದಾದಿಯರ ಬಂಧನ ನಡೆದಿದೆ. ಬ್ರೂಕ್‌ಫೀಲ್ಡ್‌ನಲ್ಲಿರುವ ಐಟಿ ಕಂಪನಿ ಕ್ಯಾಪ್‌ಜೆಮಿನಿ ಒಳಗಿನ ಡೇಕೇರ್ ಕೇಂದ್ರದ ಐದು ಮಹಿಳಾ ಉದ್ಯೋಗಿಗಳ,,,
daycare centre
ಡೇಕೇರ್ ಸೆಂಟರ್‌
Updated on

ಬೆಂಗಳೂರು: ಐಟಿ ಕಂಪನಿ ಆವರಣದೊಳಗಿನ ಡೇಕೇರ್ ಕೇಂದ್ರದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಬಯಲಾದ ನಂತರ ಡೇಕೇರ್ ಕೇಂದ್ರದ ಇಬ್ಬರು ದಾದಿಯರ ಬಂಧನ ನಡೆದಿದೆ. ಬ್ರೂಕ್‌ಫೀಲ್ಡ್‌ನಲ್ಲಿರುವ ಐಟಿ ಕಂಪನಿ ಕ್ಯಾಪ್‌ಜೆಮಿನಿ ಒಳಗಿನ ಡೇಕೇರ್ ಕೇಂದ್ರದ ಐದು ಮಹಿಳಾ ಉದ್ಯೋಗಿಗಳ ವಿರುದ್ಧ ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದ್ದು ಇದೀಗ ಮಂಜುಳಾ ಮತ್ತು ವಿಜಯಲಕ್ಷ್ಮಿ ಎಂಬುವರನ್ನು ಬಂಧಿಸಲಾಗಿದೆ.

ವೀಡಿಯೊ ಪರಿಶೀಲನೆ ನಂತರ ಅವರನ್ನು ಗುರುತಿಸಿ ಬಂಧಿಸಲಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ. ಸದ್ಯ ಅವರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿದ್ದು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ಎರಡು ರಿಂದ ಮೂರು ವರ್ಷದೊಳಗಿನ ಮಕ್ಕಳು ಅಳುವಾಗ ಅಥವಾ ರಚ್ಚೆ ಹಿಡಿದಾಗ ಸಿಬ್ಬಂದಿ ಮಕ್ಕಳಿಗೆ ಬೆದರಿಕೆ ಹಾಕುತ್ತಿರುವುದು ವೀಡಿಯೊದಲ್ಲಿ ಕಾಣಿಸಿತ್ತು.

daycare centre
ಮಕ್ಕಳನ್ನು ವಾಷಿಂಗ್ ಮೆಷಿನ್ ನಲ್ಲಿಟ್ಟು ಕ್ರೌರ್ಯ: ಪೊಲೀಸರಿಂದ ಬೆಂಗಳೂರಿನ ಎಲ್ಲಾ ಡೇಕೇರ್ ಗಳ ಪರಿಶೀಲನೆ

ಮಕ್ಕಳನ್ನು ವಾಷಿಂಗ್ ಮೆಷಿನ್ ಒಳಗೆ ಇರಿಸಿ, ಶೌಚಾಲಯದ ಕಮೋಡ್ ಮೇಲೆ ಕುಳಿಸಿ ಟಾಯ್ಲೆಟ್ ಜೆಟ್ ಸ್ಪ್ರೇ ಬಳಸಿ ಬಾಯಿಗೆ ನೀರು ಸಿಂಪಡಿಸಿದ್ದು ಸ್ನಾನಗೃಹಗಳ ಒಳಗೆ ಲಾಕ್ ಮಾಡಿ, ಸುಮ್ಮನಿರಲು ಬೆದರಿಕೆ ಹಾಕಿದ್ದ ವಿಡಿಯೋಗಳು ವೈರಲ್ ಆಗಿತ್ತು. ಇನ್ನು ಡೇಕೇರ್ ಸೆಂಟರ್ ಕಾರ್ಯನಿರ್ವಹಿಸುತ್ತಿರುವ ಐಟಿ ಸಂಸ್ಥೆ ಕ್ಯಾಪ್‌ಜೆಮಿನಿ, ತನ್ನ ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮವು ತನ್ನ ಪ್ರಮುಖ ಆದ್ಯತೆಯಾಗಿದೆ. ನಾವು ತನಿಖಾಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಶಿಶುವಿಹಾರದಲ್ಲಿ ದಾದಿಯರಿಂದ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಘಟನೆಗಳ ಬಗ್ಗೆ ಭಾರತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದೆ. ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಈ ಸಂಬಂಧ ನೋಟಿಸ್ ಜಾರಿ ಮಾಡಿದೆ. ಎರಡು ವಾರಗಳಲ್ಲಿ ಈ ವಿಷಯದ ಬಗ್ಗೆ ವಿವರವಾದ ವರದಿ ನೀಡುವಂತೆಯೂ ಸೂಚಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com