

ಬೆಂಗಳೂರು ಬದುಕಿದರೆ ನಾವೆಲ್ಲಾ ಬದುಕುತ್ತೇವೆ. ಇಲ್ಲದಿದ್ದರೆ ಖಂಡಿತಾ ಕಷ್ಟವಾಗುತ್ತದೆ, ಬೆಂಗಳೂರು ಸುಧಾರಣೆಗೆ ನಾವು ಹಲವು ಕೆಲಸ ಮಾಡುತ್ತೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಅಧಿಕಾರಿಗಳ ಸಭೆ ನಡೆಸಿದ ಅವರು, ನಾಳೆ ಬೆಂಗಳೂರು ಉಸಿರುಗಟ್ಟಿದರೆ ಎಲ್ಲರ ಜೀವನಕ್ಕೂ ಪರಿಣಾಮವಾಗುತ್ತದೆ. ಬೆಂಗಳೂರು ಸುಧಾರಣೆಯಾಗದಿದ್ದರೆ, ಬೆಳೆಯದಿದ್ದರೆ ಎಲ್ಲರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ಬೆಂಗಳೂರು ಸುಧಾರಣೆಗೆ ನಾವು ಮಾಡುವ ಕೆಲಸ ಕೆಲವು ತಪ್ಪು ಆಗಬಹುದು, ಎಲ್ಲರೂ ಸಹಕಾರ ನೀಡಬೇಕು ಎಂದರು.