ಬೆಂಗಳೂರು: ಕಳಪೆ ಗುಣಮಟ್ಟದ ಸಂಪ್ ನಿರ್ಮಾಣ; ರೊಚ್ಚಿಗೆದ್ದ ಮನೆ ಮಾಲೀಕನಿಂದ ಗಾರೆ ಮೇಸ್ತ್ರಿ ತಮ್ಮನ ಕೊಲೆ!

ಕೊಲೆಯಾದ ವ್ಯಕ್ತಿಯನ್ನು ರವಿ(35) ಎಂದು ಗುರುತಿಸಲಾಗಿದೆ. ರವಿ ಗಾರೆ ಮೇಸ್ತ್ರಿ ಸಹೋದರನಾಗಿದ್ದು, ಮನೆ ಮಾಲೀಕ ದೇವರಾಜ್ ಹಾಗೂ ಆತನ ಮಗ ಸೇರಿದಂತೆ ನಾಲ್ವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.
House owner killed construction worker in Bengaluru
ರವಿ
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳಪೆ ಗುಣಮಟ್ಟದ ನೀರಿನ ಸಂಪ್‌ ನಿರ್ಮಾಣ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಮನೆ ಮಾಲೀಕ, ಗಾರೆ ಮೇಸ್ತ್ರಿ ತಮ್ಮನನ್ನು ಹತ್ಯೆ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಬೆಂಗಳೂರು ಉತ್ತರ ತಾಲೂಕು ಕಿತ್ತನಹಳ್ಳಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ರವಿ(35) ಎಂದು ಗುರುತಿಸಲಾಗಿದೆ. ರವಿ ಗಾರೆ ಮೇಸ್ತ್ರಿ ಸಹೋದರನಾಗಿದ್ದು, ಮನೆ ಮಾಲೀಕ ದೇವರಾಜ್ ಹಾಗೂ ಆತನ ಮಗ ಸೇರಿದಂತೆ ನಾಲ್ವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.

ಮನೆಯ ನೀರಿನ ಸಂಪಿನ ಚೇಂಬರ್ ಕವರ್ ಸರಿಯಾಗಿ ಕಟ್ಟಿಲ್ಲ ಎಂದು ನಿನ್ನೆ ರಾತ್ರಿ‌ 8:30 ಸುಮಾರಿಗೆ ಜಗಳ ಆರಂಭವಾಗಿದೆ. ಈ ವೇಳೆ ರವಿ ಮೇಲೆ ದೇವರಾಜು ಮತ್ತು ಅವರ ಗ್ಯಾಂಗ್ ಏಕಾಏಕಿ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

House owner killed construction worker in Bengaluru
ದೆಹಲಿ: ಗೆಳತಿಗೆ ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ರವಾನಿಸಿದ್ದಾರೆ. ಆರೋಪಿಗಳಾದ ದೇವರಾಜ್ ಮತ್ತು ಆತನ ಮಗ ಸೇರಿದಂತೆ ನಾಲ್ವರ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com