

ಬೆಂಗಳೂರು: ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ನಾಳೆ (ಜುಲೈ 22) ಬೆಂಗಳೂರಿನ ಹಲವು ಪ್ರದೇಶಗಳಲ್ಲಿ 12 ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತಿಳಿಸಿದೆ.
BWSSB ಪ್ರಕಟಣೆ ಪ್ರಕಾರ, ಕಾವೇರಿ ನೀರು ಸರಬರಾಜು ಯೋಜನೆ ಹಂತ-4, ಮೊದಲ ಹಂತದ ಅಡಿಯಲ್ಲಿ 1200 ಮಿ.ಮೀ. ವ್ಯಾಸದ ಪೈಪ್‌ಲೈನ್‌ನಲ್ಲಿ ಅಳವಡಿಸಲಾಗಿರುವ 200 ಮಿ.ಮೀ. ಏರ್ ವಾಲ್ವ್ ಹಾಗೂ ಸ್ಲೂಯಿಸ್ ವಾಲ್ವ್‌ಗಳಲ್ಲಿ ಉಂಟಾಗಿರುವ ಸೋರಿಕೆಯನ್ನು ಸರಿಪಡಿಸುವ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಂಪಿಂಗ್ ಸ್ಟೇಷನ್‌ಗಳ ಕಾರ್ಯಾಚರಣೆ ಸ್ಥಗಿತಗೊಳ್ಳಲಿದ್ದು, ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಿದೆ.
ಯಾವೆಲ್ಲ ಪ್ರದೇಶಗಳಿಗೆ ನೀರಿನ ಸಮಸ್ಯೆ?
ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿರುವ ಪ್ರಮುಖ ಪ್ರದೇಶಗಳು ಇಂತಿವೆ...
ರಾಜಾಜಿನಗರ
ಮಹಾಲಕ್ಷ್ಮಿ ಲೇಔಟ್
ನಂದಿನಿ ಲೇಔಟ್
ಬಸವೇಶ್ವರನಗರ
ವಿಜಯನಗರ
ನಾಗರಭಾವಿ
ಕಾಮಾಕ್ಷಿಪಾಳ್ಯ
ಯಶವಂತಪುರ
ಪೀಣ್ಯ
ದಾಸರಹಳ್ಳಿ
ಜಾಲಹಳ್ಳಿ
ಜೆ.ಪಿ.ನಗರ
ಬಿಟಿಎಂ ಲೇಔಟ್
ಎಚ್‌ಎಸ್‌ಆರ್ ಲೇಔಟ್
ಕೋರಮಂಗಲ
ಬೆಳ್ಳಂದೂರು
ಹಾಗೂ ಕಾವೇರಿ ಹಂತ-4, ಮೊದಲ ಹಂತದ ವ್ಯಾಪ್ತಿಯ ಇತರೆ ಪ್ರದೇಶಗಳು.
ನೀರು ಸಂಗ್ರಹಿಸಿಟ್ಟುಕೊಳ್ಳುವಂತೆ ಮನವಿ
ನೀರಿನ ಪೂರೈಕೆ ಸ್ಥಗಿತಗೊಳ್ಳುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಪ್ರಮಾಣದ ನೀರನ್ನು ಮುಂಚಿತವಾಗಿಯೇ ಸಂಗ್ರಹಿಸಿಕೊಂಡು, ಅಗತ್ಯ ಬಳಕೆಗೆ ಸಿದ್ಧತೆ ಮಾಡಿಕೊಳ್ಳುವಂತೆ BWSSB ಮನವಿ ಮಾಡಿದೆ.