ಡಿಕೆ ಶಿವಕುಮಾರ್ ಪ್ರಮಾಣವಚನ: 13 ಶಾಸಕರಿಗೆ ಮಂತ್ರಿ ಸ್ಥಾನ, ಯಾರಿಗೆಲ್ಲಾ ಸಚಿವಗಿರಿ? ಇಲ್ಲಿದೆ ಪಟ್ಟಿ

ಸ್ವಾಮೀಜಿ, ಫಾದರ್ ಹಾಗೂ ಮೌಲ್ವಿ ಸೇರಿದಂತೆ ಸರ್ವಧರ್ಮಗಳ 55 ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದ್ದು, ಅವರ ಸಮ್ಮುಖದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
DK Shivakumar swearing in
ಡಿಕೆ ಶಿವಕುಮಾರ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ
Updated on

ಬೆಂಗಳೂರು: ಕರ್ನಾಟಕದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದು ಡಿಕೆಶಿ ಜೊತೆಯಲ್ಲಿ 10 ಪ್ರಭಾವಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಡಿಕೆಶಿ ಪ್ರಮಾಣ ವಚನಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಸಕಲ ಸಿದ್ಧತೆ ನಡೆದಿದೆ. ವೇದಿಕೆಯಲ್ಲಿ 20 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿ, ಫಾದರ್ ಹಾಗೂ ಮೌಲ್ವಿ ಸೇರಿದಂತೆ ಸರ್ವಧರ್ಮಗಳ 55 ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದ್ದು, ಅವರ ಸಮ್ಮುಖದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ವೇಣುಗೋಪಾಲ್, ಸುರ್ಜೇವಾಲಾ ಸೇರಿದಂತೆ ಹಲವು ಗಣ್ಯರಿಗೆ ಪ್ರಮಾಣವಚನಕ್ಕೆ ಆಹ್ವಾನ ನೀಡಲಾಗಿದೆ. ಈಗಾಗಲೇ ಕೇರಳ ಸಿಎಂ ಸತೀಶನ್ ಬೆಂಗಳೂರಿಗೆ ಬಂದಿದ್ದಾರೆ. 80ರ ದಶಕದಿಂದ ಸುದೀರ್ಘ ರಾಜಕೀಯ ಜೀವನ, ರಾಜಕಾರಣ ಆಳ-ಅಗಲದ ಅನುಭವ, ಐಟಿ-ಇಡಿ ತನಿಖೆ ಹಾಗೂ ಜೈಲುವಾಸದ ನಂತರ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ಧಾರೆ.

DK Shivakumar swearing in
ಗೆಲ್ಲುವವರೆಗೂ ಮನೆಗೆ ತೆರಳದೆ ಆಟವಾಡುತ್ತಿದ್ದ 'ಛಲದಂಕ ಮಲ್ಲ': ಡಿಕೆ ಶಿವಕುಮಾರ್ ಬಾಲ್ಯದ ಬಗ್ಗೆ ದೊಡ್ಡಾಲಹಳ್ಳಿ ಗ್ರಾಮಸ್ಥರ ವಿವರಣೆ

13 ಶಾಸಕರಿಗೆ ಮಂತ್ರಿ ಹುದ್ದೆ

ಡಿ.ಕೆ. ಶಿವಕುಮಾರ್ ಜೊತೆ 13 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ್ದ ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಚಿವರ ಪಟ್ಟಿಯನ್ನು ಫೈನಲ್ ಮಾಡಿದ್ದಾರೆ.

ಸಂಜೆ ಎಐಸಿಸಿ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿದ್ದ ಕೈ ನಾಯಕರು ಪಟ್ಟಿ ಅಂತಿಮಗೊಳಿಸಿದ್ದಾರೆ. ಹೈಕಮಾಂಡ್ ಭೇಟಿ ಬಳಿಕ ಬೆಂಗಳೂರಿಗೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಆಗಮಿಸುತ್ತಿದ್ದು, ಇಂದು ಬಹುತೇಕ 10ಕ್ಕೂ ಹೆಚ್ಚು ಮಂದಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳು ಹೆಚ್ಚಾಗಿವೆ.

DK Shivakumar swearing in
18ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇಂದು ಪ್ರಮಾಣ ವಚನ: 15 ಸಚಿವರು ಸಂಪುಟ ಸೇರುವ ಸಾಧ್ಯತೆ; ಮೊದಲ ಪಟ್ಟಿಯಿಂದ ಹೆಬ್ಬಾಳ್ಕರ್ ಔಟ್?

ಸಂಭಾವ್ಯ ಸಚಿವರು

ಡಾ. ಜಿ. ಪರಮೇಶ್ವರ್, ಕೊರಟಗೆರೆ ಶಾಸಕ, ದಲಿತ ಸಮುದಾಯ

ಯು.ಟಿ. ಖಾದರ್, ಮಂಗಳೂರು ಶಾಸಕ, ಮುಸ್ಲಿ ಸಮುದಾಯ

ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್ ಶಾಸಕ,

ಕೆ.ಜೆ.ಜಾರ್ಜ್, ಸರ್ವಜ್ಞ ನಗರ, ಕ್ರಿಶ್ಚಿಯನ್ ಸಮುದಾಯ

ಪ್ರಿಯಾಂಕ್ ಖರ್ಗೆ, ಚಿತ್ತಾಪುರ ಶಾಸಕ, ದಲಿತ ಸಮುದಾಯ

ಸತೀಶ್ ಜಾರಕಿಹೊಳಿ, ಯಮಕನಮರಡಿ ಶಾಸಕ, ದಲಿತ ಸಮುದಾಯ

ಎಂ.ಬಿ.ಪಾಟೀಲ್, ಬಬಲೇಶ್ವರ ಶಾಸಕ, ಲಿಂಗಾಯತ ಸಮುದಾಯ

ಕೃಷ್ಣಬೈರೇಗೌಡ, ಬ್ಯಾಟರಾಯನಪುರ ಶಾಸಕ, ಒಕ್ಕಲಿಗ ಸಮುದಾಯ

ಯತೀಂದ್ರ ಸಿದ್ದರಾಮಯ್ಯ, ಪರಿಷತ್ ಸದಸ್ಯ, ಕುರುಬ ಸಮುದಾಯ

ಬೈರತಿ ಸುರೇಶ್, ಹೆಬ್ಬಾಳ ಶಾಸಕ, ಕುರುಬ ಸಮುದಾಯ

ಕೆ.ಎಚ್.ಮುನಿಯಪ್ಪ, ದೇವನಹಳ್ಳಿ ಶಾಸಕ, ದಲಿತ ಸಮುದಾಯ

ರೂಪಕಲಾ ಶಶೀಧರ್, ಕೆಜಿಎಫ್ ಶಾಸಕಿ, ದಲಿತ ಸಮುದಾಯ

ಅಂತೆಯೇ ಈಶ್ವರ್ ಖಂಡ್ರೆ ಮತ್ತು ಶರಣಪ್ರಕಾಶ್ ಪಾಟೀಲ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com