ಲೋಕಭವನದಲ್ಲಿ ಅಧಿಕಾರ ಹಸ್ತಾಂತರ ಪರ್ವ: ಯಾವುದೇ ಅಹಿತಕರ ಘಟನೆಯಿಲ್ಲದೆ ಸುಸೂತ್ರವಾಗಿ ಮುಕ್ತಾಯಗೊಂಡ ನೂತನ ಸಿಎಂ ಪ್ರಮಾಣವಚನ ಸಮಾರಂಭ

ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿದ್ದ ಪ್ರಯಾಣಿಕರು ಕೆ.ಆರ್. ವೃತ್ತದ ಬಳಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಕೆಲ ದೂರ ಕಾಲ್ನಡಿಗೆಯಲ್ಲೇ ತೆರಳಬೇಕಾಯಿತು.
Karnataka Governor Thaawarchand Gehlot, left, administers the oath to state CM-designate DK Shivakumar during the swearing-in ceremony.
ಪ್ರಮಾಣವಚನ ಸಮಾರಂಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
Updated on

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ಬುಧವಾರ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನೆರವೇರಿತು. ಬಿಗಿ ಭದ್ರತಾ ವ್ಯವಸ್ಥೆ, ಸಂಚಾರ ನಿಯಂತ್ರಣ ಹಾಗೂ ಜನಸಂದಣಿ ನಿರ್ವಹಣೆಯಿಂದಾಗಿ ಸಮಾರಂಭ ಯಶಸ್ವಿಯಾಗಿ ನಡೆಯಿತು.

ವಿಧಾನಸೌಧ ಸುತ್ತಮುತ್ತ ಸಂಚಾರದಲ್ಲಿ ಕೆಲ ನಿರ್ಬಂಧಗಳನ್ನು ವಿಧಿಸಲಾಗಿದ್ದರೂ, ನಗರದ ಬಹುತೇಕ ಭಾಗಗಳಲ್ಲಿ ವಾಹನ ಸಂಚಾರ ಸಾಮಾನ್ಯವಾಗಿತ್ತು. ಆದರೆ, ವಿಧಾನಸೌಧದ ಸಮೀಪದ ಖಾಸಗಿ ಕಚೇರಿಗಳಿಗೆ ತೆರಳುವ ಸಿಬ್ಬಂದಿ ಪರ್ಯಾಯ ಮಾರ್ಗಗಳನ್ನು ಬಳಸಬೇಕಾಯಿತು.

ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿದ್ದ ಪ್ರಯಾಣಿಕರು ಕೆ.ಆರ್. ವೃತ್ತದ ಬಳಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಕೆಲ ದೂರ ಕಾಲ್ನಡಿಗೆಯಲ್ಲೇ ತೆರಳಬೇಕಾಯಿತು. ಲೋಕಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಪಾಸ್ ಇಲ್ಲದೆ ಆಗಮಿಸಿದ್ದ ಸಾರ್ವಜನಿಕರು ಹಾಗೂ ಬೆಂಬಲಿಗರು ತಮ್ಮ ವಾಹನಗಳನ್ನು ದೂರದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿ ಹಲವು ಕಿಲೋಮೀಟರ್ ನಡೆದು ಕಾರ್ಯಕ್ರಮ ಸ್ಥಳ ತಲುಪಿದರು.

ಕಾರ್ಯಕ್ರಮದ ಪಾಸ್ ಇಲ್ಲದ ವಾಹನಗಳಿಗೆ ಶಿವಾಜಿನಗರ ಬಹುಮಹಡಿ ಪಾರ್ಕಿಂಗ್, ಯುಬಿ ಸಿಟಿ, ಕಂಠೀರವ ಕ್ರೀಡಾಂಗಣ, ಸರ್ಕಾರಿ ಆರ್ಟ್ಸ್ ಕಾಲೇಜು ಆವರಣ, ಪಾಲಿಕೆ ಕಚೇರಿ ಮತ್ತು ಅರಮನೆ ಮೈದಾನಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಗಣ್ಯರು ಹಾಗೂ ಆಹ್ವಾನಿತ ಅತಿಥಿಗಳಿಗಾಗಿ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ಸುಮಾರು 5.45ರ ವೇಳೆಗೆ ಡಿಕೆ ಶಿವಕುಮಾರ್ ಲೋಕಭವನದಿಂದ ವಿಧಾನಸೌಧದತ್ತ ಪ್ರಯಾಣ ಬೆಳೆಸಿದರು. ಲೋಕಭವನದಿಂದ ಜಿಪಿಒ ಜಂಕ್ಷನ್‌ವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಬೆಂಬಲಿಗರಿಗೆ ಕೈಬೀಸಿದ ಅವರು, ಬಳಿಕ ಸರ್ಕಾರಿ ವಾಹನದಲ್ಲಿ ವಿಧಾನಸೌಧ ಪ್ರವೇಶಿಸಿದರು.

Karnataka Governor Thaawarchand Gehlot, left, administers the oath to state CM-designate DK Shivakumar during the swearing-in ceremony.
DK Shivakumar and cabinet swearing-in LIVE updates | ಕರ್ನಾಟಕ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಹಾಗೂ 13 ಸಚಿವರು ಪ್ರಮಾಣವಚನ ಸ್ವೀಕಾರ!

ವಿಧಾನಸೌಧ ಪ್ರವೇಶಿಸುವ ಮೊದಲು ಮಹಾತ್ಮಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಜವಾಹರಲಾಲ್ ನೆಹರು ಅವರ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿದರು. ನಂತರ ಕೆಲ ನೂತನ ಸಚಿವರೊಂದಿಗೆ ವಾಹನದಲ್ಲಿ ವಿಧಾನಸೌಧದತ್ತ ತೆರಳಿದ ಅವರು, ಆವರಣದಲ್ಲಿರುವ ಶ್ರೀ ಅರಳಿಕಟ್ಟೆ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಲೋಕಭವನ ರಸ್ತೆ ಮತ್ತು ಜಿಪಿಒ ವೃತ್ತದ ಸುತ್ತಮುತ್ತ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತೆ ಒದಗಿಸಿತ್ತು. ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಸಾರ್ವಜನಿಕರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತು. ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಕ್ವೀನ್ಸ್ ರಸ್ತೆ ಹಾಗೂ ಲೋಕಭವನ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

ನಗರ ಪೊಲೀಸ್ ಆಯುಕ್ತ ಸೀಮತ್ ಕುಮಾರ್ ಸಿಂಗ್ ಕಳೆದ ಮೂರು ದಿನಗಳಿಂದ ಭದ್ರತೆ ಮತ್ತು ಜನಸಂದಣಿ ನಿಯಂತ್ರಣ ವ್ಯವಸ್ಥೆಗಳ ಪರಿಶೀಲನೆ ನಡೆಸಿದ್ದರು.

ಸಿಸಿಟಿವಿ ಕ್ಯಾಮೆರಾ ನಿಗಾವ್ಯವಸ್ಥೆ, ಲೈವ್ ಮಾನಿಟರಿಂಗ್, ಬ್ಯಾರಿಕೇಡಿಂಗ್ ಹಾಗೂ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದ್ದರು.

ಈ ಎಲ್ಲ ಕ್ರಮಗಳಿಂದಾಗಿ ರಾಜ್ಯದ ಹೊಸ ಸರ್ಕಾರದ ಪ್ರಮಾಣವಚನ ಸಮಾರಂಭ ಯಾವುದೇ ಅಹಿತಕರ ಘಟನೆಗಳಿಲ್ಲದೆ ಸುಸೂತ್ರವಾಗಿ ನೆರವೇರಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com