ಬೆಂಗಳೂರು: ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಭೇಟಿ, ಹರಕೆ ತೀರಿಸಿದ ಸಿಎಂ

ರಾಜ್ಯದ ಮುಖ್ಯಮಂತ್ರಿಯಾದರೆ, ಅಣ್ಣಮ್ಮದೇವಿ ಸನ್ನಿಧಾನಕ್ಕೆ ಬಂದು ಹರಕೆ ತೀರಿಸುವುದಾಗಿ ಹರಕೆ ಹೊತ್ತಿದ್ದ ಡಿಕೆಶಿ ಇಂದು ಹರಕೆ ತೀರಿಸಿದ್ದಾರೆ.
DK Shivakumar Visits Annamma Devi Temple
ಅಣ್ಣಮ್ಮ ದೇಿವಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಸಿಎಂ ಡಿಕೆ.ಶಿವಕುಮಾರ್.
Updated on: 

ಬೆಂಗಳೂರು: ಬೆಂಗಳೂರು ನಗರ ಕಾಯುವ ಅಧಿದೇವತೆ ಶ್ರೀ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಭೇಟಿ ನೀಡಿದ್ದು, ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಡಿಕೆ.ಶಿವಕುಮಾರ್ ಅವರು ಮೊದಲಿಗೆ ಅಜ್ಜಯ್ಯನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಾಕೈಂಕರ್ಯ ನರವೇರಿಸಿದ್ದರು.

ಇಂದು ನಗರ ದೇವತೆ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾದರೆ, ಅಣ್ಣಮ್ಮದೇವಿ ಸನ್ನಿಧಾನಕ್ಕೆ ಬಂದು ಹರಕೆ ತೀರಿಸುವುದಾಗಿ ಹರಕೆ ಹೊತ್ತಿದ್ದ ಡಿಕೆಶಿ ಇಂದು ಹರಕೆ ತೀರಿಸಿದ್ದಾರೆ.

ಉಪ್ಪು, ಮೊಸರು ಹಾಕಿ, ಸುಃಖ, ಶಾಂತಿ, ನೆಮ್ಮದಿ ನೀಡುವಂತೆ ಪ್ರಾರ್ಥಿಸಿದ್ದಾರೆ. ತಾಯಿ ಅಣ್ಣಮಗೆ ನಮಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಇದೇ ವೇಳೆ ಬಿಸಿಲು ಮಾರಮ್ಮನಿಗೂ ಉಪ್ಪು, ಮೊಸರು ಹಾಕಿ ನಮಿಸಿದ್ದಾರೆ.

DK Shivakumar Visits Annamma Devi Temple
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೀವನದಲ್ಲಿ ಅಜ್ಜಯ್ಯರ ಸ್ಥಾನ ಎಷ್ಟು ವಿಶೇಷ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com