ಬೆಂಗಳೂರು: ಕಸದ ತೊಟ್ಟಿಗಳಾದ ಶಂಪುರ, ಟ್ಯಾನರಿ ರಸ್ತೆ! ಎಲ್ಲೆಲ್ಲೂ ದುರ್ವಾಸನೆ..

ಕಸದ ವಾಹನ ಯಾವಾಗ ಬರುತ್ತದೆ ಎಂಬುದೇ ನಮಗೆ ತಿಳಿದಿಲ್ಲ. ಕೆಲವೊಮ್ಮೆ ತಡವಾಗಿ ಬರುತ್ತದೆ ಅಥವಾ ಮುಂದೆ ಹೋಗಿರುತ್ತದೆ. ಕಸದ ರಾಶಿ ಮಾತ್ರ ಹಾಗೆಯೇ ಇರುತ್ತದೆ ಎಂದು ಶಂಪುರ ನಿವಾಸಿಗಳಾದ ಸತೀಶ್ ಕುಮಾರ್ ಮತ್ತು ಅಕಿಬ್ ಹೇಳಿದರು.
houses on Tannery Road
ಟ್ಯಾನರಿ ರಸ್ತೆ
Updated on

ಬೆಂಗಳೂರು: ಶಂಪುರ ಅಥವಾ ಟ್ಯಾನರಿ ರಸ್ತೆಗಳಲ್ಲಿ ನಡೆದು ಹೋಗಲು ಪ್ರಯತ್ನಿಸಿದರೆ ಕಸದ ದುರ್ವಾಸನೆ ಮೂಗಿಗೆ ರಾಚುತ್ತದೆ. ಆದರೂ, ನಿವಾಸಿಗಳು ಹೊಂದಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಂತೆ ವ್ಯಾಪಾರ ಎಂದಿನಂತೆ ನಡೆಯುತ್ತಿದೆ. ಸರಿಯಾಗಿ ತ್ಯಾಜ್ಯ ವಿಲೇವಾರಿ ಇಲ್ಲದೆ ನಿವಾಸಿಗಳಲ್ಲಿ ಕಳವಳ ಹೆಚ್ಚುತ್ತಿದೆ.

ಆಟೋ ಬರುವ ಸಮಯದ ಬಗ್ಗೆ ತಿಳಿಯದೆ ಜನರು ಎಲ್ಲೆಂದರಲ್ಲಿ ಮನೆಯ ಪಕ್ಕದಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ಇದರಿಂದ ಕಸದ ತೊಟ್ಟಿಗಳಾಗಿ ಮಾರ್ಪಟ್ಟಿದೆ. ಮುಂಜಾನೆ ಮತ್ತು ಸಂಜೆ ಬೀದಿನಾಯಿಗಳು ಮತ್ತು ದನಗಳು ಹೆಚ್ಚಾಗಿ ಇಲ್ಲಿರುತ್ತವೆ. ಸೊಳ್ಳೆಗಳು, ಇಲಿಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತದೆ ಎಂದುಸ್ಥಳೀಯ ನಿವಾಸಿಗಳು ಹೇಳುತ್ತಾರೆ.

ಕಸದ ವಾಹನ ಯಾವಾಗ ಬರುತ್ತದೆ ಎಂಬುದೇ ನಮಗೆ ತಿಳಿದಿಲ್ಲ. ಕೆಲವೊಮ್ಮೆ ತಡವಾಗಿ ಬರುತ್ತದೆ ಅಥವಾ ಮುಂದೆ ಹೋಗಿರುತ್ತದೆ. ಕಸದ ರಾಶಿ ಮಾತ್ರ ಹಾಗೆಯೇ ಇರುತ್ತದೆ ಎಂದು ಶಂಪುರ ನಿವಾಸಿಗಳಾದ ಸತೀಶ್ ಕುಮಾರ್ ಮತ್ತು ಅಕಿಬ್ ಹೇಳಿದರು. ಮಳೆಗಾಲದಲ್ಲಿ ವಾಸನೆ ತುಂಬಾ ಕೆಟ್ಟದಾಗಿರುತ್ತದೆ. ಖಾಸಗಿ ಶಾಲೆಯ ಬಳಿ ಸಣ್ಣ ಒಳಚರಂಡಿ ಮಾರ್ಗಗಳನ್ನು ಸಹ ನಿರ್ಬಂಧಿಸುತ್ತದೆ ಎಂದು ಟ್ಯಾನರಿ ರಸ್ತೆಯ ಮತ್ತೊಬ್ಬ ನಿವಾಸಿ ಹೇಳಿಕೊಂಡರು.

ಹಲವಾರು ಕಿರಿದಾದ ಮಾರ್ಗಗಳು, ಖಾಲಿ ಜಾಗಗಳು ಮತ್ತು ರಸ್ತೆಬದಿಯ ಮೂಲೆಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಒಮ್ಮೆ ಒಂದೇ ಸ್ಥಳದಲ್ಲಿ ಕಸ ಸಂಗ್ರಹವಾಗಲು ಪ್ರಾರಂಭಿಸಿದರೆ, ಅದು ಕ್ರಮೇಣ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಈ ಪ್ರದೇಶದ ದೈನಂದಿನ ಪ್ರಯಾಣಿಕರು ಮತ್ತು ಅಂಗಡಿಯವರು ಸಹ ತೊಂದರೆ ಪಡುತ್ತಿದ್ದಾರೆ. ತ್ಯಾಜ್ಯಗಳಿಂದ ಓಡಾಡಲು ಜಾಗ ಇಲ್ಲದಂತಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಚ್ಚಿಹೋಗಿರುವ ಚರಂಡಿಗಳಲ್ಲಿ ಕೆಲವೊಮ್ಮೆ ಮಳೆಯ ಸಮಯದಲ್ಲಿ ಸಣ್ಣ ಪ್ರಮಾಣದ ನೀರು ನಿಲ್ಲುವುದರಿಂದ ಜನರು ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ಇನ್ನೂ ಕೆಲವು ಮಂದಿ ಹೇಳಿದರು.

houses on Tannery Road
ಬೆಂಗಳೂರಿನ ರಸ್ತೆಗುಂಡಿ, ಕಸದ ಸಮಸ್ಯೆ ಬಗ್ಗೆ ಕಿರಣ್ ಮಜುಂದಾರ್ ಶಾಗೆ ಚೀನಾ ಉದ್ಯಮಿ ಪ್ರಶ್ನೆ? ಪ್ರಿಯಾಂಕ್​ ಖರ್ಗೆ, ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ಹೀಗಿದೆ...

ರಸ್ತೆಬದಿಯ ಡಂಪಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳನ್ನು ನಾಗರಿಕರು ಒತ್ತಾಯಿಸಿದ್ದಾರೆ. ಕೆಲವು ಜನದಟ್ಟಣೆಯ ಪ್ರದೇಶಗಳಲ್ಲಿ, ವಾಹನಗಳು ಕಿರಿದಾದ ಮಾರ್ಗದಲ್ಲಿ ಹೋಗುವಾಗ ತೊಂದರೆಯನ್ನು ಎದುರಿಸುತ್ತವೆ, ಇದು ಕೆಲವೊಮ್ಮೆ ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಾರ್ಷಲ್ ಒಬ್ಬರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com