

ಸ್ವಚ್ಛತಾ ಅಭಿಯಾನದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿಯಾಗಿದ್ದು, ಮಾಸ್ಕ್, ಗ್ಲೌಸ್ ಹಾಕಿ ಕಸ ಗುಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಬಳಿಕ ತಳ್ಳುವ ತರಕಾರಿ ಗಾಡಿ ವ್ಯಾಪಾರಿಗಳ ಬಳಿ ಮಾತನಾಡಿದ ಸಚಿವರು, ಕೇಂದ್ರ ಯೋಜನೆಯಡಿ ಲೋನ್ ಸಂಬಂಧ ವಿಚಾರಿಸಿದ್ದಾರೆ. ಈ ವೇಳೆ ನಮಗೆ ಲೋನ್ ಕೊಡಿಸಿ ಎಂದು ವ್ಯಾಪಾರಿಗಳು ಸಚಿವರನ್ನು ಆಗ್ರಹಿಸಿದ ಪ್ರಸಂಗ ನಡೆದಿದೆ.
ಸತತ 12 ವರ್ಷ ದೇಶದ ಪ್ರಧಾನಿಯಾಗಿ ದಾಖಲೆ ನಿರ್ಮಿಸಿರುವ ನರೇಂದ್ರ ಮೋದಿಯವರ ಆಡಳಿತ ಹಿನ್ನೆಲೆಯಲ್ಲಿ ಬಿಜೆಪಿ ಕರ್ನಾಟಕದ ಭಾಗವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛತಾ ಅಭಿಯಾನ ಕಾರ್ಯದಲ್ಲಿ ಪಾಲ್ಗೊಂಡರು.
ಮೋದಿಯವರ 12 ವರ್ಷಗಳ ಜನಪರ ಆಡಳಿತ ಮತ್ತು ಅಭೂತಪೂರ್ವ ಸಾಧನೆಗಳನ್ನು ಸಾರ್ಥಕವಾಗಿ ಆಚರಿಸಲು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಗಾಂಧೀಜಿಯವರ ಕನಸಿನ ಸ್ವಚ್ಛ ಭಾರತ ಸಂಕಲ್ಪ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಒಂದು ಜನಾಂದೋಲನವಾಗಿ ಉಳಿಯದೆ, ಪ್ರತಿಯೊಬ್ಬ ಭಾರತೀಯನ ಜೀವನ ಪದ್ಧತಿಯಾಗಿ ಮಾರ್ಪಟ್ಟಿದೆ ಎಂದರು.
Advertisement