

ಚಿತ್ರದುರ್ಗ: ಎದೆ ಉರಿ ಕಾಣಿಸಿಕೊಂಡಿದ್ದ 4 ವರ್ಷದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.
ಮೃತ ಬಾಲಕನನ್ನು ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಅವರ ಪುತ್ರ ವೈಷ್ಣವ್ (4) ಎಂದು ಗುರುತಿಸಲಾಗಿದೆ.
ಆರಂಭದಲ್ಲಿ ವೈಷ್ಣವ್ ತನ್ನ ಪೋಷಕರಿಗೆ “ಎದೆ ಭಾಗದಲ್ಲಿ ಉರಿಯಾಗುತ್ತಿದೆ” ಎಂದು ತಿಳಿಸಿದ್ದಾನೆ. ಇದನ್ನು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಭಾವಿಸಿದ ಪೋಷಕರು ಮನೆಮದ್ದು ನೀಡಿದ್ದರು.
ಆದರೆ, ಸ್ವಲ್ಪ ಸಮಯದಲ್ಲೇ ಬಾಲಕನ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಆತಂಕಗೊಂಡ ಪೋಷಕರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಬಾಲಕ ವೈಷ್ಣವ್ ಕೊನೆಯುಸಿರೆಳೆದಿದ್ದಾನೆ.
ಮಗು ಹಠಾತ್ ಮೃತಪಟ್ಟಿರುವುದರಿಂದ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹೆತ್ತವರ ಕಣ್ಮುಂದೆಯೇ ಪುಟ್ಟ ಬಾಲಕ ಸಾವನ್ನಪ್ಪಿರುವುದು ಕುಟುಂಬ ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಉಂಟುಮಾಡಿದೆ. ವೈದ್ಯಕೀಯ ವರದಿಯ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ.
Advertisement