ವೈಶಾಕ್ ಆತ್ಮಹತ್ಯೆ ಕೇಸ್​ಗೆ ಬಿಗ್​ ಟ್ವಿಸ್ಟ್​: ನಟಿ ಕೃಷಿ ತಾಪಂಡ ಜತೆ ಅಕ್ರಮ ಸಂಬಂಧ; ಪೊಲೀಸರಿಗೆ ಪತ್ನಿ ದೂರು

ವೈಶಾಕ್ ಅವರಿಗೆ ಹೆಂಡತಿ ಮತ್ತು ಮಕ್ಕಳಿದ್ರೂ ನಟಿ ತಾಪಂಡ ಮನೆಯಲ್ಲೇ ಯಾಕಿದ್ದರು ಎನ್ನುವ ಪ್ರಶ್ನೆ ಮೂಡಿದ್ದು, ನಟಿಗೆ ಸಾಯೋದಾಗಿ ಮೆಸೇಜ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
Man found dead in actress Krishi Thapanda's Bengaluru apartment; Police launch investigation
ಮೇಘನಾ - ಕೃಷಿ ತಾಪಂಡ - ವೈಶಾಕ್
Updated on

ಬೆಂಗಳೂರು: ನಟಿ ಕೃಷಿ ತಾಪಂಡ ಅವರು ವಾಸವಿರುವ ಆರ್.ಆರ್. ನಗರದ ಎಲಿಗೇಟ್ ಅಪಾರ್ಟ್‌ಮೆಂಟ್‌ನ ಬೆಡ್​ರೂಮ್​​ನಲ್ಲಿ ಅವರ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಅವರು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ವೈಶಾಕ್ ಅವರಿಗೆ ಹೆಂಡತಿ ಮತ್ತು ಮಕ್ಕಳಿದ್ರೂ ನಟಿ ತಾಪಂಡ ಮನೆಯಲ್ಲೇ ಯಾಕಿದ್ದರು ಎನ್ನುವ ಪ್ರಶ್ನೆ ಮೂಡಿದ್ದು, ನಟಿಗೆ ಸಾಯೋದಾಗಿ ಮೆಸೇಜ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ವೈಶಾಕ್ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ನಟಿ ಜೊತೆ ಪತಿಯ ಅಕ್ರಮ ಸಂಬಂಧದ ಬಗ್ಗೆ ಉಲ್ಲೇಖಿಸಿದ್ದಾರೆ.

ವೈಶಾಕ್ ಅವರು ಪತ್ನಿಯೊಂದಿಗಿನ ವೈಮನಸ್ಸಿನಿಂದಾಗಿ ಆಗಾಗ್ಗ ನಟಿ ಕೃಷಿ ತಾಪಂಡ ಅವರ ಮನೆಗೆ ಬಂದು ಇರುತ್ತಿದ್ದರು. ನಿನ್ನೆ ಕೂಡ ಇದೇ ಕಾರಣಕ್ಕೆ ಕೃಷಿ ತಾಪಂಡ ಅವರ ಮನೆಗೆ ಬಂದಿದ್ದ ವೈಶಾಕ್, ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

Man found dead in actress Krishi Thapanda's Bengaluru apartment; Police launch investigation
ಕೃಷಿ ತಾಪಂಡ ಅಪಾರ್ಟ್ ಮೆಂಟ್ ನಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ, ನಟಿಗೆ ಅಂತಿಮ ಕರೆ!

ವೈಶಾಕ್‌ ಅವರಿಗೆ 15 ವರ್ಷಗಳ ಹಿಂದೆಯೇ ಮದುವೆ ಆಗಿದ್ದು, ಅವರಿಗೆ 14 ವರ್ಷದ ಮಗನಿದ್ದಾನೆ. ವೈಶಾಕ್ ಅವರು ಕಾರು ಆಟೋ ಮೊಬೈಲ್ ಹಾಗೂ ಗ್ಯಾರೇಜ್ ಇಟ್ಟುಕೊಂಡಿದ್ದು, ನಟಿ ಕೃಷಿ ತಾಪಂಡ ಅವರ ಮಾಜಿ ಬಾಯ್‌ ಫ್ರೆಂಡ್‌ ಎವಿಆರ್ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿರುವ ಆರೋಪದಲ್ಲಿ ಬಂಧನಕ್ಕೀಡಾಗಿದ್ದರು.

ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ ವಿಚಾರಕ್ಕೆ ವೈಶಾಕ್ ಹಾಗೂ ಪತ್ನಿ ಮಧ್ಯೆ ಆಗಾಗ್ಗ ಜಗಳ ಆಗುತ್ತಿತ್ತು ಎನ್ನಲಾಗಿದೆ. ಪತ್ನಿ ಜೊತೆ ಜಗಳ ಆದಾಗ ಕೃಷಿ ತಾಪಂಡ ಮನೆಗೆ ಬಂದು ಹೋಗ್ತಿದ್ದ ವೈಶಾಕ್, ನಿನ್ನೆ ರಾತ್ರಿ ಕೂಡ ಕೃಷಿ ತಪಂಡಾ ಮನೆಗೆ ಬಂದಿದ್ದರು. ಆದರೆ ಬೆಳಗ್ಗೆ ಅಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪತಿಯ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಮೇಘನಾ ಅವರು ಆರ್ ಆರ್ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ, ನಿನ್ನೆ ರಾತ್ರಿ 11.30ರ ಸುಮಾರಿಗೆ ಪೊಲೀಸ್ ರಿಂದ ನಮಗೆ ಮಾಹಿತಿ ಬಂತು. ಕೃಷಿ ತಾಪಂಡ ಅವರ ಫ್ಲಾಟ್ ನಂಬರ್ 403ರಲ್ಲಿ ಪತಿ ಆತ್ಮಹತ್ಯೆ ಬಗ್ಗೆ ಮಾಹಿತಿ ನೀಡಿದರು. ಮಾಹಿತಿ ಅನ್ವಯ ನಾವು ಫ್ಲಾಟ್ ಗೆ ಹೋಗಿ ನೋಡಿದಾಗ, ಕೃಷಿ ತಾಪಂಡ ಬೆಡ್​ರೂಮ್​​ನಲ್ಲಿ ಫ್ಯಾನಿಗೆ ನೇಣಿಗೆ ಶರಣಾಗಿದ್ದು, ಅಂಗಾತ ಮಲಗಿರುವ ರೀತಿಯಲ್ಲಿ ಮೃತ ದೇಹ ಕಂಡು ಬಂದಿತು ಎಂದು ಹೇಳಿದ್ದಾರೆ.

ನನ್ನ ಹಾಗೂ ನನ್ನ ಪತಿ ಮಧ್ಯೆ ಸಾಕಷ್ಟು ವಿರಸ ಇತ್ತು. ನಮ್ಮಿಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಲೆ ಇತ್ತು. ಕೇವಲ ಮೆಸೇಜ್‌ ಮೂಲಕ 14 ವರ್ಷದ ಮಗನ ಬಗ್ಗೆ ವಿಚಾರಿಸುತ್ತಿದ್ದರು. ಆದ್ರೆ ನನ್ನ ಬಗ್ಗೆ ಏನೂ ಕೇಳುತ್ತಿರಲಿಲ್ಲ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿಗೆ ನಿಜವಾದ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com