ಶಿವಮೊಗ್ಗ: ಹತ್ಯೆಯಾದ ಬಾಲಕ ಸಂಕೇತ್ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಿದ ಸಿಎಂ ಸಿದ್ದರಾಮಯ್ಯ

ಇತ್ತೀಚೆಗೆ ಸುಳೇಬೈಲು ಪ್ರದೇಶದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ವೇಳೆ ಉಂಟಾದ ಜಗಳ ಹಿಂಸಾಚಾರಕ್ಕೆ ತಿರುಗಿ, ಸ್ನೇಹಿತನ ಪರ ನಿಂತ ಸಂಕೇತ್ ಮೇಲೆ ಬಾಲಕರ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿತ್ತು.
Chief Minister Siddaramaiah hands over Rs 15 lakh compensation to the grieving parents of 15-year-old Sanketh in Shivamogga on Sunday
ಚೆಕ್ ಹಸ್ತಾಂತರಿಸಿದ ಸಿಎಂ.
Updated on

ಶಿವಮೊಗ್ಗ: ಬಾಲಕರು ನಡೆಸಿದ ಗುಂಪು ಹಲ್ಲೆಯಿಂದ ಹತ್ಯೆಗೀಡಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್‌ನ ಪಾಲಕರನ್ನು ಭಾನುವಾರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂತ್ವನ ಹೇಳಿದರು.

ಚಿಕ್ಕಮಗಳೂರು ಜಿಲ್ಲೆ ತರೀಕೆರೆಗೆ ತೆರಳಲು ನಿಲ್ದಾಣಕ್ಕೆ ಬಂದಿದ್ದ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದಿಂದ ರೂ.10 ಲಕ್ಷ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ‍್ಪ ಅವರು ವೈಯಕ್ತಿಕವಾಗಿ ಕೊಟ್ಟ ರೂ. 5 ಲಕ್ಷ ಪರಿಹಾರ ಮೊತ್ತದ ಚೆಕ್‌ ಅನ್ನು ಸಂಕೇತ್ ತಂದೆ ಶಿವಕುಮಾರ್‌ಗೆ ವಿತರಿಸಿದರು.

ಇತ್ತೀಚೆಗೆ ಸುಳೇಬೈಲು ಪ್ರದೇಶದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ವೇಳೆ ಉಂಟಾದ ಜಗಳ ಹಿಂಸಾಚಾರಕ್ಕೆ ತಿರುಗಿ, ಸ್ನೇಹಿತನ ಪರ ನಿಂತ ಸಂಕೇತ್ ಮೇಲೆ ಬಾಲಕರ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿತ್ತು.

ದುಃಖಿತ ಕುಟುಂಬಕ್ಕೆ ಸಾಂತ್ವನ ಹೇಳಿದ ಮುಖ್ಯಮಂತ್ರಿ, ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

Chief Minister Siddaramaiah hands over Rs 15 lakh compensation to the grieving parents of 15-year-old Sanketh in Shivamogga on Sunday
ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಹತ್ಯೆ: ಸಹಪಾಠಿಗಳ ಜಗಳ ಬಿಡಿಸಲು ಹೋಗಿ ಹೆಣವಾದ ಬಾಲಕ

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com