ಬೆಂಗಳೂರು: 3 ದಿನದ ಹಿಂದೆ ಮಾಡಿದ್ದ ಸಾಂಬಾರ್ ಬಿಸಿ ಮಾಡಿ ಬಡಿಸಿದ್ದಕ್ಕೆ ಜಗಳ; ಕೀಟನಾಶಕ ಸೇವಿಸಿ ಪತ್ನಿ ಆತ್ಮಹತ್ಯೆ!

ಬೆಂಗಳೂರಿನ 27 ವರ್ಷದ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಗುರುವಾರ ತನ್ನ ಪತಿಯೊಂದಿಗೆ ನಡೆದ ಜಗಳದ ನಂತರ ಕೀಟನಾಶಕ ಸೇವಿಸಿದ್ದಾಳೆ ಎಂದು ಆರೋಪಿಸಲಾಗಿದೆ.
Kavya
ಕಾವ್ಯಾ (ಮೃತ ಮಹಿಳೆ)
Updated on

ಬೆಂಗಳೂರು: ಮೂರು ದಿನಗಳ ಹಿಂದೆ ಮಾಡಿದ್ದ ಸಾಂಬಾರ್ ಅನ್ನು ಪದೇ ಪದೇ ಬಿಸಿ ಮಾಡಿ ಬಡಿಸುವ ಮಾತಿಗೆ ಶುರುವಾಗ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರಿನ 27 ವರ್ಷದ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಗುರುವಾರ ತನ್ನ ಪತಿಯೊಂದಿಗೆ ನಡೆದ ಜಗಳದ ನಂತರ ಕೀಟನಾಶಕ ಸೇವಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಕಾವ್ಯ ಐದು ವರ್ಷಗಳ ಹಿಂದೆ ರಂಗಸ್ವಾಮಿ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಮಗುವಿದೆ. ಮೂರು ದಿನಗಳ ಹಿಂದೆ ತಯಾರಿಸಿದ ಅದೇ ಸಾಂಬಾರ್ ಅನ್ನು ಮತ್ತೆ ಬಿಸಿ ಮಾಡಿ ಬಡಿಸಿದ ನಂತರ ದಂಪತಿಗಳ ಮಧ್ಯೆ ಜಗಳ ನಡೆದಿದೆ. ಚರ್ಚೆಯು ತೀವ್ರ ವಾಗ್ವಾದಕ್ಕೆ ತಿರುಗಿತು ಎಂದು ವರದಿಯಾಗಿದೆ. ಈ ಸಮಯದಲ್ಲಿ ಪತಿ ಅವಳನ್ನು ನಿಂದಿಸಿ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಘರ್ಷಣೆಯ ನಂತರ, ಕಾವ್ಯ ಕೃಷಿ ಬಳಕೆಗಾಗಿ ಇರಿಸಲಾಗಿದ್ದ ಕೀಟನಾಶಕವನ್ನು ಸೇವಿಸಿದ್ದಾಳೆ. ವಾಂತಿ ಮಾಡಲು ಪ್ರಾರಂಭಿಸಿದಾಗ ಅವಳು ಅಸ್ವಸ್ಥಳಾಗಿರುವುದನ್ನು ಕುಟುಂಬ ಸದಸ್ಯರು ಗಮನಿಸಿದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಕೆ ಅಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

Kavya
ಜಾತಿ ಕಾರಣಕ್ಕೆ ಮದುವೆಗೆ ನಿರಾಕರಿಸಿದ ಪ್ರಿಯಕರ: ಮನನೊಂದು ಯುವತಿ ಆತ್ಮಹತ್ಯೆ

ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com