'ಹಿಂದೂ ಯುವಕನ ಕೈ ಏಕೆ ಹಿಡಿದುಕೊಂಡಿದ್ದೀಯಾ, ಬುರ್ಖಾ ಧರಿಸಬೇಡ': ಬೆಂಗಳೂರಿನಲ್ಲಿ ನೈತಿಕ ಪೊಲೀಸ್​ಗಿರಿ ಕೃತ್ಯ; Video

ಯುವತಿ ತನ್ನ ಹಿಂದೂ ಸ್ನೇಹಿತನೊಂದಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಯುವಕರ ಗುಂಪೊಂದು ಅವರನ್ನು ತಡೆದು ಪ್ರಶ್ನಿಸಿ, ಅವರ ವೈಯಕ್ತಿಕ ಸಂಬಂಧದ ಬಗ್ಗೆ ವಿಚಾರಣೆ ನಡೆಸಿದ್ದಾರೆಂದು ಹೇಳಲಾಗಿದೆ.
Muslim girl
ಯುವತಿಗೆ ಕಿರುಕುಳ ನೀಡುತ್ತಿರುವುದು.
Updated on

ಬೆಂಗಳೂರು: ನಗರದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ನಡೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಹಿಂದೂ ಯುವಕನೊಂದಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮುಸ್ಲಿಂ ಯುವತಿಗೆ ಯುವಕರ ಗುಂಪೊಂದು ಪ್ರಶ್ನೆ ಮಾಡಿ ಕಿರುಕುಳ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

ಯುವತಿ ತನ್ನ ಹಿಂದೂ ಸ್ನೇಹಿತನೊಂದಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಯುವಕರ ಗುಂಪೊಂದು ಅವರನ್ನು ತಡೆದು ಪ್ರಶ್ನಿಸಿ, ಅವರ ವೈಯಕ್ತಿಕ ಸಂಬಂಧದ ಬಗ್ಗೆ ವಿಚಾರಣೆ ನಡೆಸಿದ್ದಾರೆಂದು ಹೇಳಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರು ಯುವಕ ಹಾಗೂ ಯುವತಿಯನ್ನು ತಡೆದಿದ್ದು, ನೀವಿಬ್ಬರು ಇಲ್ಲಿ ಏನು ಮಾಡುತ್ತಿದ್ದೀರಾ?... “ಅವನು ಹಿಂದೂ, ನೀನು ಮುಸ್ಲಿಂ… ಅವನ ಜೊತೆ ಏಕೆ ಇದ್ದೀಯ? ಎಂದು ಯುವತಿಯನ್ನು ಪ್ರಶ್ನೆ ಮಾಡಿರುವುದು ಕಂಡು ಬಂದಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಮತ್ತು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೈತಿಕ ಪೊಲೀಸ್ ಗಿರಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕರು ಈ ರೀತಿಯ ನಡೆಗಳನ್ನು ಖಂಡಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ಇತರರ ವೈಯಕ್ತಿಕ ಜೀವನ ಅಥವಾ ಸ್ನೇಹಗಳನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಹೇಳಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬರೊಂದಿಗೆ ಒಬ್ಬರು ಮಾತನಾಡುವುದು ಅಥವಾ ಸಮಯ ಕಳೆಯುವುದು ಅವರ ವೈಯಕ್ತಿಕ ಸ್ವಾತಂತ್ರ್ಯದ ಭಾಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಧರ್ಮ ಹಾಗೂ ವೈಯಕ್ತಿಕ ಹಿನ್ನೆಲೆಯಲ್ಲಿ ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Muslim girl
ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ: ಮಗನನ್ನೇ ಅಪಹರಿಸಿದ ತಂದೆ; ಅಜ್ಜ-ಅಜ್ಜಿಯರಿಂದ ಆರು ತಿಂಗಳ ಮಗು ರಕ್ಷಣೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com