ಯುಗಾದಿ, ರಂಜಾನ್ ರಜೆ: ವಿಶೇಷ ರೈಲು ಸೇವೆ, ವೇಳಾಪಟ್ಟಿ ಹೀಗಿದೆ...

ರೈಲು ಸಂಖ್ಯೆ 06503 ನಿನ್ನೆ ಸಂಜೆ 7 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರಿನಿಂದ ಹೊರಟು, ಇಂದು ಬೆಳಗ್ಗೆ 7.35ಕ್ಕೆ ಬೆಳಗಾವಿ ತಲುಪಿದೆ.
South western railway
ನೈರುತ್ಯ ರೈಲ್ವೆ ವಿಶೇಷ ರೈಲು ಸೇವೆ
Updated on

ಬೆಂಗಳೂರು: ಯುಗಾದಿ ಹಾಗೂ ರಂಜಾನ್ ಹಬ್ಬದ ಸಾಲು ಸಾಲು ರಜೆಗಳನ್ನು ಮುಗಿಸಿಕೊಂಡು ತಮ್ಮೂರಿಗೆ ಮರಳುವವರಿಗೆ ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ ಒದಗಿಸಲಾಗುತ್ತಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯಪುರ, ಹೋಸಪೇಟೆ ಹಾಗೂ ಗೋವಾ (ಮಡಗಾಂವ್) ಮಾರ್ಗಗಳಿಗೆ ಈ ವಿಶೇಷ ರೈಲುಗಳು ಸಂಚರಿಸುತ್ತಿವೆ. ವಿಶೇಷ ರೈಲುಗಳ ವೇಳಾಪಟ್ಟಿ, ಎಲ್ಲೆಲ್ಲಿ ನಿಲುಗಡೆ ಹೊಂದಿವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರು ಬೆಳಗಾವಿ ವಿಶೇಷ ರೈಲು

ರೈಲು ಸಂಖ್ಯೆ 06503 ನಿನ್ನೆ ಸಂಜೆ 7 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರಿನಿಂದ ಹೊರಟು, ಇಂದು ಬೆಳಗ್ಗೆ 7.35ಕ್ಕೆ ಬೆಳಗಾವಿ ತಲುಪಿದೆ.

ರಿಟರ್ನ್ ರೈಲು ಸಂಖ್ಯೆ 06504 ಮಾರ್ಚ್ 22ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಮಾರ್ಚ್ 23ರಂದು ಬೆಳಿಗ್ಗೆ 5ಕ್ಕೆ ಬೆಂಗಳೂರು ತಲುಪಲಿದೆ.

ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೊಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಬೆಂಗಳೂರು ವಿಜಯಪುರ ವಿಶೇಷ ರೈಲು

ರೈಲು ಸಂಖ್ಯೆ 06277 ನಿನ್ನೆ ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಟು, ಇಂದು ಬೆಳಗ್ಗೆ 9.45ಕ್ಕೆ ವಿಜಯಪುರ ತಲುಪಿದೆ.

ರಿಟರ್ನ್ ರೈಲು ಸಂಖ್ಯೆ 06278 ಮಾರ್ಚ್ 22ರಂದು ಮಧ್ಯಾಹ್ನ 1.30ಕ್ಕೆ ವಿಜಯಪುರದಿಂದ ಹೊರಟು, ಮಾರ್ಚ್ 23ರಂದು ರಾತ್ರಿ 12.30ಕ್ಕೆ ಯಶವಂತಪುರ ತಲುಪಲಿದೆ.

ಈ ರೈಲು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

South western railway
ನಾಡಿನೆಲ್ಲೆಡೆ ಯುಗಾದಿ ಸಂಭ್ರಮ: ಪೂಜೆ, ವ್ಯಾಪಾರ ಭರಾಟೆ ಜೋರು

ಹುಬ್ಬಳ್ಳಿ-ಯಶವಂತಪುರ ವಿಶೇಷ ರೈಲು

ರೈಲು ಸಂಖ್ಯೆ 07379 ನಿನ್ನೆ ಮಾರ್ಚ್ 18ರಂದು ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿಯಿಂದ ಹೊರಟು, ಅದೇ ದಿನ ರಾತ್ರಿ 8.15ಕ್ಕೆ ಯಶವಂತಪುರ ತಲುಪಿದೆ. ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಬೆಂಗಳೂರು ಗೋವಾ (ಮಡಗಾಂವ್) ವಿಶೇಷ ರೈಲು

ರೈಲು ಸಂಖ್ಯೆ 06267 ಮಾರ್ಚ್ 18ರಂದು ಮಧ್ಯಾಹ್ನ 12ಕ್ಕೆ ಯಶವಂತಪುರದಿಂದ ಹೊರಟು, ಇಂದು ಬೆಳಗ್ಗೆ 6.45ಕ್ಕೆ ಮಡಗಾಂವ್ ತಲುಪಿದೆ.

ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮಂಗಳೂರು ಸಮೀಪದ ಹಲವಾರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ರಿಟರ್ನ್ ರೈಲು ಸಂಖ್ಯೆ 06268 ಮಾರ್ಚ್ 19ರಂದು ಬೆಳಿಗ್ಗೆ 11ಕ್ಕೆ ಮಡಗಾಂವ್‌ನಿಂದ ಹೊರಟು, ನಾಳೆ ಬೆಳಗ್ಗೆ 5.20ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ತಲುಪಲಿದೆ. ಈ ರೈಲು SMVT ಬೆಂಗಳೂರಲ್ಲಿಯೂ ನಿಲುಗಡೆ ಹೊಂದಿದೆ.

South western railway
ಬೆಂಗಳೂರಿನಿಂದ ಮುಂಬೈಗೆ ಏಕಮುಖ ವಿಶೇಷ ರೈಲು ಸಂಚಾರ: ಇದು ಎಲ್ಲೆಲ್ಲಿ ನಿಲುಗಡೆಯಾಗಲಿದೆ?

ಬೆಂಗಳೂರು ಹೋಸಪೇಟೆ ವಿಶೇಷ ರೈಲು

ರೈಲು ಸಂಖ್ಯೆ 06533 ಮಾರ್ಚ್ 18ರಂದು ಸಂಜೆ 6.15ಕ್ಕೆ ಯಶವಂತಪುರದಿಂದ ಹೊರಟು, ಇಂದು ಮಧ್ಯಾಹ್ನ 4ಕ್ಕೆ ಹೊಸಪೇಟೆ ತಲುಪಲಿದೆ. ರಿಟರ್ನ್ ರೈಲು ಸಂಖ್ಯೆ 06534 ಇಂದು ಬೆಳಗ್ಗೆ 9ಕ್ಕೆ ಹೊಸಪೇಟೆಯಿಂದ ಹೊರಟಿದ್ದು, ಇಂದು ಸಂಜೆ 7.20ಕ್ಕೆ ಯಶವಂತಪುರ ತಲುಪಲಿದೆ.

ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕ್ಯಾಂಟೋನ್ಮೆಂಟ್ ಮತ್ತು ತೋರಣಗಲ್ಲು ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆ ಇರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com