Luxury Lamborghini car stunts at Anil Kumble Circle
ಅಪಾಯಕಾರಿ ಡ್ರಿಫ್ಟಿಂಗ್ ಮಾಡಿದ ಲ್ಯಾಂಬೋರ್ಗಿನಿ ಕಾರು

ಬೆಂಗಳೂರು: ಮಧ್ಯರಾತ್ರಿ ಲ್ಯಾಂಬೋರ್ಗಿನಿ ಕಾರು ಚಾಲಕನ ಹುಚ್ಚಾಟ, FIR ದಾಖಲು..; RC ಕ್ಯಾನ್ಸಲ್‌ಗೆ ಪೊಲೀಸರ ನಿರ್ಧಾರ! Video

ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಚಾಲಕ ಅಪಾಯಕಾರಿ ಡ್ರಿಫ್ಟಿಂಗ್ ಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published on

ಬೆಂಗಳೂರು: ಬೆಂಗಳೂರಿನಲ್ಲಿ ಮಧ್ಯರಾತ್ರಿ ನಡು ರಸ್ತೆಯಲ್ಲಿ ಡ್ರಿಫ್ಟಿಂಗ್ ಮಾಡಿದ ಆರೋಪದ ಮೇರೆಗೆ ದುಬಾರಿ ಲ್ಯಾಂಬೋರ್ಗಿನಿ ಕಾರು ಮತ್ತು ಅದರ ಚಾಲಕನ ವಿರುದ್ಧ ಇದೀಗ ಪೊಲೀಸ್ ಕೇಸ್ ದಾಖಲಾಗಿದೆ.

ಹೌದು... ನಗರದ ಪ್ರತಿಷ್ಛಿತ ಅನಿಲ್ ಕುಂಬ್ಳೆ ವೃತ್ತದಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಚಾಲಕ ಅಪಾಯಕಾರಿ ಡ್ರಿಫ್ಟಿಂಗ್ ಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನ ಅನಿಲ್ ಕುಂಬ್ಳೆ ವೃತ್ತದಲ್ಲಿ ತಡರಾತ್ರಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಪದೇ ಪದೇ ಡ್ರಿಫ್ಟಿಂಗ್ ಸಾಹಸಗಳನ್ನು ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ಕೃತ್ಯವು ಸುರಕ್ಷತಾ ಕಳವಳವನ್ನು ಹುಟ್ಟುಹಾಕುತ್ತದೆ. ಡ್ರಿಫ್ಟಿಂಗ್ ಬಳಿಕ ಲ್ಯಾಂಬೋರ್ಗಿನಿ ಚಾಲಕ ಅತಿ ವೇಗದಲ್ಲಿ ಪರಾರಿಯಾಗಿದ್ದು, ಕಬ್ಬನ್ ಪಾರ್ಕ್ ಸಂಚಾರ ಠಾಣೆ ಮಿತಿಯಲ್ಲಿ ಈ ಘಟನೆ ನಡೆದಿದೆ.

Luxury Lamborghini car stunts at Anil Kumble Circle
ಆಂಧ್ರ: ಗೋದಾವರಿ ನದಿಯಲ್ಲಿ ಮುಳುಗಿ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು!

ಆಗಿದ್ದೇನು?

ಇಂದು ಬೆಳಗಿನ ಜಾವ ಸುಮಾರು 2 ರಿಂದ 3 ಗಂಟೆಯ ಸಮಯದಲ್ಲಿ, KA05NR0009 ನೋಂದಣಿ ಸಂಖ್ಯೆಯ ಲ್ಯಾಂಬೋರ್ಗಿನಿ ಕಾರು ಚಾಲಕ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಸಾರ್ವಜನಿಕರ ಓಡಾಟದ ನಡುವೆಯೇ ಎರಡು-ಮೂರು ಬಾರಿ ಕಾರನ್ನು ರಸ್ತೆಯಲ್ಲೇ ಗಿರಗಿರನೆ ತಿರುಗಿಸಿ (ಡ್ರಿಫ್ಟಿಂಗ್) ಅಪಾಯಕಾರಿ ಸ್ಟಂಟ್ ಮಾಡಿದ್ದಾನೆ.

ಸ್ಟಂಟ್ ಮಾಡಿದ ಬಳಿಕ ಚಾಲಕ ಅತೀ ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಸೋಶೀಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಎಫ್‌ಐಆರ್‌ ದಾಖಲು

ಈ ಘಟನೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಜಾಗರೂಕತೆ ಮತ್ತು ಅಪಾಯಕಾರಿ ಚಾಲನೆಯ ಮೂಲಕ ಸಾರ್ವಜನಿಕರ ಜೀವಕ್ಕೆ ತೊಂದರೆ ನೀಡಿದ ಆರೋಪದಡಿ ಕಾರು ಮಾಲೀಕನ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

ಆರ್ ಸಿ ರದ್ದು

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗದ ಸಂಚಾರ ಪ್ರಭಾರ ಡಿಸಿಪಿ ಸಾಹಿಲ್ ಬಾಗ್ಲಾ ಅವರು, 'ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಡ್ರಿಫ್ಟಿಂಗ್ ಮಾಡಿರುವುದು ರೆಕಾರ್ಡ್ ಆಗಿದೆ. ಕಾರಿನ ಮಾಲೀಕ ಯಾರು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಬೆಂಗಳೂರಿನ ರಸ್ತೆಗಳಲ್ಲಿ ಈ ರೀತಿ ಸ್ಟಂಟ್ ಮಾಡಲು ಯಾರಿಗೂ ಅವಕಾಶವಿಲ್ಲ. ಇದು ಕಾನೂನುಬಾಹಿರ ಮತ್ತು ಅಪಾಯಕಾರಿ. ಆರೋಪಿಗಳನ್ನು ಪತ್ತೆ ಹಚ್ಚಿ ಕೇವಲ ದಂಡ ಮಾತ್ರವಲ್ಲದೆ, ಕಾರಿನ ಆರ್.ಸಿ (RC - Registration Certificate) ಕ್ಯಾನ್ಸಲ್ ಮಾಡಲು ಶಿಫಾರಸು ಮಾಡುತ್ತೇವೆ," ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಸುಳ್ಳು ನಂಬರ್ ಪ್ಲೇಟ್?

ಹಲವು ವೆಬ್‌ಸೈಟ್‌ಗಳಲ್ಲಿ, ಬೆಂಗಳೂರು ಟ್ರಾಫಿಕ್‌ ಪೊಲೀಸರ ವೆಬ್‌ಸೈಟ್‌ನಲ್ಲಿ ಕಾರ್ನ್ ನೋಂದಣಿ ಸಂಖ್ಯೆ ಹಾಕಿ ಪರಿಶೀಲಿಸಿದ್ದು, ಎಲ್ಲಿಯೂ ಅದರ ಮಾಲೀಕರು ಯಾರು ಅನ್ನೋದ ಮಾಹಿತಿ ಸಿಕ್ಕಿಲ್ಲ. ಇದರ ನಡುವೆ ಕಾರ್‌ ಕರ್ನಾಟಕದಲ್ಲಿ ನೋಂದಣಿ ಆಗಿರುವುದೇ ಅನುಮಾನ. ಸುಳ್ಳು ನಂಬರ್‌ ಪ್ಲೇಟ್‌ ಹಾಕಿಕೊಂಡು ಓಡಾಡುತ್ತಿರಬಹುದು ಎಂದು ಅಂದಾಜಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com