ಆಟೋ ಚಾಲನೆ ವೇಳೆ Reels ನೋಡುತ್ತಿದ್ದ ಚಾಲಕ: ಸ್ವಲ್ಪದರಲ್ಲೆ ತಪ್ಪಿದ ಭಾರಿ ಅನಾಹುತ! Video ಮಾಡಿದ ಮಹಿಳೆ

ಆಟೋ ಚಾಲಕನ ಈ ಅಜಾಗರೂಕತೆಯಿಂದಾಗಿ ಟ್ರಕ್‌ಗೆ ಡಿಕ್ಕಿ ಹೊಡೆಯುವುದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರು ಈ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
Bengaluru Auto Driver Caught Scrolling Reels
ರೀಲ್ಸ್ ನೋಡುತ್ತಾ ಆಟೋ ಚಾಲನೆ ಮಾಡಿದ ಚಾಲಕ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಡ್ರೈವಿಂಗ್ ಮಾಡುವಾಗ ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಿದ್ದ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಹೌದು.. ಆಟೋ ಚಾಲಕನ ಈ ಅಜಾಗರೂಕತೆಯಿಂದಾಗಿ ಟ್ರಕ್‌ಗೆ ಡಿಕ್ಕಿ ಹೊಡೆಯುವುದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರು ಈ ವಿಡಿಯೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿರುವ ಮಹಿಳೆ, 'ಆಟೋ ಚಾಲಕ ಡ್ರೈವಿಂಗ್ ಮಾಡುವಾಗ ಒಂದೇ ಸಮನೆ ಮೊಬೈಲ್‌ನಲ್ಲಿ ರೀಲ್ಸ್ ಮತ್ತು ಇತರ ವಿಡಿಯೋಗಳನ್ನು ನೋಡುತ್ತಿದ್ದ' ಎಂದು ಹೇಳಿದ್ದಾರೆ.

Bengaluru Auto Driver Caught Scrolling Reels
'ಜೀವ ಬಾಯಿಗೆ ಬಂದಿತ್ತು': ಡಿ.ಕೆ ಶಿವಕುಮಾರ್, ರೇವಣ್ಣ ಪ್ರಯಾಣಿಸುತ್ತಿದ್ದ ವಿಮಾನ ಆಗಸದಲ್ಲೇ ಗಿರಕಿ; ಕೆಲಕಾಲ ಆತಂಕ! ಆಗಿದ್ದೇನು?

'ನಾನು ಮೊನ್ನೆ ಆಟೋದಲ್ಲಿ ಹೋಗುತ್ತಿದ್ದೆ. ಚಾಲಕ ಡ್ರೈವಿಂಗ್ ಮಾಡುವಾಗ ಸತತವಾಗಿ ಶಾರ್ಟ್ ವಿಡಿಯೋಗಳನ್ನು ನೋಡುತ್ತಿದ್ದ. ಸುಮ್ಮನೆ ಆಗಾಗ ನೋಡುವುದಲ್ಲ, ಆತ ಸಂಪೂರ್ಣವಾಗಿ ಮೊಬೈಲ್‌ನಲ್ಲೇ ಮುಳುಗಿಹೋಗಿದ್ದ. ರಸ್ತೆಯ ಕಡೆಗೆ ಆತನ ಗಮನವೇ ಇರಲಿಲ್ಲ.

ಮುಖ್ಯ ರಸ್ತೆಗೆ ಬಂದರೂ ಚಾಲಕನಿಗೆ ಯಾವುದೇ ಚಿಂತೆ ಇರಲಿಲ್ಲ. ಆತ ರಸ್ತೆ ಮತ್ತು ಎದುರಿನಿಂದ ಬರುವ ವಾಹನಗಳ ಕಡೆ ಗಮನ ಕೊಡುವ ಬದಲು, ಮೊಬೈಲ್ ಸ್ಕ್ರೀನ್‌ ನೋಡುತ್ತಲೇ ಆಟೋ ಓಡಿಸುತ್ತಿದ್ದ ಎಂದು ತಮಗಾದ ಭಯಾನಕ ಅನುಭವವನ್ನುಬಿಚ್ಚಿಟ್ಟಿದ್ದಾರೆ.

ಅಂತೆಯೇ ಒಂದು ಹಂತದಲ್ಲಿ, ಆಟೋದ ಮುಂದಿದ್ದ ಟ್ರಕ್ ಒಂದು ರಿವರ್ಸ್ ಬರಲು ಶುರುಮಾಡಿತು. ಇದನ್ನು ಚಾಲಕ ಗಮನಿಸಲೇ ಇಲ್ಲ. ನಾನು 'ಅಣ್ಣಾ, ಮುಂದೆ ನೋಡಿ' ಎಂದು ಕಿರುಚಿದಾಗ, ಆತ ಕೊನೆ ಕ್ಷಣದಲ್ಲಿ ಬ್ರೇಕ್ ಹಾಕಿದ.

ನಾನು ಆತನಿಗೆ ಸಮಾಧಾನದಿಂದ, 'ಡ್ರೈವಿಂಗ್ ಮಾಡುವಾಗ ವಿಡಿಯೋ ನೋಡಬೇಡಿ. ನನ್ನ ಜೊತೆ ಇರುವಾಗ ಮಾತ್ರವಲ್ಲ, ನೀವು ಒಬ್ಬರೇ ಇರುವಾಗಲೂ ಹೀಗೆ ಮಾಡಬೇಡಿ' ಎಂದು ಹೇಳಿದೆ. ಅದಕ್ಕೆ ಆತ ಒಪ್ಪಿಕೊಂಡ. ಆದರೆ, 5 ನಿಮಿಷದ ನಂತರ ಮತ್ತೆ ಅದೇ ಚಾಳಿ ಮುಂದುವರಿಸಿದ' ಎಂದು ಮಹಿಳೆ ವಿವರಿಸಿದ್ದಾರೆ.

ಚಾಲಕನ ಈ ನಿರ್ಲಕ್ಷ್ಯತ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಚಾಲಕ ಪರವಾನಗಿ ರದ್ದು ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com