'ನೇಹಾ ಹಿರೇಮಠ್ ಗೆ ಆದ ಗತಿಯೇ ನಿನಗೂ ಬರುತ್ತದೆ': ಜೈಲಿನಿಂದಲೇ ಅಪ್ರಾಪ್ತೆಗೆ ವಿಡಿಯೋ ಕರೆ ಮೂಲಕ ಬೆದರಿಕೆ ಹಾಕಿದ POCSO ಆರೋಪಿ

ಆರೋಪಿಯು ಬಾಲಕಿಗೆ ಬೆದರಿಕೆ ಹಾಕುತ್ತಾ, ನ್ಯಾಯಾಲಯದಲ್ಲಿ ತನ್ನ ಪರವಾಗಿ ಸಾಕ್ಷಿ ಹೇಳಿಲು ಒತ್ತಾಯಿಸಿದ್ದಾನೆ ಎಂದು ವರದಿಯಾಗಿದೆ.
'ನೇಹಾ ಹಿರೇಮಠ್ ಗೆ ಆದ ಗತಿಯೇ ನಿನಗೂ ಬರುತ್ತದೆ': ಜೈಲಿನಿಂದಲೇ ಅಪ್ರಾಪ್ತೆಗೆ ವಿಡಿಯೋ ಕರೆ ಮೂಲಕ ಬೆದರಿಕೆ ಹಾಕಿದ POCSO ಆರೋಪಿ
Updated on

ಧಾರಾವಾಡ: ಜೈಲುಗಳಲ್ಲಿ ಕೈದಿಗಳು ಐಶಾರಾಮಿ ಜೀವನ ನಡೆಸುತ್ತಿರುವ ಕುರಿತು ವ್ಯಾಪಕ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಇದೀಗ ಪೋಕ್ಸೋ ಪ್ರಕರಣ ಆರೋಪಿ ಜೈಲಿನಿಂದಲೇ ಅಪ್ರಾಪ್ತ ಸಂತ್ರಸ್ತೆಗೆ ವಿಡಿಯೋ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.

ಹೌದು.. ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಪೋಕ್ಸೊ ಪ್ರಕರಣದ ಫರ್ವೇಜ್ ಎಂಬ ಆರೋಪಿ ಜೈಲಿನಿಂದಲೇ ಅಪ್ರಾಪ್ತ ಬಾಲಕಿಗೆ ವಿಡಿಯೋ ಕರೆ ಮಾಡಿ ನಿರಂತರ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.

ಈ ಆರೋಪಿಯು ಬಾಲಕಿಗೆ ಬೆದರಿಕೆ ಹಾಕುತ್ತಾ, ನ್ಯಾಯಾಲಯದಲ್ಲಿ ತನ್ನ ಪರವಾಗಿ ಸಾಕ್ಷಿ ಹೇಳಿಲು ಒತ್ತಾಯಿಸಿದ್ದಾನೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ಆರೋಪಿಯು ತನ್ನ ಕೈ ಮೇಲೆ ಸಂತ್ರಸ್ತೆಯ ಹೆಸರನ್ನು ಬರೆದುಕೊಂಡು ವಿಡಿಯೋ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

'ನೇಹಾ ಹಿರೇಮಠ್ ಗೆ ಆದ ಗತಿಯೇ ನಿನಗೂ ಬರುತ್ತದೆ': ಜೈಲಿನಿಂದಲೇ ಅಪ್ರಾಪ್ತೆಗೆ ವಿಡಿಯೋ ಕರೆ ಮೂಲಕ ಬೆದರಿಕೆ ಹಾಕಿದ POCSO ಆರೋಪಿ
Road rage in Bengaluru: ಅಡ್ಡ ಬಂದಿದ್ದೂ ಅಲ್ಲದೆ ಕಾರು ಚಾಲಕನ ಮೇಲೆಯೇ ಆಟೋ ಚಾಲಕ ಆಟಾಟೋಪ; Video ವೈರಲ್

ನೇಹಾ ಹಿರೇಮಠ್ ಗೆ ಆದ ಗತಿಯೇ ನಿನಗೂ..

ಅಂತೆಯೇ ಒಂದು ವೇಳೆ ವಿಡಿಯೋ ಕಾಲ್ ಮಾಡಿದಾಗ ರಿಸೀವ್ ಮಾಡದೇ ಇದ್ದರೆ ಜೀವ ಬೆದರಿಕೆ ಹಾಕಿದ್ದಾನೆ. ನೇಹಾ ಹಿರೇಮಠ್ ಗೆ ಆದ ಗತಿಯೇ ನಿನಗೂ ಆಗುತ್ತದೆ ಎಂದು ಹೇಳಿದ್ದಾನೆ. ಜೊತೆಗೆ ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಅಧಿಕಾರಿಗಳ ಕೈವಾಡ

ಇನ್ನು ಈ ಘಟನೆಯು ಜೈಲುಗಳಲ್ಲಿ ಮೊಬೈಲ್ ಫೋನ್‌ಗಳ ಸುಲಭ ಲಭ್ಯತೆ ಮತ್ತು ಬಳಕೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸ್ ಅಧಿಕಾರಿಗಳು ಜೈಲುಗಳಲ್ಲಿ ಮೊಬೈಲ್‌ಗಳ ಬಳಕೆಗೆ ಅವಕಾಶವಿಲ್ಲ ಎಂದು ಪದೇ ಪದೇ ಹೇಳುತ್ತಿರುತ್ತಾರೆ.

ಆದರೆ, ಈ ಪ್ರಕರಣವು ಇದಕ್ಕೆ ವ್ಯತಿರಿಕ್ತವಾದ ಚಿತ್ರಣವನ್ನು ನೀಡಿದೆ. ಇದರ ನಡುವೆ ವಿಡಿಯೋ ಕಾಲ್ ಮಾಡಿ ಬೆದರಿಕೆ ಹಾಕುತ್ತಿರುವ ವಿಷಯ ಗೊತ್ತಿದ್ದರೂ ಕೂಡ ಧಾರವಾಡ ಜೈಲಾಧಿಕಾರಿಗಳು ಸುಮ್ಮನೆ ಇದ್ದಾರಾ ಎಂಬ ಅನುಮಾನ ಮೂಡಿಬಂದಿದೆ.

'ನೇಹಾ ಹಿರೇಮಠ್ ಗೆ ಆದ ಗತಿಯೇ ನಿನಗೂ ಬರುತ್ತದೆ': ಜೈಲಿನಿಂದಲೇ ಅಪ್ರಾಪ್ತೆಗೆ ವಿಡಿಯೋ ಕರೆ ಮೂಲಕ ಬೆದರಿಕೆ ಹಾಕಿದ POCSO ಆರೋಪಿ
ಪರಪ್ಪನ ಅಗ್ರಹಾರ ಜೈಲಲ್ಲಿ ಮುಂದುವರೆದ ಐಷಾರಾಮಿ ಸೌಲಭ್ಯ; ಹಿರಿಯ ಅಧಿಕಾರಿ ವಿರುದ್ಧವೇ ಕೈದಿಗಳ ಗಂಭೀರ ಆರೋಪ: Video ವೈರಲ್

ಶ್ರೀರಾಮಸೇನೆ ಆಕ್ರೋಶ

ಲವ್ ಜಿಹಾದ್ ಆರೋಪವೂ ಕೇಳಿಬಂದಿರುವ ಈ ಪ್ರಕರಣದ ಆರೋಪಿಯು ಬಾಲಕಿಗೆ ನಿರಂತರವಾಗಿ ಹಿಂಸೆ ನೀಡುತ್ತಿದ್ದು, ಆಕೆಯ ಕುಟುಂಬ ಆತಂಕಗೊಂಡಿದೆ. ಜೈಲಾಧಿಕಾರಿಗಳ ಸಹಾಯವಿಲ್ಲದೆ ಇಂತಹ ಕೃತ್ಯ ಅಸಾಧ್ಯ ಎಂದು ಕುಟುಂಬದವರು ಆರೋಪಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮಾ.13ರಂದು ಜೈಲಿನಿಂದ ಆರೋಪಿ ವಿಡಿಯೋ ಕಾಲ್ ಮಾಡಿದ್ದಾನೆ. ಈ ವಿಷಯವನ್ನು ಅಪ್ರಾಪ್ತೆಯ ಕುಟುಂಬಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ರೂ ಕೂಡ ಕ್ಯಾರೆ ಎನ್ನುತ್ತಿಲ್ಲ. ಇದೀಗ ಶ್ರೀರಾಮಸೇನೆ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಮಾನ್ಯ ಗೃಹಮಂತ್ರಿಗಳೇ ಇದಕ್ಕೆ ಉತ್ತರ ನೀಡಿ, ಜೈಲಿನೊಳಗೆ ಸ್ಮಾರ್ಟ್ ಫೋನ್ ಹೇಗೆ ಹೋಯಿತು? ಅದೇನು ಜೈಲಾ ಅಥವಾ ಅಪರಾಧ ಮಾಡಲು ಇರುವ ಸುರಕ್ಷಿತ ತಾಣನಾ? ಎಂದು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ವಿರುದ್ಧ ಶ್ರೀರಾಮಸೇನೆ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com