ನಕಲಿ ನೇಮಕಾತಿ ವಂಚನೆಗೆ ಬಲಿಯಾಗದಿರಿ: ಜನತೆಗೆ ಆರೋಗ್ಯ ಇಲಾಖೆ ಮನವಿ

ಎಲ್ಲ ಸರ್ಕಾರಿ ನೇಮಕಾತಿಗಳು ನಿಗದಿತ ನಿಯಮಗಳು ಮತ್ತು ಅಧಿಕೃತ ಅಧಿಸೂಚನೆಗಳ ಮೂಲಕವೇ ನಡೆಯುತ್ತವೆ. ಹೀಗಾಗಿ ಅನಧಿಕೃತ ಮೂಲಗಳು ಅಥವಾ ಮಧ್ಯವರ್ತಿಗಳ ಮೂಲಕ ನೀಡಲಾಗುವ ಉದ್ಯೋಗ ಆಫರ್‌ಗಳು ಮತ್ತು ನೇಮಕಾತಿ ಪತ್ರಗಳನ್ನು ನಂಬಬಾರದು.
Representative image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ನಕಲಿ ನೇಮಕಾತಿ ಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದ್ದು, ಉದ್ಯೋಗದ ಆಮಿಷ ನೀಡಿ ಹಣ ವಸೂಲಿ ಮಾಡುವ ಘಟನೆಗಳು ಹೆಚ್ಚುತ್ತಿವೆ. ಹೀಗಾಗಿ ಜನರು ಎಚ್ಚರಿಕೆಯಿಂದಿರಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಈ ಕುರಿತು ಹೇಳಿಕೆ ನೀಡಿರುವ ಇಲಾಖೆ, ವಂಚಕರು ಕೃತಕ ನೇಮಕಾತಿ ಆದೇಶಗಳನ್ನು ಸೃಷ್ಟಿಸಿ, ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಸರ್ಕಾರದ ಉದ್ಯೋಗ ನೀಡುವುದಾಗಿ ಹೇಳಿ ಅಭ್ಯರ್ಥಿಗಳಿಂದ ಹಣ ಪಡೆಯುವ ಪ್ರಯತ್ನಗಳು ನಡೆಸುತ್ತಿದ್ದಾರೆಂದು ಇಲಾಖೆ ಎಚ್ಚರಿಸಿದೆ.

ಎಲ್ಲ ಸರ್ಕಾರಿ ನೇಮಕಾತಿಗಳು ನಿಗದಿತ ನಿಯಮಗಳು ಮತ್ತು ಅಧಿಕೃತ ಅಧಿಸೂಚನೆಗಳ ಮೂಲಕವೇ ನಡೆಯುತ್ತವೆ. ಹೀಗಾಗಿ ಅನಧಿಕೃತ ಮೂಲಗಳು ಅಥವಾ ಮಧ್ಯವರ್ತಿಗಳ ಮೂಲಕ ನೀಡಲಾಗುವ ಉದ್ಯೋಗ ಆಫರ್‌ಗಳು ಮತ್ತು ನೇಮಕಾತಿ ಪತ್ರಗಳನ್ನು ನಂಬಬಾರದು ಎಂದು ಮನವಿ ಮಾಡಿದೆ.

ಅಲ್ಲದೆ, ಯಾವುದೇ ಅನುಮಾನಾಸ್ಪದ ನೇಮಕಾತಿ ಸಂದೇಶಗಳು ಅಥವಾ ವಂಚನಾ ಚಟುವಟಿಕೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡುವಂತೆಯೂ ಮನವಿ ಮಾಡಿದೆ.

Representative image
ನಕಲಿ ರೈಲ್ವೇ ನೇಮಕಾತಿ ದಂಧೆ ಭೇದಿಸಿದ ಮೈಸೂರು ಆರ್'ಪಿಎಫ್: 400 ಮಂದಿಗೆ ವಂಚನೆ, ಇಬ್ಬರು ಆರೋಪಿಗಳ ಬಂಧನ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com