'ಹಿಜಾಬ್ ಹಿಂದಿನಿಂದಲೇ ಇದ್ದ ಪದ್ಧತಿ, ಅದನ್ನು ಬಿಜೆಪಿ ನಿಷೇಧಿಸಿತ್ತು, ನಾವು ತೆಗೆದಿದ್ದೇವೆ ಅಷ್ಟೇ': ಡಾ ಜಿ ಪರಮೇಶ್ವರ್; Video

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಪ್ರಚೋದನೆ ಮಾಡುವ ರೀತಿಯಲ್ಲಿ ಸರ್ಕಾರ ನೀತಿ, ಕಾನೂನುಗಳನ್ನು ತರಬಾರದು. ಕರ್ನಾಟಕದಲ್ಲಿ ಹಿಜಾಬ್ ಹಿಂದಿನಿಂದಲೂ ಇದ್ದ ಧಾರ್ಮಿಕ ಪದ್ಧತಿ, ಹೊಸದಾಗಿ ನಾವು ನೀತಿ ತಂದಿಲ್ಲ ಎಂದರು.
Dr G Parameshwar
ಡಾ ಜಿ ಪರಮೇಶ್ವರ್
Updated on

ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿದ್ದಾಗ ನೀತಿ ನಿರೂಪಣೆಗಳನ್ನು ಮಾಡುತ್ತಿರಲಿಲ್ಲವೇ, ಜನರು ಚೆನ್ನಾಗಿರಬೇಕೆಂದು ಕಾನೂನು, ನೀತಿಗಳನ್ನು ಅವರು ಮಾಡಿದ್ದಾರಾ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಪ್ರಚೋದನೆ ಮಾಡುವ ರೀತಿಯಲ್ಲಿ ಸರ್ಕಾರ ನೀತಿ, ಕಾನೂನುಗಳನ್ನು ತರಬಾರದು. ಕರ್ನಾಟಕದಲ್ಲಿ ಹಿಜಾಬ್ ಹಿಂದಿನಿಂದಲೂ ಇದ್ದ ಧಾರ್ಮಿಕ ಪದ್ಧತಿ, ಹೊಸದಾಗಿ ನಾವು ನೀತಿ ತಂದಿಲ್ಲ ಎಂದರು.

ಬಿಜೆಪಿಯವರೇ ಮಧ್ಯದಲ್ಲಿ ಹಿಜಾಬ್ ಧರಿಸಬಾರದು ಎಂದು ಕಾನೂನು ತಂದರು. ಎಷ್ಟೋ ವರ್ಷಗಳಿಂದ ಇದ್ಧ ಪದ್ಧತಿಗೆ ತಡೆ ತಂದಿದ್ದೇ ಅವರು. ಜನಿವಾರ ಹಾಕಿ ಎಂದು ನಾವು ಹೊಸದಾಗಿ ಹೇಳುತ್ತಿಲ್ಲ, ಈಗಾಗಲೇ ಧರಿಸುವವರಿಗೆ ಬೇಡ ಅಂದಿಲ್ಲ, ಬಿಜೆಪಿಯವರು ಏನೇ ಟೀಕೆ ಟಿಪ್ಪಣಿ ಮಾಡಲಿ ಎಂದರು.

Dr G Parameshwar
'ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುವಂತಿಲ್ಲ; ಪ್ರಧಾನ ಮಂತ್ರಿಯವರ ಬೆಂಗಾವಲು ವಾಹನ ಕಡಿತ ಸರಿಯಾದ ಕ್ರಮವಲ್ಲ': ಸಿದ್ದರಾಮಯ್ಯ; Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com