ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ: ಅಪರಾಧ ಘಟನೆಯ ಮರುಸೃಷ್ಟಿ, ಬಂಗ್ಲೆಗುಡ್ಡದಲ್ಲಿ SIT ದಿಢೀರ್ ಶೋಧ..!

ಚಿನ್ನಯ್ಯ ಅವರು ಈ ಹಿಂದೆ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಅನೇಕ ಶವಗಳನ್ನು ಹೂಳಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ತಾವು ಪತ್ತೆಹಚ್ಚಿದ್ದೇನೆ ಎಂದು ಹೇಳಲಾದ ಒಂದು ತಲೆಬುರುಡೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದ್ದರು.
File photo
ಸಂಗ್ರಹ ಚಿತ್ರ
Updated on

ಮಂಗಳೂರು: ಧರ್ಮಸ್ಥಳದ ಬಹುಚರ್ಚಿತ ‘ಸಾಮೂಹಿಕ ಅಂತ್ಯಕ್ರಿಯೆ’ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ವಿಶೇಷ ತನಿಖಾ ದಳ (SIT) ಅಧಿಕಾರಿಗಳು ಗುರುವಾರ ಬಂಗ್ಲೆಗುಡ್ಡ ಪ್ರದೇಶದಲ್ಲಿ ಅಪರಾಧ ಸ್ಥಳದ ಮರುಸೃಷ್ಟಿಸಿ, ಶೋಧ ಕಾರ್ಯಾಚರಣೆ ನಡೆಸಿದರು.

ವಿಧಿವಿಜ್ಞಾನ ಪ್ರಯೋಗಾಲಯ (FSL) ಅಧಿಕಾರಿಗಳು ಹಾಗೂ ಸೋಕೋ (Scene of Crime Officers) ಸಿಬ್ಬಂದಿಯ ಸಹಕಾರದಲ್ಲಿ ಈ ಪ್ರಕ್ರಿಯೆ ನಡೆದಿದ್ದು, ಮಾಜಿ ಪೌರಕಾರ್ಮಿಕ ಸಿಎನ್ ಚಿನ್ನಯ್ಯ ಅವರು ಮಾನವ ಅವಶೇಷಗಳು ಪತ್ತೆಯಾಗಿದ್ದವೆಂದು ಹೇಳಿದ್ದ ಸ್ಥಳದಲ್ಲೇ ತನಿಖಾ ತಂಡ ಪರಿಶೀಲನೆ ನಡೆಸಿತು.

ಚಿನ್ನಯ್ಯ ಅವರು ಈ ಹಿಂದೆ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಅನೇಕ ಶವಗಳನ್ನು ಹೂಳಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ತಾವು ಪತ್ತೆಹಚ್ಚಿದ್ದೇನೆ ಎಂದು ಹೇಳಲಾದ ಒಂದು ತಲೆಬುರುಡೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಈ ಹೇಳಿಕೆ ರಾಜ್ಯದಾದ್ಯಂತ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು.

ಮೂಲಗಳ ಪ್ರಕಾರ, ತನಿಖಾ ತಂಡವು ತಲೆಬುರುಡೆ ಪತ್ತೆಯಾದ ಸಂದರ್ಭದ ಘಟನೆಗಳನ್ನು ಮರುಸೃಷ್ಟಿ ಮಾಡುವ ಕಾರ್ಯ ನಡೆಸಿತು. ಇದರಲ್ಲಿ 2012ರ ಬಹುಚರ್ಚಿತ ಸೌಜನ್ಯ ಹತ್ಯೆ ಪ್ರಕರಣದೊಂದಿಗೆ ಹೆಸರು ಕೇಳಿಬಂದಿದ್ದ ವಿಠ್ಠಲ ಗೌಡ ಅವರು ನಡೆಸಿದ್ದ ಅಗೆತ ಪ್ರಕ್ರಿಯೆಯನ್ನೂ ಪುನರಾವರ್ತಿಸಲಾಯಿತು ಎನ್ನಲಾಗಿದೆ.

ಆ ಸಮಯದಲ್ಲಿ ನಡೆದ ಶವ ಪತ್ತೆ ಪ್ರಕ್ರಿಯೆಯನ್ನು ಪ್ರದೀಪ್ ಕುಲಾಲ್ ವಿಡಿಯೋಗ್ರಫಿ ಮಾಡಿದ್ದರು ಎಂಬ ಮಾಹಿತಿಯನ್ನೂ ಎಸ್ಐಟಿ ಪರಿಶೀಲಿಸುತ್ತಿದೆ.

File photo
ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಗೆ ನೋಟಿಸ್ ನೀಡಿ: ಬೆಳ್ತಂಗಡಿ ಪೊಲೀಸರಿಗೆ ವಿಶೇಷ ಕೋರ್ಟ್ ಸೂಚನೆ

ತನಿಖಾ ತಂಡ ಈ ಮರುಸೃಷ್ಟಿ ಪ್ರಕ್ರಿಯೆಯನ್ನು ಸಂಪೂರ್ಣ ದಾಖಲಿಸಿಕೊಂಡು, ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.

ವಿಧಿವಿಜ್ಞಾನ ತಜ್ಞರು ಮತ್ತು ಅಧಿಕಾರಿಗಳು ಸ್ಥಳದ ಪರಿಸ್ಥಿತಿಯನ್ನು ಪರಿಶೀಲಿಸಿ, ಮಾನವ ಅವಶೇಷಗಳ ಪತ್ತೆ ಕುರಿತ ಘಟನೆಗಳ ಸನ್ನಿವೇಶವನ್ನು ಪುನರ್‌ನಿರ್ಮಿಸಲು ಸಹಕರಿಸಿದರು.

ಚಿನ್ನಯ್ಯ ಅವರು ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುತಿಸಲಾಗದ ಅನೇಕ ಶವಗಳನ್ನು ಹೂಳಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸರು ಕಳೆದ ವರ್ಷ ಜುಲೈ 4ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ರಾಜ್ಯ ಸರ್ಕಾರ ಈ ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು ಎಸ್ಐಟಿ ರಚಿಸಿತ್ತು.

ತನಿಖೆಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಮಾತನಾಡಿ, ಸಾಕ್ಷ್ಯ ಸಂಗ್ರಹ ಮತ್ತು ತನಿಖೆಯ ವೇಳೆ ದೊರೆತ ಮಾಹಿತಿಗಳನ್ನು ಪರಿಶೀಲಿಸುವ ಉದ್ದೇಶದಿಂದಲೇ ಅಪರಾಧ ಸ್ಥಳದ ಮರುಸೃಷ್ಟಿ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com