ನಾಯಕತ್ವ ಬದಲಾವಣೆ ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆಯೇ..?

2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ 2018ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದ್ದರು. ಬಳಿಕ 2018ರ ವಿಧಾನಸಭೆ ಚುನಾವಣೆಯ ನಂತರ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾದರು.
Chief Minister Siddaramaiah and DCM DK Shivakumar at press confrence in Bemgaluru on Thursday.
ಬೆಂಗಳೂರಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್.
Updated on

ಬೆಂಗಳೂರು: ಕಳೆದ ಒಂದು ದಶಕದಲ್ಲಿ ಕರ್ನಾಟಕದಲ್ಲಿ ಹಲವು ಬಾರಿ ಮುಖ್ಯಮಂತ್ರಿ ಬದಲಾವಣೆ ನಡೆದಿದ್ದು, ಇದರಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ಸಲ್ಲಿಸಿದ ಬಳಿಕ, ಇದೀಗ ಡಿಕೆ.ಶಿವಕುಮಾರ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿದ್ದು, ಈ ನಡುವೆ ನಾಯಕತ್ವ ಬದಲಾವಣೆ ಕುರಿತು ರಾಜಕೀಯ ವಿಶ್ಲೇಷಕರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ 2018ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದ್ದರು. ಬಳಿಕ 2018ರ ವಿಧಾನಸಭೆ ಚುನಾವಣೆಯ ನಂತರ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾದರು.

ನಂತರ ಮೈತ್ರಿ ಸರ್ಕಾರ ಕುಸಿದ ಹಿನ್ನೆಲೆ 2019ರಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು. 2021ರಲ್ಲಿ ಅವರ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದರು. 2023ರಲ್ಲಿ ಮತ್ತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದರು.

ಕಾಂಗ್ರೆಸ್‌ನ ಹಿರಿಯ ನಾಯಕನೊಬ್ಬರು ಮಾತನಾಡಿ, ಮುಖ್ಯಮಂತ್ರಿ ಬದಲಾವಣೆಯಿಂದ ಲಾಭ-ನಷ್ಟ ಎರಡೂ ಇವೆ. “ಹೊಸ ಮುಖ್ಯಮಂತ್ರಿಗಳು ಹೊಸ ಆಲೋಚನೆಗಳು ಮತ್ತು ಹೊಸ ದಿಕ್ಕು ತರುತ್ತಾರೆ. ಆದರೆ, ಹಿಂದಿನ ಸರ್ಕಾರ ಆರಂಭಿಸಿದ್ದ ಯೋಜನೆಗಳು ಮತ್ತು ನೀತಿಗಳು ಮುಂದುವರಿಯದಿರುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.

Chief Minister Siddaramaiah and DCM DK Shivakumar at press confrence in Bemgaluru on Thursday.
KPCC ಪಟ್ಟ: 'ಒನ್ ಮ್ಯಾನ್-ಒನ್ ಪೋಸ್ಟ್' ಸೂತ್ರಕ್ಕೆ ಜಾರಕಿಹೊಳಿ ಅಸಮಾಧಾನ; ಅಧ್ಯಕ್ಷ ಸ್ಥಾನದೊಂದಿಗೆ ಸಚಿವ ಸ್ಥಾನಕ್ಕೆ ಪಟ್ಟು..? Video

ಇತ್ತೀಚಿನ ವರ್ಷಗಳಲ್ಲಿ ಒಂದು ಸರ್ಕಾರ ಜಾರಿಗೆ ತಂದ ಹಲವು ಕಾನೂನುಗಳನ್ನು ಮುಂದಿನ ಸರ್ಕಾರ ಹಿಂತೆಗೆದುಕೊಂಡ ಉದಾಹರಣೆಗಳಿವೆ. ಪಠ್ಯಪುಸ್ತಕಗಳ ವಿಷಯದಲ್ಲೂ ಸರ್ಕಾರ ಬದಲಾದಾಗ ಬದಲಾವಣೆಗಳು ನಡೆದಿವೆ ಎಂದು ಉಲ್ಲೇಖಿಸಿದ್ದಾರೆ.

ಪ್ರತಿ ಹೊಸ ಮುಖ್ಯಮಂತ್ರಿ ತಮ್ಮದೇ ಸಚಿವ ಸಂಪುಟ ರಚಿಸುವುದರಿಂದ, ಸಚಿವರು ತಮ್ಮ ಅನುಕೂಲದ ಐಎಎಸ್ ಅಧಿಕಾರಿಗಳನ್ನು ಆಯ್ಕೆ ಮಾಡಲು ಮುಂದಾಗುತ್ತಾರೆ. ಇದರಿಂದ ಅಧಿಕಾರಿಗಳ ವರ್ಗಾವಣೆ ಹೆಚ್ಚಾಗಿ ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀಳುತ್ತದೆ. ಯೋಜನೆಗಳ ಜಾರಿಗೆ ವಿಳಂಬವಾಗುವ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ರಾಜಕೀಯ ತಜ್ಞ ಪ್ರೊ. ಸಂದೀಪ್ ಶಾಸ್ತ್ರಿ ಈ ಅಭಿಪ್ರಾಯವನ್ನು ನಿರಾಕರಿಸಿದ್ದಾರೆ. “ಮುಖ್ಯಮಂತ್ರಿಯ ಅವಧಿ ಮತ್ತು ಉತ್ತಮ ಆಡಳಿತದ ನಡುವೆ ನೇರ ಸಂಬಂಧವಿಲ್ಲ. 1999ರ ಬಳಿಕ ಎಸ್‌.ಎಂ. ಕೃಷ್ಣ ಮತ್ತು ಸಿದ್ದರಾಮಯ್ಯ ಮಾತ್ರ ಸ್ಥಿರ ಅವಧಿಯ ಮುಖ್ಯಮಂತ್ರಿಗಳಾಗಿದ್ದರು. ಆದರೆ, ಪೂರ್ಣಾವಧಿ ಅಧಿಕಾರದಲ್ಲಿರುವುದೇ ಉತ್ತಮ ಆಡಳಿತಕ್ಕೆ ಗ್ಯಾರಂಟಿ ಅಲ್ಲ ಎಂದು ಹೇಳಿದ್ದಾರೆ.

ಉತ್ತಮ ಆಡಳಿತವು ಮುಖ್ಯಮಂತ್ರಿಯ ಅವಧಿಗಿಂತ ನಾಯಕತ್ವದ ಶೈಲಿ, ನೀತಿಗಳ ನಿರಂತರತೆ ಮತ್ತು ಆಡಳಿತ ಯಂತ್ರದ ಸಮನ್ವಯದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.

X

Advertisement

X
Kannada Prabha
www.kannadaprabha.com