

ಬೆಂಗಳೂರು: ಮಾನ್ಸೂನ್ ಆರಂಭವನ್ನು ನಿರ್ಧರಿಸುವ ನಿಯತಾಂಕಗಳು ಅಗತ್ಯ ಮಾನದಂಡಗಳನ್ನು ಪೂರೈಸದ ಕಾರಣ ಬಹುನಿರೀಕ್ಷಿತ ನೈಋತ್ಯ ಮಾನ್ಸೂನ್ ಆಗಮನ ವಿಳಂಬವಾಗಿದೆ.
ಗಾಳಿಯ ಮಾದರಿ ತೃಪ್ತಿಕರವಾಗಿಲ್ಲ, ಹೊರಹೋಗುವ ದೀರ್ಘ-ತರಂಗ ವಿಕಿರಣವೂ ಸಹ ತೃಪ್ತಿಕರವಾಗಿಲ್ಲ ಎಂದು ಭಾರತ ಹವಾಮಾನ ಇಲಾಖೆಯ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ. ದೀರ್ಘಕಾಲದ ಬಿಸಿ ಮತ್ತು ಶುಷ್ಕ ಹವಾಮಾನಗಳು ಮತ್ತು ಪೂರ್ವ ಮಾನ್ಸೂನ್ ಮಳೆಯ ಮಾದರಿಯಲ್ಲಿನ ವಿರಾಮವು ಮಾನ್ಸೂನ್ ಆಗಮನದ ಮೇಲೆ ಪರಿಣಾಮ ಬೀರಿದೆ.
ಪಶ್ಚಿಮ ಗಾಳಿಯು 4 ಕಿ.ಮೀ ಎತ್ತರವನ್ನು ತಲುಪಬೇಕು, ಆದರೆ ಪ್ರಸ್ತುತ ಸುಮಾರು 1.5 ಕಿ.ಮೀ. ಇವೆ ಎಂದು ಐಎಂಡಿ-ಬೆಂಗಳೂರು ಉಸ್ತುವಾರಿ ನಿರ್ದೇಶಕ ಎನ್. ಪುವಿಯರಸನ್ ಹೇಳಿದ್ದಾರೆ.
ಕೇರಳದಲ್ಲಿ ಮಳೆಯಾಗುತ್ತಿದೆ, ಆದರೆ ಇದು ಪೂರ್ವ ಮಾನ್ಸೂನ್ ಮಳೆಯಾಗಿದೆ ಎಂದು ಅವರು ಹೇಳಿದರು. “ದೀರ್ಘಾವಧಿಯ ಸರಾಸರಿ ಮೌಲ್ಯಮಾಪನದ ಆಧಾರದ ಮೇಲೆ, ಮಾನ್ಸೂನ್ ಪ್ರಾರಂಭವಾಗುವ ಸೂಕ್ತ ದಿನಾಂಕ ಜೂನ್ 1. ಆದರೆ ಈ ವರ್ಷ, ಮೇ 26-27 ರಂದು ಮಾನ್ಸೂನ್ ಆಗಮಿಸಿದೆ ಎಂದು ಊಹಿಸಲಾಗಿತ್ತು. ಆದರೆ ಈಗ ಅದು ವಿಳಂಬವಾಗಿದೆ.
ಪ್ರಸ್ತುತ ಸನ್ನಿವೇಶದ ಹಿನ್ನೆಲೆಯಲ್ಲಿ, ಜೂನ್ 1 ರಂದು ಸಹ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲ ಎಂದು ಅವರು ಹೇಳಿದರು. ಗಾಳಿ ಪ್ರಬಲವಾಗಿದ್ದರೇ ಈ ಹೊತ್ತಿಗೆ ಇಡೀ ಸಮಭಾಜಕ ಪ್ರದೇಶ ಮತ್ತು ನೈಋತ್ಯ ಕರಾವಳಿಯಲ್ಲಿ ಮಳೆಯಾಗುತ್ತಿತ್ತು. ಆದರೆ ಗಾಳಿ ಈಗ ದುರ್ಬಲವಾಗಿದೆ ಎಂದು ಅವರು ಹೇಳಿದರು.
ನೈಋತ್ಯ ಮಾನ್ಸೂನ್ ಅಂಡಮಾನ್ ನಿಕೋಬಾರ್ ದ್ವೀಪಗಳು, ಬಂಗಾಳಕೊಲ್ಲಿ, ಅರೇಬಿಯನ್ ಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಆವರಿಸಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಇದರಿಂದ ಇನ್ನೂ ಮುಖ್ಯ ಭೂಭಾಗವನ್ನು ತಲುಪಿಲ್ಲ. ಮುಂದಿನ ಎರಡು ದಿನಗಳಲ್ಲಿ ಅದು ಮುಂದುವರಿಯುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ. ಮುಖ್ಯ ಭೂಭಾಗಕ್ಕೆ
ಮಾನ್ಸೂನ್ ಆಗಮನವಾಗುತ್ತದೆ ಎಂದು ಪ್ರಸ್ತುತ ಪರಿಸ್ಥತಿಯಲ್ಲಿ ಹೇಳಲಾಗುವುದಿಲ್ಲ.ಆದಾಗ್ಯೂ, ಪೂರ್ವ ಮಾನ್ಸೂನ್ ಮಳೆ ಕ್ರಮೇಣ ಇಡೀ ದೇಶದಲ್ಲಿ ವಿಸ್ತರಿಸುತ್ತಿದೆ. ಪೂರ್ವ ಮಾನ್ಸೂನ್ ಮಳೆಯ ಭಾಗವಾಗಿ ಮೇ 28-31 ರವರೆಗೆ ದೇಶದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಇಳಿಕೆ ಮತ್ತು ಮಳೆಯಾಗುವ ಮುನ್ಸೂಚನೆ ಇದೆ ಎಂದಿದ್ದಾರೆ.
Advertisement