ರಾಯಚೂರು: ಮಕ್ಕಳ ಜೊತೆ ತಾಯಿ ಆತ್ಮಹತ್ಯೆ; ದುರಂತ ನೋಡಿ ರೈಲಿಗೆ ತಲೆಕೊಟ್ಟು ವ್ಯಕ್ತಿ ಸಾವು!

ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಶವವಾಗಿ ಪತ್ತೆಯಾದರೆ, ಪತಿ ವಿಷ್ಣು ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
Updated on: 

ರಾಯಚೂರು: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಯಚೂರಿನ ಜಲಾಲನಗರದಲ್ಲಿ ನಡೆದಿದೆ. ಜಲಾಲನಗರ ನಿವಾಸಿ ವಿಷ್ಣು, ಪತ್ನಿ ಅರುಣಾ (40), ಮಕ್ಕಳಾದ ಶ್ಲೋಕ (10) ಮತ್ತು ಖುಷಿ (4) ಮೃತಪಟ್ಟವರು.

ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಶವವಾಗಿ ಪತ್ತೆಯಾದರೆ, ಪತಿ ವಿಷ್ಣು ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಯಿ ಹಾಗೂ ಇಬ್ಬರು ಮಕ್ಕಳ ಸಾವಿನ ಬಳಿಕ ಪತಿ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಘಟಗೆ ಕಾರಣ ಎನ್ನಲಾಗುತ್ತಿದೆ. ಅನೇಕ ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ರವಿವಾರ ಗಂಡ ಹೆಂಡತಿಯ ನಡುವೆ ಜಗಳ ನಡೆದಿದೆ.

ಈ ವೇಳೆ ಬಳಿಕ ಗಂಡ‌ ವಿಷ್ಣುರೆಡ್ಡಿ ಮನೆ ಬಿಟ್ಟು ಸಾಯುತ್ತೇನೆ ಎಂದು ಹೋಗಿದ್ದಾರೆ. ಸ್ವಲ್ಪ ಹೊತ್ತಲ್ಲೇ ಪತ್ನಿ ಅರುಣಾ‌, ಮಕ್ಕಳಾದ ಶ್ಲೋಕ ಹಾಗೂ ಖುಷಿಗೆ ವಿಷ ನೀಡಿ‌ ತಾನೂ ಸೇವನೆ ಮಾಡಿದ್ದಾರೆ ಎನ್ನಲಾಗಿದೆ

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
ಪರೀಕ್ಷೆಗೂ ಮುನ್ನ 6ನೇ ಮಹಡಿಯಿಂದ ಜಿಗಿದು MBA ವಿದ್ಯಾರ್ಥಿನಿ ಆತ್ಮಹತ್ಯೆ!

.

ಘಟನೆಯ ಸ್ವಲ್ಪ ಹೊತ್ತಿನ ಬಳಿಕ ಗಂಡ ವಿಷ್ಣುರೆಡ್ಡಿಗೆ ಮೊಬೈಲ್ ಕರೆ ಮಾಡಿ ಸಂಬಂಧಿಕರೊಬ್ಬರು ವಿಷಯ ತಿಳಿಸಿದ್ದಾರೆ. ಹೆಂಡತಿ ಮಕ್ಕಳು‌ ಸಾವಿನ ಅಘಾತದಿಂದ ರಾಯಚೂರು ತಾಲೂಕಿನ‌ ಚಿಕ್ಕಸುಗೂರು ಬಳಿಯ ರೈಲ್ವೆ ಹಳಿಗೆ ಬಿದ್ದು ವಿಷ್ಣು ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಹಿತಿ ತಿಳಿದು‌ ರೈಲ್ವೆ ಪೊಲೀಸರು ವಿಷ್ಣುರೆಡ್ಡಿಯ ಮೃತದೇಹ ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X