ನಂದಿನಿ ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ಕಾಫಿ, ಟೀ ಬೆಲೆಯಲ್ಲೂ ರೂ.5 ಹೆಚ್ಚಳ

ರಾಜ್ಯದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ 8 ರಿಂದ 12 ರೂಪಾಯಿವರೆಗೆ ಏರಿಕೆಯಾದ ಬೆನ್ನಲ್ಲೇ, ಹಾಲಿನ ದರ ಹೆಚ್ಚಳದ ಪರಿಣಾಮವಾಗಿ ಇಂದಿನಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ಹೋಟೆಲ್‌ಗಳು ಮತ್ತು ಬೇಕರಿಗಳಲ್ಲಿ ಕಾಫಿ ಹಾಗೂ ಟೀ ಬೆಲೆಯನ್ನು 5 ರೂಪಾಯಿ ಹೆಚ್ಚಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
Nandini Milk Price Hike Effect: Coffee and Tea Rates Increased by Rs 5 Across Karnataka Hotels
ನಂದಿನಿ ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್AI Image
Updated on: 

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ ₹8 ರಿಂದ ₹12 ರವರೆಗೆ ಭಾರಿ ಏರಿಕೆ ಕಂಡ ಬೆನ್ನಲ್ಲೇ, ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೌದು, ನವೆಂಬರ್ 1ರಿಂದ ಹಾಲಿನ ಹೊಸ ದರ ಜಾರಿಗೆ ಬಂದಿದ್ದು, ಇದರ ನೇರ ಪರಿಣಾಮವಾಗಿ ಇಂದಿನಿಂದಲೇ ರಾಜ್ಯಾದ್ಯಂತ ಹೋಟೆಲ್‌ಗಳು ಮತ್ತು ಕೆಫೆಗಳಲ್ಲಿ ಕಾಫಿ ಹಾಗೂ ಟೀ ಬೆಲೆಯಲ್ಲಿ ₹5 ರವರೆಗೆ ಹೆಚ್ಚಳ ಮಾಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಕಾಫಿ, ಟೀ ಬೆಲೆ ಹೆಚ್ಚಳ

ರಾಜ್ಯಾದ್ಯಂತ ಪ್ರತಿ ಕಪ್ ಕಾಫಿ ಮತ್ತು ಟೀ ಬೆಲೆಯಲ್ಲಿ 5 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಎಚ್ಚರಿಕೆಯ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹಾಲಿನ ದರ ತೀವ್ರವಾಗಿ ಏರಿಕೆ ಆಗಿರುವುದರಿಂದ ಮೆನು ದರಗಳನ್ನು ಪರಿಷ್ಕರಿಸುವುದು ಅನಿವಾರ್ಯವಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ಏತನ್ಮಧ್ಯೆ, ಹಾಲಿನ ದರ ಏರಿಕೆ ಕೇವಲ ಕಾಫಿ, ಟೀಗೆ ಮಾತ್ರ ಸೀಮಿತವಾಗಿರದೆ, ಮುಂಬರುವ ದಿನಗಳಲ್ಲಿ ಹಾಲು ಆಧಾರಿತ ಸಿಹಿತಿಂಡಿಗಳು, ಇಡ್ಲಿ, ದೋಸೆ ಹಾಗೂ ಮಧ್ಯಾಹ್ನದ ಊಟದ ದರಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ.

ನಂದಿನಿ ಹಾಲಿನ ಹೊಸ ದರ ಪಟ್ಟಿ (ಪ್ರತಿ ಲೀಟರ್‌ಗೆ):

  • ಟೋನ್ಡ್ ಹಾಲು: 46 ರೂ. ಇದ್ದದ್ದು ಈಗ 54 ರೂ.

  • ಹೋಮೋಜಿನೈಸ್ಡ್ ಟೋನ್ಡ್ ಹಾಲು: 47 ರೂ. ಇದ್ದದ್ದು ಈಗ 56 ರೂ.

  • ಹೋಮೋಜಿನೈಸ್ಡ್ ಹಸುವಿನ ಹಾಲು: 50 ರೂ. ಇದ್ದದ್ದು ಈಗ 58 ರೂ.

  • ಸ್ಪೆಷಲ್ ಟೋನ್ಡ್ ಹಾಲು: 52 ರೂ. ಇದ್ದದ್ದು ಈಗ 64 ರೂ.

  • ಶುಭಂ ಹಾಲು: 52 ರೂ. ಇದ್ದದ್ದು ಈಗ 64 ರೂ.

  • ಹೋಮೋಜಿನೈಸ್ಡ್ ಶುಭಂ ಹಾಲು: 53 ರೂ. ಇದ್ದದ್ದು ಈಗ 65 ರೂ.

ಕೊನೆಯ ಬಾರಿಗೆ ಏಪ್ರಿಲ್ 1, 2025 ರಂದು ಸರ್ಕಾರವು ಹಾಲಿನ ಬೆಲೆಯನ್ನು ಲೀಟರ್‌ಗೆ ₹4 ಹೆಚ್ಚಿಸಿತ್ತು. ಅದಕ್ಕೂ ಮುನ್ನ, ಜೂನ್ 2024 ರಲ್ಲಿ 500 ಮಿಲಿ ಪ್ಯಾಕೆಟ್‌ಗೆ ಹೆಚ್ಚುವರಿಯಾಗಿ 50 ಮಿಲಿ ಹಾಲು ನೀಡುವುದಕ್ಕೆ ಅನುಗುಣವಾಗಿ ಲೀಟರ್‌ಗೆ ₹2 ಹೆಚ್ಚಿಸಲಾಗಿತ್ತು.

Nandini Milk Price Hike Effect: Coffee and Tea Rates Increased by Rs 5 Across Karnataka Hotels
ನಂದಿನಿ ಹಾಲಿನ ಬೆಲೆ ಲೀಟರ್‌ಗೆ ₹8 ಏರಿಕೆ: ಕಾಫಿ-ಟೀ, ತಿಂಡಿ ದರ ಕೂಡ ಶೀಘ್ರ ಹೆಚ್ಚಳ; ಹೊಟೆಲ್ ಮಾಲೀಕರ ಸಂಘ ಹೇಳಿದ್ದೇನು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X