ಕರ್ನಾಟಕದ ವಿಷಯದಲ್ಲಿ ಮೂಗು ತೂರಿಸಬೇಡಿ: ಕರವೇಯನ್ನು ನಿರುದ್ಯೋಗಿಗಳು ಎಂದ ತಮಿಳುನಾಡು IPS ಅಧಿಕಾರಿಗೆ ನೆಟ್ಟಿಗರ ತರಾಟೆ

ಕರ್ನಾಟಕದ ಐಟಿ-ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನೀಡಿರುವ ಉದ್ಯೋಗಾವಕಾಶಗಳ ಮಾಹಿತಿ ಸಂಗ್ರಹಿಸಲು ಕರವೇ ಹಮ್ಮಿಕೊಂಡಿರುವ ಆಗ್ರಹ ಅಭಿಯಾನವನ್ನು ತಮಿಳುನಾಡು ಕೆಡರ್‌ನ ಐಪಿಎಸ್ ಅಧಿಕಾರಿ ವ್ಯಂಗ್ಯವಾಡಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
Kannada Outfit Protests Over IT Jobs: Backlash Against Tamil Nadu IPS Officer Over Controversial Remarks
ಕರವೇಯನ್ನು ನಿರುದ್ಯೋಗಿಗಳು ಎಂದ ತಮಿಳುನಾಡು IPS ಅಧಿಕಾರಿಗೆ ನೆಟ್ಟಿಗರ ತರಾಟೆOnline Desk
Updated on: 

ಬೆಂಗಳೂರು: ಕರ್ನಾಟಕದ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ-ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗದ ನ್ಯಾಯಯುತ ಪಾಲು ಸಿಗಬೇಕು ಎಂಬ ಧ್ವನಿ ಇಂದು ನಿನ್ನೆಯದಲ್ಲ. ಇದೀಗ ಇದೇ ಹಕ್ಕಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆರಂಭಿಸಿರುವ ಶಾಂತಿಯುತ ಅಭಿಯಾನವನ್ನು ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿ ಬಿ. ಎಸ್. ಧನುಷ್ ಕುಮಾರ್ ವ್ಯಂಗ್ಯವಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಸ್ಥಳೀಯರ ಉದ್ಯೋಗದ ಹಕ್ಕನ್ನು ಪ್ರಶ್ನಿಸಿ, ಅಭಿಯಾನವನ್ನು ಲೇವಡಿ ಮಾಡಿದ ತಮಿಳುನಾಡು ಕೇಡರ್ ಅಧಿಕಾರಿಯ ನಡವಳಿಕೆ ಇದೀಗ ಇಂಟರ್ನೆಟ್ ನಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕನ್ನಡಿಗರ ಸ್ವಾಭಿಮಾನದ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಅಧ್ಯಕ್ಷ ಟಿ. ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ನವೆಂಬರ್ 1 ರಿಂದ ಒಂದು ತಿಂಗಳ ಕಾಲ 'ಆಗ್ರಹ ಅಭಿಯಾನ' ಆರಂಭಿಸಲಾಗಿದೆ. ಇದರ ಭಾಗವಾಗಿ ಕರವೇಯ 10 ಮುಖಂಡರನ್ನೊಳಗೊಂಡ ನಿಯೋಗಗಳು ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ, ಆ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಎಚ್‌ಆರ್ ಅಧಿಕಾರಿಗಳಿಂದ, ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗ ನೀಡಲಾಗಿದೆ ಮತ್ತು ಸ್ಥಳೀಯರಿಗೆ ಎಷ್ಟು ಆದ್ಯತೆ ಸಿಕ್ಕಿದೆ ಎಂಬ ಅಂಕಿಅಂಶಗಳ ಮಾಹಿತಿಯನ್ನು ಸಂಗ್ರಹಿಸುತ್ತಿವೆ.

ಹೀಗೆ, ಸಂಗ್ರಹಿಸಿದ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿ, ಕನ್ನಡಿಗರಿಗೆ ಉದ್ಯೋಗ ಹಕ್ಕಿನಲ್ಲಿ ಸೂಕ್ತ ನ್ಯಾಯ ಒದಗಿಸಲು ಒತ್ತಾಯಿಸುವ ಯೋಜನೆ ರೂಪಿಸಲಾಗಿದೆ. ಆದರೆ ಕರವೇ ಕಾರ್ಯಕರ್ತರ ಈ ಅಭಿಯಾನವನ್ನ ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ, ತಮಿಳುನಾಡಿನ ವೆಲ್ಲೂರು ಸಬ್ ಡಿವಿಷನ್‌ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಧನುಷ್ ಕುಮಾರ್, ಕರವೇ ಕಾರ್ಯಕರ್ತರನ್ನು "ಉದ್ಯೋಗ ಮಾಡುತ್ತಿರುವವರ ಕೆಲಸಕ್ಕೆ ಅಡ್ಡಿಪಡಿಸುತ್ತಿರುವ ನಿರುದ್ಯೋಗಿಗಳು" ಎಂದು ವ್ಯಂಗ್ಯವಾಡಿದ್ದಾರೆ.

Kannada Outfit Protests Over IT Jobs: Backlash Against Tamil Nadu IPS Officer Over Controversial Remarks
Online Desk
Kannada Outfit Protests Over IT Jobs: Backlash Against Tamil Nadu IPS Officer Over Controversial Remarks
ಬೆಂಗಳೂರು ಮೆಟ್ರೋ ಕಿರುಕುಳ ಆರೋಪ: ಸೌಪಿಕ ಇನ್‌ಸ್ಟಾಗ್ರಾಂ ಖಾತೆಗೆ ಭರ್ಜರಿ ಫಾಲೋವರ್ಸ್; ₹399ಗೆ Paid Subscription ಆರಂಭ?

ಕನ್ನಡಿಗರ ಉದ್ಯೋಗದ ಬಗ್ಗೆ ಧ್ವನಿ ಎತ್ತುವುದು ತಪ್ಪೇ?

ಈ ಹೇಳಿಕೆಯಿಂದ ಕನ್ನಡಿಗರು ಕೆಂಡಾಮಂಡಲರಾಗಿದ್ದಾರೆ. "ಕನ್ನಡಿಗರ ಉದ್ಯೋಗದ ಹಕ್ಕಿನ ಬಗ್ಗೆ ಮತ್ತು ನೇಮಕಾತಿ ಪಾರದರ್ಶಕತೆಗಾಗಿ ಶಾಂತಿಯುತವಾಗಿ ಧ್ವನಿ ಎತ್ತುವುದು ತಪ್ಪೇ?" ಎಂದು ಸಾರ್ವಜನಿಕರು ಹಾಗೂ ಕನ್ನಡ ಹೋರಾಟಗಾರರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಂತೆ, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಐಟಿ ಉದ್ಯಮಿ ಅರುಣ್ ಜಾವಗಲ್ ಅವರು ಈ ಪೋಸ್ಟ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. "ನೇಮಕಾತಿ ಮಾಹಿತಿ ಕೇಳುವುದು ಕೆಲಸಕ್ಕೆ ಅಡ್ಡಿಪಡಿಸಿದಂತೆಯೇ? ಬೇರೆ ರಾಜ್ಯದ ಅಧಿಕಾರಿಗೆ ಕರ್ನಾಟಕದ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಏನು ಹಕ್ಕಿದೆ?" ಎಂದು ಪ್ರಶ್ನಿಸಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಎಕ್ಸ್ ಮೂಲಕ ಟ್ಯಾಗ್ ಮಾಡಿ ದೂರಿದ್ದಾರೆ.

ಏತನ್ಮಧ್ಯೆ, ಕನ್ನಡಿಗರಿಂದ ತೀವ್ರ ವಿರೋಧ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಸರಣಿ ಪೋಸ್ಟ್‌ಗಳು ಹರಿದುಬಂದ ಬೆನ್ನಲ್ಲೇ, ಐಪಿಎಸ್ ಅಧಿಕಾರಿ ಧನುಷ್ ಕುಮಾರ್ ಅವರು ತಮ್ಮ ವಿವಾದಾತ್ಮಕ ಕಮೆಂಟ್ ಅನ್ನು ಡಿಲೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X