ಬಂಡೀಪುರದಲ್ಲಿ ಗರ್ಭಿಣಿ ಆನೆ ಕಳೇಬರ ಪತ್ತೆ: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗರ್ಭಿಣಿ ಕಾಡಾನೆಯೊಂದರ ಕಳೇಬರ ಪತ್ತೆಯಾಗಿದೆ. ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಗಡಿಯಿಂದ ಸುಮಾರು 150 ಮೀಟರ್ ದೂರದಲ್ಲಿರುವ ಖಾಸಗಿ ಜಮೀನಿನಲ್ಲಿ ಈ ಕಳೇಬರ ಪತ್ತೆಯಾದ್ದು, ಮೃತಪಟ್ಟ ಹೆಣ್ಣಾನೆಗೆ ಸುಮಾರು 35 ವರ್ಷ ಎಂದು ಅಂದಾಜಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
Forest Rangers Document Pregnant Elephant Discovery
ಬಂಡೀಪುರದಲ್ಲಿ ಗರ್ಭಿಣಿ ಆನೆ ಕಳೇಬರ ಪತ್ತೆAI Image
Updated on: 

ಗುಂಡ್ಲುಪೇಟೆ (ಚಾಮರಾಜನಗರ): ಕಾಡಿನ ಮಡಿಲಲ್ಲಿ ಹೊಸ ಜೀವವೊಂದಕ್ಕೆ ಜನ್ಮ ನೀಡಬೇಕಿದ್ದ ತಾಯಿ ಆನೆಯೊಂದು ಅನಿರೀಕ್ಷಿತವಾಗಿ ಶವವಾಗಿ ಬಿದ್ದಿರುವ ಮನಕಲಕುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ನಿಗೂಢವಾಗಿದ್ದ ಈ ಸಾವಿನ ಬೆನ್ನುಬಿದ್ದ ಅರಣ್ಯ ಅಧಿಕಾರಿಗಳಿಗೆ ಮತ್ತು ವೈದ್ಯರಿಗೆ ಮರಣೋತ್ತರ ಪರೀಕ್ಷೆಯ ವೇಳೆ ನಂಬಲಾಗದ ಸಂಗತಿಯೊಂದು ತಿಳಿದುಬಂದಿದೆ. ಆನೆಯ ಬೆನ್ನಿನ ಮೂಳೆ ಮುರಿದಿದ್ದು ಹೇಗೆ? ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ವಲಯದ ಖಾಸಗಿ ಜಮೀನಿನಲ್ಲಿ ಈ ಕಳೇಬರ ಪತ್ತೆಯಾಗಿದೆ. ಇದು ಅರಣ್ಯದ ಗಡಿಯಿಂದ ಸುಮಾರು 150 ಮೀಟರ್ ದೂರದಲ್ಲಿದ್ದು, ಮೃತಪಟ್ಟ ಹೆಣ್ಣು ಕಾಡಾನೆಗೆ ಸುಮಾರು 35 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಅದರಲ್ಲೂ, ಅರಣ್ಯ ಇಲಾಖೆಯ ಪಶುವೈದ್ಯರಾದ ಡಾ. ಮಿರ್ಜಾ ವಾಸಿಂ ಅವರು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದಾಗ ಆನೆ ಗರ್ಭಿಣಿಯಾಗಿರುವುದು ಮತ್ತು ಅದರ ಹೊಟ್ಟೆಯಲ್ಲಿ ಮರಿ ಇರುವುದು ದೃಢಪಟ್ಟಿದೆ. ಅದರಂತೆ, ತಾಯಿ ಆನೆಯೊಂದಿಗೆ ಗರ್ಭದಲ್ಲಿದ್ದ ಮರಿಯೂ ಸಹ ಸಾವನ್ನಪ್ಪಿದೆ. ಆದರೆ, ಮರಿಯ ವಯಸ್ಸಿನ ಕುರಿತು ಪ್ರಾಥಮಿಕ ಮಾಹಿತಿಯಲ್ಲಿ ವ್ಯತ್ಯಾಸಗಳಿದ್ದು, ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಹೊರಬರಬೇಕಿದೆ.

ಸಾವಿಗೆ ಕಾರಣವೇನು?

ಪ್ರಾಥಮಿಕ ತನಿಖೆಯ ಪ್ರಕಾರ, ಎರಡು ಬಲಶಾಲಿ ಕಾಡಾನೆಗಳ ನಡುವೆ ನಡೆದ ಭೀಕರ ಕಾದಾಟ ಅಥವಾ ಮಿಲನದ ಸಂದರ್ಭದಲ್ಲಿ ಬೆನ್ನಿಗೆ ತಿವಿತವಾಗಿ ಮೂಳೆ ಮುರಿದಿದ್ದರಿಂದ ಈ ಸಾವು ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆಯ ಪೂರ್ಣ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ. ಇನ್ನು ಘಟನಾ ಸ್ಥಳಕ್ಕೆ ಗೋಪಾಲಸ್ವಾಮಿ ಬೆಟ್ಟ ವಲಯದ ಆರ್‌ಎಫ್‌ಒ ಸತೀಶ್ ಕುಮಾರ್, ಎಸಿಎಫ್ ಶುಭಂ ಸಿಂಗ್ ತನ್ವರ್ ಹಾಗೂ ಪಶುವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Forest Rangers Document Pregnant Elephant Discovery
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಆರಂಭಕ್ಕೂ ಮುನ್ನವೇ 382 ಕೋಟಿ ರೂ. ನೀರು ಪಾಲು, ವೆಚ್ಚ 10,240 ಕೋಟಿ ರೂ.ಗೆ ಏರಿಕೆ..!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X