ಎಂಗೇಜ್‌ಮೆಂಟ್ ಬೆನ್ನಲ್ಲೇ ಮದುವೆಗೆ ಸಜ್ಜಾದ ಶಾಸಕ ದರ್ಶನ್ ಧ್ರುವನಾರಾಯಣ್‌; ಖುದ್ದು ಹಳ್ಳಿಹಳ್ಳಿಗೆ ಹೋಗಿ ಆಮಂತ್ರಣ ಪತ್ರಿಕೆ ವಿತರಣೆ! Video

ಎಂಗೇಜ್‌ಮೆಂಟ್ ಕಾರ್ಯಕ್ರಮದ ಬೆನ್ನಲ್ಲೇ ಮದುವಗೆ ಸಿದ್ಧತೆ ನಡೆಸುತ್ತಿರುವ ದರ್ಶನ್ ಧ್ರುವನಾರಾಯಣ್‌ ಅವರು ಎಲ್ಲೋ ಕುಳಿತು ಯಾರನ್ನೋ ಕಳುಹಿಸಿ ಆಮಂತ್ರಣ ಪತ್ರಿಕೆ ನೀಡುವ ಬದಲು ಖುದ್ದು ತಾವೇ ಜನರನ್ನು ಭೇಟಿ ಮಾಡಿ, ಆಹ್ವಾನ ಪತ್ರಿಕೆ ನೀಡುತ್ತಿದ್ದಾರೆ.
Congress MLA Darshan Dhruvanarayan Distribute Wedding Invitation To People
ಶಾಸಕ ದರ್ಶನ್ ಧ್ರುವನಾರಾಯಣ್‌
Updated on: 

ಚಾಮರಾಜನಗರ: ಎರಡು ದಿನಗಳ ಹಿಂದಷ್ಟೇ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮೂಲದ ವೈದ್ಯೆ ಡಾ. ಶ್ರೀನಿಧಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಕಾಂಗ್ರೆಸ್ ನಾಯಕ ದಿ. ಆರ್. ಧ್ರುವನಾರಾಯಣ್ ಅವರ ಪುತ್ರ ಹಾಗೂ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್‌ ಅವರು ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಎಂಗೇಜ್‌ಮೆಂಟ್ ಕಾರ್ಯಕ್ರಮದ ಬೆನ್ನಲ್ಲೇ ಮದುವಗೆ ಸಿದ್ಧತೆ ನಡೆಸುತ್ತಿರುವ ದರ್ಶನ್ ಧ್ರುವನಾರಾಯಣ್‌ ಅವರು ಎಲ್ಲೋ ಕುಳಿತು ಯಾರನ್ನೋ ಕಳುಹಿಸಿ ಆಮಂತ್ರಣ ಪತ್ರಿಕೆ ನೀಡುವ ಬದಲು ಖುದ್ದು ತಾವೇ ಜನರನ್ನು ಭೇಟಿ ಮಾಡಿ, ಆಹ್ವಾನ ಪತ್ರಿಕೆ ನೀಡುತ್ತಿದ್ದಾರೆ.

ಶಾಸಕ ದರ್ಶನ್ ಧ್ರುವನಾರಾಯಣ್ ಖುದ್ದು ತಾವೇ ಪ್ರತಿ ಊರಿಗೂ ಹೋಗಿ ಬೀಗರೂಟಕ್ಕೆ ಜನರನ್ನು ಕರೆಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Congress MLA Darshan Dhruvanarayan Distribute Wedding Invitation To People
ಡಾ. ಶ್ರೀನಿಧಿ ಜೊತೆ ಶಾಸಕ ದರ್ಶನ್ ಧ್ರುವನಾರಾಯಣ್‌ ಎಂಗೇಜ್‌ಮೆಂಟ್; 4 ವರ್ಷ ಪ್ರೀತಿಸಿ ಮದುವೆಗೆ ಸಜ್ಜಾದ ಜೋಡಿ!

ಈ ಕುರಿತು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ದರ್ಶನ್ ಧ್ರುವನಾರಾಯಣ್ ಅವರು, ಇದೇ ನವೆಂಬರ್ 29ರಂದು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನಡೆಯಲಿರುವ ನನ್ನ ಆರತಕ್ಷತೆ ಮತ್ತು ಬೀಗರ ಔತಣಕೂಟಕ್ಕೆ ಆತ್ಮೀಯವಾಗಿ ಆಹ್ವಾನಿಸುವ ಸಲುವಾಗಿ ಇಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದೆ ಎಂದು ಹೇಳಿದ್ದಾರೆ.

ಹುಲ್ಲಹಳ್ಳಿ. ಶಿರಮಳ್ಳಿ, ಬೆಳಲೆ, ಹುಸ್ಕೂರು, ನಲ್ಲಿ ತಾಳಪುರ, ಕಪ್ಪಸೋಗೆ, ಚಂದ್ರವಾಡಿ, ಆಕಳ, ಕಡಬೂರು, ರಾಜೂರು, ಮೊತ್ತ, ಮಾದನಹಳ್ಳಿ, ಕುರಿಹುಂಡಿ, ತರಗನಹಳ್ಳಿ, ಜೆ.ಪಿ ಹುಂಡಿ, ಹರದನಹಳ್ಳಿ, ಇಜ್ಜಾಲ, ಕಾಟೂರು, ಅಲ್ಲಯ್ಯನಪುರ, ಬಸಾಪುರ, ಹುಚ್ಚಗಣಿ, ಶೆಟ್ಟಹಳ್ಳಿ, ಯಾಲೆಹಳ್ಳಿ, ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮದ ಹಿರಿಯರು ಹಾಗೂ ಯಜಮಾನರಿಗೆ ಆಮಂತ್ರಣ ಪತ್ರಿಕೆ ನೀಡಿ, ಗ್ರಾಮಸ್ಥರೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆತ್ಮೀಯವಾಗಿ ಆಹ್ವಾನಿಸಲಾಯಿತು ದರ್ಶನ್ ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ದರ್ಶನ್ ಧ್ರುವನಾರಾಯಣ್‌ ಹಾಗೂ ಡಾ. ಶ್ರೀನಿಧಿ ಅವರು ಕಳೆದ ಭಾನುವಾರ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X