

ಬೆಂಗಳೂರು: ಪ್ರಮೋದಾ ದೇವಿ ಒಡೆಯರ್ ಅವರು ಮೈಸೂರು ಅರಮನೆ ತಮ್ಮ ಖಾಸಗಿ ಆಸ್ತಿ, ಅದು ಕರ್ನಾಟಕ ಸರ್ಕಾರ ಅಥವಾ ರಾಜ್ಯದ ಜನರಿಗೆ ಸೇರಿದ್ದಲ್ಲ ಎಂದು ಹೇಳಿರುವುದು ಸರಿಯಲ್ಲ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ರಾಜಮನೆತನದ ಆಡಳಿತ ವರ್ಗದ ದುರಹಂಕಾರ ಮತ್ತು ಸ್ವಾರ್ಥದ ಮನೋಭಾವ ತೋರಿಸುತ್ತದೆ.
1998 ರಲ್ಲೇ ಮೈಸೂರು ಅರಮನೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರದ ವಶಕ್ಕೆ ವರ್ಗಾಯಿಸಲಾಗಿದೆ. ಪ್ರಜಾಪ್ರಭುತ್ವವು ರಾಜ ಪ್ರಭುತ್ವದ ಯುಗವನ್ನು ಕೊನೆಗೊಳಿಸಿದೆ.
ಮೈಸೂರು ಅರಮನೆ ನಮ್ಮ ಜನರ ಪರಂಪರೆಯ ಸಂಕೇತವೇ ಹೊರತು, ರಾಜಮನೆತೆನದ ರಕ್ತ ಸಂಬಂಧದ ಆಧಾರದ ಮೇಲೆ ಯಾರೋ ತಮ್ಮ ಪೂರ್ವಜರ ಖಾಸಗಿ ಆಸ್ತಿಯೆಂದು ಹಕ್ಕು ಸಾಧಿಸುವ ಸೊತ್ತಲ್ಲ ಎಂದು ಬರೆದುಕೊಂಡಿದ್ದಾರೆ.