'ಇದೊಂದು ಪೂರ್ವ ನಿಯೋಜಿತ, ಕ್ಯಾಬ್ ಚಾಲಕ ಮಗಳ ಬ್ರೈನ್ ವಾಶ್ ಮಾಡಿ ಬಳಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ': ಸಚಿವ ಪ್ರಿಯಾಂಕ್ ಖರ್ಗೆ

ಇದೊಂದು ಹಠಾತ್ ಕೃತ್ಯವಲ್ಲ, ಕ್ಯಾಬ್ ಚಾಲಕ ಪೂರ್ವ ಸಂಚು ನಡೆಸಿಯೇ ಮಾಡಿದ ಕುಕೃತ್ಯವೆಂದು ಕಂಡುಬರುತ್ತಿದೆ. ಕೊಲೆಗೆ ಕಾರಣ ಇನ್ನೂ ಸಂಪೂರ್ಣವಾಗಿ ಗೊತ್ತಾಗಿಲ್ಲ, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದರು.
Priyank Kharge minister and cab driver
ಹತ್ಯೆ ಮಾಡಿದ ಕ್ಯಾಬ್ ಚಾಲಕ, ಸಚಿವ ಪ್ರಿಯಾಂಕ್ ಖರ್ಗೆ(ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಇಡೀ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸುವ ಕ್ಯಾಬ್ ಚಾಲಕ ತನ್ನ ಕುಟುಂಬದ 7 ಮಂದಿಯನ್ನು ಹತ್ಯೆ ಮಾಡಿರುವ ಘಟನೆ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದೊಂದು ಹಠಾತ್ ಕೃತ್ಯವಲ್ಲ, ಕ್ಯಾಬ್ ಚಾಲಕ ಪೂರ್ವ ಸಂಚು ನಡೆಸಿಯೇ ಮಾಡಿದ ಕುಕೃತ್ಯವೆಂದು ಕಂಡುಬರುತ್ತಿದೆ. ಕೊಲೆಗೆ ಕಾರಣ ಇನ್ನೂ ಸಂಪೂರ್ಣವಾಗಿ ಗೊತ್ತಾಗಿಲ್ಲ, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದರು.

Priyank Kharge minister and cab driver
ವೈವಾಹಿಕ ಕಲಹ: ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಮಂದಿಯನ್ನು ಭೀಕರ ಹತ್ಯೆ ಮಾಡಿದ ಕ್ಯಾಬ್ ಚಾಲಕ !

ಹತ್ಯೆ ಮಾಡಿರುವ ಕ್ಯಾಬ್ ಚಾಲಕನ ಮನಸ್ಥಿತಿ ಸರಿಯಿರಲಿಲ್ಲ, ಆತನ ಮನೆಯವರ ಜೊತೆ ವರ್ತನೆ ಸರಿಯಿರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದರು. ಇಷ್ಟೊಂದು ಭೀಕರವಾಗಿ ಹತ್ಯೆ ಮಾಡಿರುವ ವ್ಯಕ್ತಿ ತನ್ನ ಪತ್ನಿಯ ಕುಟುಂಬಸ್ಥರನ್ನು ಮಾತ್ರ ಹತ್ಯೆ ಮಾಡಿದ್ದಾನೆ. ತನ್ನ ಮಗಳನ್ನು ಬ್ರೈನ್ ವಾಶ್ ಮಾಡಿ ಕೃತ್ಯಕ್ಕೆ ಸಹಕರಿಸಲು ಪ್ರೋತ್ಸಾಹ ನೀಡಿದ್ದಾನೆಂದು ತಿಳಿದುಬಂದಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X