ಉತ್ತರಾಖಂಡ ಹೆಲಿಕಾಪ್ಟರ್‌ ದುರಂತ: ಉದ್ಯಮಿ ಕುಟುಂಬಕ್ಕೆ ಮತ್ತೊಂದು ಅಘಾತ; ಮಗನ ಸಾವಿನ ನೋವಲ್ಲಿ ತಂದೆಯೂ ನಿಧನ!

ತೀವ್ರ ಅನಾರೋಗ್ಯದ ಜೊತೆಗೆ ಮಗನನ್ನು ಕಳೆದುಕೊಂಡ ತೀವ್ರ ದುಃಖ ಹಾಗೂ ಚಿಂತೆಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಪ್ರತಾಪ್ ಗೌಡ ಮತ್ತು  ನಿಂಗರಾಜು
ಪ್ರತಾಪ್ ಗೌಡ ಮತ್ತು ನಿಂಗರಾಜು
Updated on: 

ಹಾಸನ: ಇತ್ತೀಚೆಗಷ್ಟೇ ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಉದ್ಯಮಿ ಪ್ರತಾಪ್ ಗೌಡ ಸಾವನ್ನಪ್ಪಿದ ಬೆನ್ನಲ್ಲೇ, ಅವರ ತಂದೆ ನಿಂಗರಾಜು ಅವರು ನಿನ್ನೆ (ನವೆಂಬರ್ 5) ರಾತ್ರಿ ನಿಧನರಾಗಿದ್ದಾರೆ.

ತೀವ್ರ ಅನಾರೋಗ್ಯದ ಜೊತೆಗೆ ಮಗನನ್ನು ಕಳೆದುಕೊಂಡ ತೀವ್ರ ದುಃಖ ಹಾಗೂ ಚಿಂತೆಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಹಾಸನ ತಾಲೂಕಿನ ಜೋಡಿ ಕೃಷ್ಣಾಪುರದಲ್ಲಿ ಟೈಲರ್ ಆಗಿ ವೃತ್ತಿಜೀವನ ಆರಂಭಿಸಿದ್ದ ನಿಂಗರಾಜು, ನಂತರ ಸಕಲೇಶಪುರ ತಾಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ಅವರ ಪುತ್ರ ಪ್ರತಾಪ್ ಗೌಡ ಬೆಂಗಳೂರಿಗೆ ತೆರಳಿ ಕಂಟ್ರಾಕ್ಟರ್ ಹಾಗೂ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದರು.

ಮಗನ ಆಕಸ್ಮಿಕ ಸಾವಿನ ಆಘಾತದಿಂದ ಚೇತರಿಸಿಕೊಳ್ಳಲಾಗದ ನಿಂಗರಾಜು ಅವರ ಅಂತ್ಯಕ್ರಿಯೆಯು ಇಂದು ಸ್ವಗ್ರಾಮ ಬಾಚಿಹಳ್ಳಿಯಲ್ಲಿ ನೆರವೇರಲಿದೆ.

ಪ್ರತಾಪ್ ಗೌಡ ಮತ್ತು  ನಿಂಗರಾಜು
ಉತ್ತರಾಖಂಡ ಹೆಲಿಕಾಪ್ಟರ್ ಅಪಘಾತ ಸ್ಥಳದ ಬಳಿ AAIB ಅಧಿಕಾರಿಗೆ ಅನಾರೋಗ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X