ಪೊಲೀಸರ ಸಮಯಪ್ರಜ್ಞೆಯಿಂದ ಉಳಿದ ಬಾಲಕನ ಜೀವ: ಮತ್ತಷ್ಟು ಹತ್ಯೆ ತಡೆದ ಕನ್ನಡ ಸಂದೇಶ!

ಇದೇ ವೇಳೆ, ಕುಟುಂಬದವರು ಪ್ರವಾಸಕ್ಕೆ ತೆರಳಿದ್ದಾರೆ ಎಂಬ ರೀತಿಯಲ್ಲಿ ಪರಿಸ್ಥಿತಿಯನ್ನು ಬಿಂಬಿಸಲು ಆರೋಪಿ ಹಲವು ಪ್ರಯತ್ನಗಳನ್ನು ನಡೆಸಿದ್ದ ಎಂಬ ಆರೋಪವೂ ಕೇಳಿಬಂದಿದೆ.
7 murder case
ಬೆಂಗಳೂರಿನಲ್ಲಿ 7 ಮಂದಿ ಕೊಲೆ ಪ್ರಕರಣ
Updated on: 

ಬೆಂಗಳೂರು: ರಾಜಾಜಿನಗರದಲ್ಲಿ ನಡೆದ ಏಳು ಮಂದಿಯ ಸರಣಿ ಹತ್ಯೆ ಪ್ರಕರಣದಲ್ಲಿ ಒಂದು ಕನ್ನಡ ಸಂದೇಶವೇ ಪೊಲೀಸರಿಗೆ ಮಹತ್ವದ ಸುಳಿವಾಗಿ ಪರಿಣಮಿಸಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.

ಹತ್ಯೆಯಾದ ಶಂಕರ್ ಅವರ ಮೊಬೈಲ್‌ನಿಂದ ಕನ್ನಡದಲ್ಲಿ ಕಳುಹಿಸಲಾದ ರಿಪ್ಲೈ ಸಂದೇಶವನ್ನು ಗಮನಿಸಿದ ಸ್ನೇಹಿತರು ಅನುಮಾನಗೊಂಡಿದ್ದೇ ಪ್ರಕರಣದ ಭೇದಿಸಲು ನೆರವಾಗಿದೆ. ಇದೇ ಅನುಮಾನ ಮತ್ತಷ್ಟು ಅನಾಹುತ ಸಂಭವಿಸುವ ಮುನ್ನ ಪೊಲೀಸರ ಗಮನಕ್ಕೆ ಪ್ರಕರಣ ತಲುಪುವಂತೆ ಮಾಡಿತು.

ಶಂಕರ್ ಅವರ ಮೊಬೈಲ್ ಬಳಸಿ ಆರೋಪಿ ಇಂದುಶೇಖರ್ ಸ್ನೇಹಿತರಿಗೆ ಕನ್ನಡದಲ್ಲಿ ರಿಪ್ಲೈ ಸಂದೇಶ ಕಳುಹಿಸಿದ್ದ. ಆದರೆ, ಶಂಕರ್ ಈ ಹಿಂದೆ ತಮ್ಮ ಸ್ನೇಹಿತರಿಗೆ ಸಾಮಾನ್ಯವಾಗಿ ಕನ್ನಡದಲ್ಲಿ ಸಂದೇಶಗಳಿಗೆ ಉತ್ತರಿಸುತ್ತಿರಲಿಲ್ಲ. ಇದು ಸ್ನೇಹಿತರ ಗಮನಕ್ಕೆ ಬಂದಿದೆ.

ಶಂಕರ್ ಮೊಬೈಲ್‌ನಿಂದ ಬಂದ ಕನ್ನಡ ಸಂದೇಶಗಳು ಅನುಮಾನ ಹುಟ್ಟಿಸಿದ್ದರಿಂದ, ಸ್ನೇಹಿತರು ನಳಿನಿ ಅವರ ತಾಯಿಗೆ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ಇದೇ ವೇಳೆ, ಕುಟುಂಬದವರು ಪ್ರವಾಸಕ್ಕೆ ತೆರಳಿದ್ದಾರೆ ಎಂಬ ರೀತಿಯಲ್ಲಿ ಪರಿಸ್ಥಿತಿಯನ್ನು ಬಿಂಬಿಸಲು ಆರೋಪಿ ಹಲವು ಪ್ರಯತ್ನಗಳನ್ನು ನಡೆಸಿದ್ದ ಎಂಬ ಆರೋಪವೂ ಕೇಳಿಬಂದಿದೆ.

7 murder case
ಹಂತಕನೊಂದಿಗೆ 5 ದಿನ: 4 ಮೃತದೇಹ ಎಸೆದಿದ್ದನ್ನು ಕಣ್ಣಾರೆ ನೋಡಿದ್ದ ಬಾಲಕ!

ಮೊಬೈಲ್ ಸಂದೇಶದ ಭಾಷಾ ಶೈಲಿಯಲ್ಲಿನ ಬದಲಾವಣೆ ಸ್ನೇಹಿತರ ಅನುಮಾನಕ್ಕೆ ಕಾರಣವಾಯಿತು. ಈ ಸಣ್ಣ ಸುಳಿವೇ ಪೊಲೀಸರಿಗೆ ಪ್ರಕರಣದ ಬಗ್ಗೆ ಮಾಹಿತಿ ಸಿಗಲು ಮತ್ತು ತನಿಖೆ ಆರಂಭಿಸಲು ನೆರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X