ಡಾ. ರಾಜ್‌ಕುಮಾರ್ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ: ಕಚ್ಚಾ ಬಾಂಬ್ ಎಸೆದಿರುವ ಶಂಕೆ, ಪೊಲೀಸರಿಂದ ತನಿಖೆ..!

ಯಾರೋ ಕಿಡಿಗೇಡಿಗಳು ಕಚ್ಚಾ ಬಾಂಬ್ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ತಾಳವಾಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Mysterious Blast
ಸ್ಫೋಟದಿಂದ ಕಿಟಕಿ ಗಾಜುಗಳು ಪುಡಿಪುಡಿಯಾಗಿರುವುದು.
Updated on: 

ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ಅವರ ದೂರದ ಸಂಬಂಧಿಗೆ ಸೇರಿದ ಮನೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಘಟನೆಯಿಂದ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.

ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿ ಮಂಗಳಮ್ಮ ಎಂಬುವವರ ಮನೆಯ ಮುಂದೆ ಈ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ ಗಾಜುಗಳು ಒಡೆದು ಚೂರುಚೂರಾಗಿವೆ.

ಯಾರೋ ಕಿಡಿಗೇಡಿಗಳು ಕಚ್ಚಾ ಬಾಂಬ್ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ತಾಳವಾಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳದಲ್ಲಿ ಪತ್ತೆಯಾದ ಸ್ಫೋಟದ ಅವಶೇಷಗಳನ್ನು ಸಂಗ್ರಹಿಸಿರುವ ಪೊಲೀಸರು, ಅವುಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಇದು ಕಚ್ಚಾ ಬಾಂಬ್ ಸ್ಫೋಟವೇ ಅಥವಾ ಪಟಾಕಿಯಿಂದ ಸಂಭವಿಸಿದ ಸ್ಫೋಟವೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

Mysterious Blast
ದೀಪಾವಳಿ ಸಂಭ್ರಮದ ನಡುವೆ ಸೂತಕ: ಕೈಯಲ್ಲೇ ರಾಕೆಟ್ ಸ್ಫೋಟ; 10 ವರ್ಷದ ಬಾಲಕ ಸಾವು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X