ಮದುವೆಗೆ ಆಹ್ವಾನ ಪತ್ರಿಕೆ ನೀಡಲು ತೆರಳುತ್ತಿದ್ದಾಗ ಸ್ಕೂಟಿಗೆ ಲಾರಿ ಡಿಕ್ಕಿ: ವಧು ಸೇರಿ ಇಬ್ಬರ ದುರ್ಮರಣ

ಈ ಅಪಘಾತವು ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಸಿಂಧುಶ್ರೀ ಅವರ ವಿವಾಹವು ನವೆಂಬರ್ 16 ರಂದು ನಡೆಯಬೇಕಿತ್ತು.
Sindhushri
ಸಿಂದುಶ್ರೀ
Updated on: 

ಬೆಂಗಳೂರು: ವೇಗವಾಗಿ ಬಂದ ಟ್ರಕ್ ಅವರ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ತೆರಳುತ್ತಿದ್ದ 27 ವರ್ಷದ ಯುವತಿ ಮತ್ತು ಆಕೆಯ 19 ವರ್ಷದ ಸೋದರಸಂಬಂಧಿ, ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಮಂಡ್ಯ ಮೂಲದ ಸಿಂಧುಶ್ರೀ ಹಾಗೂ ಅವರ ಅತ್ತೆಯ ಮಗಳು ವಿದ್ಯಾ ಮೃತಪಟ್ಟಿದ್ದಾರೆ. ದುರಂತವೆಂದರೆ, ಮೃತ ಸಿಂಧುಶ್ರೀ ಅವರಿಗೆ ಇನ್ನೇನು ನಾಲ್ಕೈದು ದಿನಗಳಲ್ಲಿ (ಬರುವ ಸೋಮವಾರ) ವಿವಾಹ ನಡೆಯಬೇಕಿತ್ತು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.

ಈ ಅಪಘಾತವು ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಸಿಂಧುಶ್ರೀ ಅವರ ವಿವಾಹವು ನವೆಂಬರ್ 16 ರಂದು ನಡೆಯಬೇಕಿತ್ತು.

ಭಾನುವಾರ ರಿಸೆಪ್ಷನ್ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧುಗಳಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಲು ಸಿಂಧುಶ್ರೀ ತಮ್ಮ ಅತ್ತೆ ಮಗಳು, ಕಾಲೇಜು ವಿದ್ಯಾರ್ಥಿನಿ ವಿದ್ಯಾ ಜೊತೆ ಸ್ಕೂಟಿಯಲ್ಲಿ ಹೊರಟಿದ್ದರು. ಮಧ್ಯಾಹ್ನ ಸುಮಾರು 3:30ರ ವೇಳೆಗೆ ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಬಳಿ ಚಲಿಸುತ್ತಿದ್ದಾಗ, ಹಿಂಬದಿಯಿಂದ ಅತಿ ವೇಗವಾಗಿ ಬಂದ ಟ್ರಕ್ ಇವರ ಸ್ಕೂಟಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

Sindhushri
ಹಾವೇರಿ: ರಸ್ತೆ ಕೆಲಸ ಮಾಡುತ್ತಿದ್ದ ವೇಳೆ ಭೀಕರ ಅಪಘಾತ; ಕಾರು ಡಿಕ್ಕಿಯಾಗಿ ಇಬ್ಬರು ‌ಮಹಿಳೆಯರು ಸಾವು!

ತೀವ್ರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತವಾದ ಕೂಡಲೇ ಟ್ರಕ್ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ರಾಜಸ್ಥಾನ ನೋಂದಣಿ ಸಂಖ್ಯೆಯನ್ನು ಹೊಂದಿರುವ ಟ್ರಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X