ಫಿಲ್ಟರ್ ಮರಳು ಮಾಫಿಯಾಕ್ಕೆ ಪರೋಕ್ಷ ಬೆಂಬಲ ಆರೋಪ: ನಂಗಲಿ ಪಿಎಸ್‌ಐ, ಕಾನ್ಸ್‌ಟೇಬಲ್ ಅಮಾನತು!

ಇನ್ನೂ ನಂಗಲಿ ದೊಡ್ಡಕೆರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೇಲೆ ಮುಳಬಾಗಿಲು ಎಎಸ್ಪಿ ಮೋನಿಷಾ ಶುಕ್ರವಾರ ರಾತ್ರಿ ದಾಳಿ ಮಾಡಿದ್ದರು. ದಾಳಿ ವೇಳೆ ಒಂದು ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿ ವಶಕ್ಕೆ ಪಡೆಯಲಾಗಿತ್ತು.
PSI Vidhyashree
ಅಮಾನತುಗೊಂಡ ಪಿಎಸ್ ಐ ವಿದ್ಯಾಶ್ರೀ
Updated on: 

ಕೋಲಾರ: ಅಕ್ರಮ ಫಿಲ್ಟರ್ ಮರಳು ಮಾಫಿಯಾ ತಡೆಯುವಲ್ಲಿ ವಿಫಲವಾದ ಹಾಗೂ ಪರೋಕ್ಷ ಬೆಂಬಲದ ಆರೋಪದ ಮೇಲೆ ಕೋಲಾರ ಜಿಲ್ಲೆ ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ (PSI) ಹಾಗೂ ಕಾನ್ಸ್‌ಟೇಬಲ್‌ (Constable) ಒಬ್ಬರನ್ನು ಅಮಾನತು ಮಾಡಲಾಗಿದೆ.

ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ ವಿದ್ಯಾಶ್ರೀ ಹಾಗೂ ನಂಗಲಿ ಠಾಣೆಯ ಎಸ್‌ಬಿ ಕಾನ್ಸ್‌ಟೇಬಲ್ ಪ್ರವೀಣ್ ಅಮಾನತುಗೊಂಡವರು. ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರು ಅಮಾನತು ಆದೇಶ ಮಾಡಿದ್ದಾರೆ.

ಇನ್ನೂ ನಂಗಲಿ ದೊಡ್ಡಕೆರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೇಲೆ ಮುಳಬಾಗಿಲು ಎಎಸ್ಪಿ ಮೋನಿಷಾ ಶುಕ್ರವಾರ ರಾತ್ರಿ ದಾಳಿ ಮಾಡಿದ್ದರು. ದಾಳಿ ವೇಳೆ ಒಂದು ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿ ವಶಕ್ಕೆ ಪಡೆಯಲಾಗಿತ್ತು.

PSI Vidhyashree
ಮೊಬೈಲ್ ಬಳಸಿ VAO ಪರೀಕ್ಷೆಯಲ್ಲಿ ಅಕ್ರಮ ಕೇಸ್: 4 ಹೆಡ್‌ಕಾನ್ಸ್‌ಟೆಬಲ್‌ ಅಮಾನತು; ಸಿಪಿಐ ಹಾಗೂ ಪಿಎಸ್‌ಐಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು

ನಂತರ ಎಎಸ್ಪಿ ಮೋನಿಷಾ ನೀಡಿದ ವರದಿ ಹಿನ್ನೆಲೆ ನಂಗಲಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ನಂಗಲಿ ಠಾಣೆಯ ಕಾನ್ಸ್‌ಟೇಬಲ್ ಒಬ್ಬರನ್ನು ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X