ಪದ್ಮನಾಭನಗರದಲ್ಲಿ ಇಂದಿನಿಂದ ಹೊಸ ಗುತ್ತಿಗೆದಾರರ ಕೆಲಸ ಶುರು: 16 ವರ್ಷದ ಕಸದ ಗೋಳಿಗೆ ಸಿಗುತ್ತಾ ಮುಕ್ತಿ..?

ಪದ್ಮನಾಭನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಒಂದು ದಶಕಕ್ಕೂ ಹೆಚ್ಚು ಕಾಲ 18ನೇ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿರುವ ಕಸದ ತಾಣದಿಂದ ಹರಡುವ ಅಸಹನೀಯ ದುರ್ವಾಸನೆ ಸಹಿಸಿಕೊಂಡು ಬದುಕುತ್ತಿದ್ದಾರೆ.
Garbage spilling onto nearly half the carriageway has also been obstructing the movement of vehicles.
ರಸ್ತೆಯ ಅರ್ಧದಷ್ಟು ಭಾಗದಲ್ಲಿ ಕಸ ಸುರಿಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.
Updated on: 

ಬೆಂಗಳೂರು: ಕಳೆದ 16 ವರ್ಷಗಳಿಂದ ಪದ್ಮನಾಭನಗರದ ನಿವಾಸಿಗಳನ್ನು ಕಾಡುತ್ತಿದ್ದ ಕಸದ ಸಮಸ್ಯೆಗೆ ಇಂದು (ನ. 23) ಮುಕ್ತಿ ಸಿಗುವ ಭರವಸೆ ಮೂಡಿದೆ.

ಸ್ಥಳೀಯರು ಹಾಗೂ ಶಾಲಾ ಮಕ್ಕಳ ನಿರಂತರ ಹೋರಾಟದ ಫಲವಾಗಿ ಇಂದಿನಿಂದ ಇಲ್ಲಿ ನೂತನ ತ್ಯಾಜ್ಯ ನಿರ್ವಹಣಾ ಗುತ್ತಿಗೆದಾರರು ಅಧಿಕೃತವಾಗಿ ಕಾರ್ಯ ಆರಂಭಿಸಲಿದ್ದಾರೆ.

ಸ್ಥಳೀಯ ನಿವಾಸಿಗಳ ಸತತ ಹೋರಾಟದ ಬಳಿಕ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಕ್ಷೇತ್ರದ ಶಾಸಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ, ಹಲವು ವರ್ಷಗಳಿಂದ ಕಾಡುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು ಎಂಬ ಆಶಾಭಾವನೆ ನಿವಾಸಿಗಳಲ್ಲಿ ಮೂಡಿದೆ.

ಪದ್ಮನಾಭನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಒಂದು ದಶಕಕ್ಕೂ ಹೆಚ್ಚು ಕಾಲ 18ನೇ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿರುವ ಕಸದ ತಾಣದಿಂದ ಹರಡುವ ಅಸಹನೀಯ ದುರ್ವಾಸನೆ ಸಹಿಸಿಕೊಂಡು ಬದುಕುತ್ತಿದ್ದಾರೆ.

ಕಸದ ರಾಶಿಯಿಂದಾಗಿ ಇಡೀ ಪಾದಚಾರಿ ಮಾರ್ಗವೇ ಮುಚ್ಚಿಹೋಗಿದ್ದು, ಪಾದಚಾರಿಗಳು ಜೀವದ ಹಂಗು ತೊರೆದು ರಸ್ತೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಸುಮಾರು ಅರ್ಧ ಭಾಗದವರೆಗೆ ಕಸ ಹರಡಿಕೊಂಡಿರುವುದರಿಂದ ವಾಹನಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಕಸದ ತಾಣದ ವಿರುದ್ಧ ಹೋರಾಟ ನಡೆಸುತ್ತಿರುವ ವರ್ಷಾ ಶೆವಾಲೆ ಮಾತನಾಡಿ, ಸುಮಾರು 16 ವರ್ಷಗಳಿಂದ ನಾವು ಈ ಸಮಸ್ಯೆ ಎದುರಿಸುತ್ತಿದ್ದೇವೆ. ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ಆಟೊಗಳು ಅದನ್ನು ದೊಡ್ಡ ಲಾರಿಗಳಿಗೆ ವರ್ಗಾಯಿಸುವ ಸ್ಥಳವಾಗಿ ಈ ಪ್ರದೇಶ ಬಳಕೆಯಾಗುತ್ತಿದೆ. ಕಸ ವರ್ಗಾವಣೆ ಸಂದರ್ಭದಲ್ಲಿ ತ್ಯಾಜ್ಯ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗುತ್ತದೆ. ಆದರೆ, ಅದನ್ನು ಸರಿಯಾಗಿ ತೆರವುಗೊಳಿಸುವುದಿಲ್ಲ. ಇದರ ಜತೆಗೆ ಮನೆಮನೆಗೆ ತೆರಳಿ ಸಮರ್ಪಕವಾಗಿ ಕಸ ಸಂಗ್ರಹಿಸದ ಕಾರಣ ಕೆಲವರು ಇದೇ ಸ್ಥಳದಲ್ಲಿ ತಂದು ಕಸ ಸುರಿಯುತ್ತಿದ್ದಾರೆ. ಇದರಿಂದ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದೆ ಎಂದು ಹೇಳಿದ್ದಾರೆ.

Garbage spilling onto nearly half the carriageway has also been obstructing the movement of vehicles.
ಬೆಂಗಳೂರು ಅಭಿವೃದ್ಧಿಗೆ 10 ವರ್ಷಗಳ ಮೆಗಾ ಪ್ಲ್ಯಾನ್‌; ₹1 ಲಕ್ಷ ಕೋಟಿ ವೆಚ್ಚದ ಯೋಜನೆಗಳ ಘೋಷಣೆ..!

ಕಸದ ರಾಶಿಯನ್ನು ತೆರವುಗೊಳಿಸಿದರೂ ಜನರು ರಾತ್ರಿ ವೇಳೆ ಮತ್ತೆ ಬಂದು ಕಸ ಸುರಿಯುತ್ತಾರೆ. ಈ ಪ್ರದೇಶದ ಸಮೀಪ ಶಾಲೆಗಳಿದ್ದು, ಪ್ರತಿದಿನ ನೂರಾರು ಮಕ್ಕಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಇದರಿಂದ ಮಕ್ಕಳ ಸುರಕ್ಷತೆಗೂ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅವ್ಯವಸ್ಥಿತವಾಗಿ ಕಸ ಸುರಿಯುವುದಷ್ಟೇ ಅಲ್ಲದೆ, ಆಗಾಗ್ಗೆ ಕಸದ ರಾಶಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ವಾಯುಮಾಲಿನ್ಯ ಹೆಚ್ಚುವುದರ ಜತೆಗೆ ಸ್ಥಳೀಯ ನಿವಾಸಿಗಳಿಗೆ ಮತ್ತಷ್ಟು ತೊಂದರೆಯಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

ಶೂನ್ಯ ತ್ಯಾಜ್ಯ ಒಕ್ಕೂಟದ ಸಂಸ್ಥಾಪಕ ಹಾಗೂ ನಗರ ಸುಸ್ಥಿರತೆ ಪ್ರತಿಪಾದಕ ಧ್ರುವ್ ನಾಗರಾಜನ್ ಕೌಂಡಿನ್ಯ ಮಾತನಾಡಿ, ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಶೇ 100ರಷ್ಟು ಪರಿಣಾಮಕಾರಿಯಾಗಿಲ್ಲದಿರಬಹುದು. ಆದರೂ ಆಟೊಗಳು ಮನೆಗಳಿಂದ ಕಸ ಸಂಗ್ರಹಿಸುತ್ತಿವೆ. ಆದರೆ, ಆಟೊಗಳು ಬಾರದ ದಿನ ಅಥವಾ ಕಸ ಸಂಗ್ರಹಿಸುವ ವಾಹನ ತಪ್ಪಿಸಿಕೊಂಡವರು ನಾಗರಿಕ ಪ್ರಜ್ಞೆಯನ್ನೂ ಲೆಕ್ಕಿಸದೆ ರಸ್ತೆಯಲ್ಲೇ ಕಸ ಸುರಿಯುತ್ತಿದ್ದಾರೆ. ಅಂತಿಮವಾಗಿ ಈ ತ್ಯಾಜ್ಯ ಭೂಭರ್ತಿ ಪ್ರದೇಶಗಳಿಗೆ ಸೇರುತ್ತದೆ. ಇದರಿಂದ ಪರಿಸರದ ಮೇಲಿನ ಹೊರೆ ಹೆಚ್ಚುತ್ತದೆ ಎಂದು ಹೇಳಿದ್ದಾರೆ.

ಕಸದ ಕಪ್ಪು ತಾಣವನ್ನು ಒಂದು ತಿಂಗಳೊಳಗೆ ಸಂಪೂರ್ಣ ತೆರವುಗೊಳಿಸಿ, ಮತ್ತೆ ಅಲ್ಲಿ ಕಸ ಸುರಿಯದಂತೆ ತಡೆಗೋಡೆ ಅಳವಡಿಸುವುದಾಗಿ ಶಾಸಕ ಆರ್. ಅಶೋಕ್ ಭರವಸೆ ನೀಡಿದ್ದಾರೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಈ ಪ್ರದೇಶದ ತ್ಯಾಜ್ಯ ನಿರ್ವಹಣೆಯ ಹೊಣೆ ಹೊತ್ತಿದ್ದ ಗುತ್ತಿಗೆದಾರನನ್ನು ಬದಲಾಯಿಸಲಾಗಿದೆ. ನೂತನ ಗುತ್ತಿಗೆದಾರ ನಾಳೆಯಿಂದ (ನವೆಂಬರ್ 23) ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಬದಲಾವಣೆ ಹಾಗೂ ಜನಪ್ರತಿನಿಧಿಗಳು ನೀಡಿರುವ ಭರವಸೆಗಳ ಮೇಲೆ ನಾವು ನಿರೀಕ್ಷೆ ಇಟ್ಟುಕೊಂಡಿದ್ದೇವೆ.

ಬ್ಲ್ಯಾಕ್ ಸ್ಪಾಟ್ ನ್ನು ಶಾಶ್ವತವಾಗಿ ತೆರವುಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. ಜನಪ್ರತಿನಿಧಿಗಳು ನೀಡಿರುವ ಭರವಸೆಗಳು ಈಡೇರದಿದ್ದರೆ ನಾವು ಬೀದಿಗಿಳಿದು ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X