ಬೆಂಗಳೂರು: ಸಿನಿಮಾ ಪ್ರದರ್ಶನ ವೇಳೆ ಭಾರತಿ ಥಿಯೇಟರ್‌ನಲ್ಲಿ ಮೇಲ್ಛಾವಣಿ ಕುಸಿತ, ಮೂವರಿಗೆ ಸಣ್ಣಪುಟ್ಟ ಗಾಯ; Video

ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಸಂದರ್ಭದಲ್ಲೇ ಚಿತ್ರಮಂದಿರದೊಳಗಿನ ಮೇಲ್ಛಾವಣಿಯ ಭಾಗವೊಂದು ಕುಸಿದು ಬಿದ್ದಿದೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
Ceiling fall
ಮೇಲ್ಛಾವಣಿ ಕುಸಿತ
Updated on: 

ಬೆಂಗಳೂರು: ನಿನ್ನೆ ಬುಧವಾರ ಸುರಿದ ಭಾರೀ ಮಳೆಯ ನಡುವೆ ಬೆಂಗಳೂರಿನ ಪೀಣ್ಯದಲ್ಲಿರುವ ಭಾರತಿ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿದ್ದ ವೇಳೆ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ.

ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಸಂದರ್ಭದಲ್ಲೇ ಚಿತ್ರಮಂದಿರದೊಳಗಿನ ಮೇಲ್ಛಾವಣಿಯ ಭಾಗವೊಂದು ಕುಸಿದು ಬಿದ್ದಿದೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಘಟನೆಯ ಬಳಿಕ ಚಿತ್ರಮಂದಿರದ ಸಿಬ್ಬಂದಿ ಸಿನಿಮಾ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಚಿತ್ರಮಂದಿರದ ಸುರಕ್ಷತೆ ಹಾಗೂ ರಚನಾತ್ಮಕ ಸ್ಥಿರತೆಯನ್ನು ಅಧಿಕಾರಿಗಳು ಮತ್ತು ಸುರಕ್ಷತಾ ಪರಿಶೀಲಕರು ಪರಿಶೀಲಿಸುವ ಸಾಧ್ಯತೆಯಿದೆ.

Ceiling fall
ಭರ್ಜರಿ ಓಪನಿಂಗ್ ಕಂಡರೂ ಬಾಕ್ಸ್ ಆಫೀಸ್‌ನಲ್ಲಿ ಮಂಕಾದ Toxic! ಥಿಯೇಟ್ರಿಕಲ್ ಪ್ರದರ್ಶನ ಮುಕ್ತಾಯಕ್ಕೆ ಮುನ್ನ, 1 ತಿಂಗಳಲ್ಲಿ Yash ಸಿನಿಮಾ ಗಳಿಸಿದ್ದೆಷ್ಟು?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com