198 ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸಲು ಸಂಚು ರೂಪಿಸಿದ ಆರೋಪ; ಬಿಜೆಪಿ ನಾಯಕರ ವಿರುದ್ಧ FIR ದಾಖಲು

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 12ರಲ್ಲಿ ಬೂತ್ ಮಟ್ಟದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮೀರಾಸಾಬ್ ಸನದಿ ನೀಡಿದ ದೂರಿನ ಮೇರೆಗೆ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Representative Image
ಪ್ರಾತಿನಿಧಿಕ ಚಿತ್ರ
Updated on: 

ಬೆಳಗಾವಿ: ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಸಂದರ್ಭದಲ್ಲಿ, ಬೆಳಗಾವಿ ಜಿಲ್ಲೆಯಲ್ಲಿ 'ಫಾರ್ಮ್-7' ಅರ್ಜಿಗಳನ್ನು ಬಳಸಿಕೊಂಡು 198 ಮುಸ್ಲಿಮರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಯತ್ನಿಸಿದ ಆರೋಪದ ಮೇಲೆ ಬಿಜೆಪಿ ನಾಯಕ ರವಿ ಪಾಟೀಲ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 12ರಲ್ಲಿ ಬೂತ್ ಮಟ್ಟದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಮೀರಾಸಾಬ್ ಸನದಿ ಅವರು ಸೆಪ್ಟೆಂಬರ್ 30 ರಂದು ನೀಡಿದ ದೂರಿನ ಮೇರೆಗೆ ಬೆಳಗಾವಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಫ್‌ಐಆರ್ ಪ್ರಕಾರ, ದೂರುದಾರರು ಚುನಾವಣಾ ಆಯೋಗವು (EC) ನಡೆಸುತ್ತಿದ್ದ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಕಾರ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಗೆ (BLO) ಸಹಾಯ ಮಾಡುತ್ತಿದ್ದಾಗ ಮತ್ತು ಮತದಾರರ ಮಾಹಿತಿಯನ್ನು ಪರಿಶೀಲಿಸುವಾಗ, ಸೆಪ್ಟೆಂಬರ್ 22 ರಂದು ಮಧ್ಯಾಹ್ನ ಸುಮಾರು 2.30ರ ಸುಮಾರಿಗೆ ಆರೋಪಿಗಳಾದ ಪಾಟೀಲ್, ಶಂಕರ್ ಬೀರಪ್ಪ ನಾಯಕ್ ಮತ್ತು ಪ್ರಶಾಂತ್ ದೀಪಕ್ ಮುಂಡಿನ್ಮನಿ ಅವರು ಇತರ 20-25 ಮಂದಿಯೊಂದಿಗೆ ಸೇರಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಮತದಾರರನ್ನು ಮಾತ್ರ ಗುರಿಯಾಗಿಸಲು ಸಂಚು ರೂಪಿಸಿದರು ಎಂದು ದೂರಿದ್ದಾರೆ.

ಅವರು ಮತದಾರರ ಪಟ್ಟಿಯಿಂದ 198 ಮತದಾರರ ಹೆಸರುಗಳನ್ನು ತೆಗೆದುಹಾಕಲು ಸಂಚು ರೂಪಿಸಿದ್ದಲ್ಲದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವು ಅಸಲಿ ದಾಖಲೆಗಳೆಂದೂ ಹಾಗೂ ಚುನಾವಣಾ ನೋಂದಣಿ ಅಧಿಕಾರಿಯಿಂದ (ERO) ನೀಡಲ್ಪಟ್ಟಿವೆಯೆಂದೂ ಸುಳ್ಳು ಹೇಳಿ ಬೂತ್ ಮಟ್ಟದ ಅಧಿಕಾರಿಗೆ (BLO) ಸಲ್ಲಿಸಿದರು ಎಂದು ದೂರುದಾರರು ಆರೋಪಿಸಿದ್ದಾರೆ.

ಆರೋಪಿಗಳು ನಕಲಿ ದಾಖಲೆಗಳೊಂದಿಗೆ ಸಲ್ಲಿಸಿದ್ದ 'ಫಾರ್ಮ್-7' ಅರ್ಜಿಗಳಲ್ಲಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಹೆಸರುಗಳೂ ಇದ್ದವು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

Representative Image
Watch | 'SIR ದೊಡ್ಡ ಪಿತೂರಿ'; ಅರ್ಹ ಮತದಾರರ ಹೆಸರು ಅಳಿಸಲು Form-7 ಪೂರೈಕೆ'

'ಫಾರ್ಮ್-7' ಎಂಬುದು ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಅಥವಾ ತೆಗೆದುಹಾಕುವ ಪ್ರಸ್ತಾವನೆ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಬಳಸುವ ಮತದಾರರ ಅರ್ಜಿಯಾಗಿದೆ.

'ಅವರು ಬಿಎಲ್‌ಒ ಮೇಲೆ ಒತ್ತಡ ಹೇರಿ, ಇಆರ್‌ಒ ಎಂದು ಹೇಳಿಕೊಳ್ಳುವಂತೆ ಮತ್ತೊಬ್ಬ ವ್ಯಕ್ತಿಯನ್ನು ದೂರವಾಣಿಯಲ್ಲಿ ಮಾತನಾಡಿಸಿ ಅವರಿಂದ ಸಹಿ ಪಡೆದುಕೊಂಡಿದ್ದಾರೆ; ಆ ಮೂಲಕ ದೂರುದಾರರಿಗೆ ಹಾಗೂ ಮತದಾರರಿಗೆ ವಂಚನೆ ಎಸಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ' ಎಂದು ವರದಿಯಾಗಿದೆ.

ಮತದಾರರ ಪಟ್ಟಿಯಿಂದ ಮುಸ್ಲಿಂ ಸಮುದಾಯದ 198 ಮತದಾರರ ಹೆಸರುಗಳನ್ನು ತೆಗೆದುಹಾಕಿದರೆ, ಇದರಿಂದ ಬಾಧಿತರಾದವರು ಆಕ್ರೋಶಗೊಂಡು ಹಿಂಸಾಚಾರದಲ್ಲಿ ತೊಡಗಬಹುದು ಮತ್ತು ಶಾಂತಿ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಉಂಟಾಗುವಂತಹ ಪರಿಸ್ಥಿತಿಯನ್ನು ಸೃಷ್ಟಿಸುವ ಉದ್ದೇಶವನ್ನು ಅವರು ಹೊಂದಿದ್ದರು ಎಂಬುದು ಕಂಡುಬಂದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) (ವಂಚನೆ), 336(3) (ನಕಲಿ ದಾಖಲೆ ಸೃಷ್ಟಿ/ಫೋರ್ಜರಿ), 336(4) (ಖ್ಯಾತಿಗೆ ಹಾನಿ ಮಾಡುವ ಉದ್ದೇಶದ ನಕಲಿ ದಾಖಲೆ ಸೃಷ್ಟಿ), 353 (ಸಾರ್ವಜನಿಕ ಗೊಂದಲಕ್ಕೆ ಕಾರಣವಾಗುವ ಹೇಳಿಕೆಗಳು), 61(2) (ಅಪರಾಧ ಸಂಚು), 3(5) (ಸಾಮಾನ್ಯ ಉದ್ದೇಶ), 192 (ಗಲಭೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು 190 (ಸಾಮಾನ್ಯ ಉದ್ದೇಶದ ಈಡೇರಿಕೆಗಾಗಿ ಎಸಗಲಾದ ಅಪರಾಧಕ್ಕೆ ಕಾನೂನುಬಾಹಿರ ಗುಂಪಿನ ಪ್ರತಿಯೊಬ್ಬ ಸದಸ್ಯನೂ ಹೊಣೆಗಾರನಾಗಿರುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Representative Image
ಸಿಎಂ ಡಿ.ಕೆ ಶಿವಕುಮಾರ್ ತಾಯಿಗೆ ನೋಟಿಸ್ ಜಾರಿ ಮಾಡಿಲ್ಲ: ಚುನಾವಣಾಧಿಕಾರಿ ಸ್ಪಷ್ಟನೆ!

ಮೈಸೂರಿನಲ್ಲಿ ಪ್ರಕರಣ ದಾಖಲು

'SIR ಅಕ್ರಮಗಳಿಗೆ' ಸಂಬಂಧಿಸಿದಂತೆ ಕನಿಷ್ಠ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಮೈಸೂರಿನಲ್ಲಿ ಸ್ಥಳೀಯ ಬಿಜೆಪಿ ನಾಯಕ ಮತ್ತು ಇತರರ ವಿರುದ್ಧ ದಾಖಲಾದ ಪ್ರಕರಣವೊಂದು ಸೇರಿದೆ; ಇದರಲ್ಲಿ ದೂರುದಾರರು, 'SIR ಪ್ರಕ್ರಿಯೆಯ ಸಂದರ್ಭದಲ್ಲಿ ತಮ್ಮ, ತಮ್ಮ ಕುಟುಂಬದ ಮತ್ತು ಮುಸ್ಲಿಂ ಸಮುದಾಯದ ಇತರ ಸದಸ್ಯರ ಮತಗಳನ್ನು ಅಳಿಸಿಹಾಕುವ 'ಪಿತೂರಿ' ನಡೆಸಲಾಗಿದೆ ಹಾಗೂ ಆ ಮೂಲಕ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಾಗಿದೆ' ಎಂದು ಆರೋಪಿಸಲಾಗಿದೆ.

ಬೀದರ್‌ನಲ್ಲಿ ಮತ್ತೊಂದು ಪ್ರಕರಣ ದಾಖಲು

ಬೀದರ್‌ನಲ್ಲಿ ವರದಿಯಾದ ಮತ್ತೊಂದು ಪ್ರಕರಣದಲ್ಲಿ, ಭಲ್ಕಿಯ 40 ವರ್ಷ ವಯಸ್ಸಿನ ಉದ್ಯಮಿ ಹಾಗೂ ಮತದಾರರಾದ ಮೊಹಮ್ಮದ್ ಅತೀಕ್ ಅಹ್ಮದ್ ಅವರು ದೂರು ನೀಡಿದ್ದಾರೆ. SIR ಪ್ರಕ್ರಿಯೆಯ ಸಂದರ್ಭದಲ್ಲಿ, 'ಫಾರ್ಮ್-7' ಅರ್ಜಿಗಳ ಮೂಲಕ ತಮ್ಮನ್ನೂ ಒಳಗೊಂಡಂತೆ 3,244 ಮತದಾರರನ್ನು ತಪ್ಪಾಗಿ 'ಸ್ಥಳಾಂತರಗೊಂಡವರು/ಅನುಪಸ್ಥಿತರು' ಎಂದು ತೋರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಎಫ್‌ಐಆರ್ ಪ್ರಕಾರ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ, ಸಂಬಂಧಪಟ್ಟ ಮತದಾರರಿಂದ ಯಾವುದೇ ಅಧಿಕೃತ ದಾಖಲೆಗಳನ್ನು ಪಡೆಯದೆಯೇ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಸಹಿಗಳನ್ನು ನಕಲಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅವರ ದೂರಿನ ಮೇರೆಗೆ, ಅಕ್ರಮಗಳಿಗೆ ಸಂಬಂಧಿಸಿದಂತೆ 32 ಆರೋಪಿಗಳ ಹೆಸರನ್ನು ಉಲ್ಲೇಖಿಸಿ ಅಕ್ಟೋಬರ್ 1 ರಂದು ಎಫ್‌ಐಆರ್ ದಾಖಲಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com