ಶಿವಮೊಗ್ಗ: ಕೇವಲ 500 ರೂ.ಗಾಗಿ ಗಾಂಜಾ ಮತ್ತಲ್ಲಿನಲ್ಲಿದ್ದ ಯುವಕರಿಂದ ಕಾರ್ಮಿಕನ ಬರ್ಬರ ಕೊಲೆ

ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು ಗಾಂಜಾ ಮತ್ತಿನಲ್ಲಿ ನಾಲ್ವರು ಯುವಕರು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ತನ್ನ ಬಳಿ 500 ರೂಪಾಯಿ ಕೊಡುವಂತೆ ಯುವಕರು ಮಹ್ಮದ್ ಅಲಿಯನ್ನು ಒತ್ತಾಯಿಸಿದ್ದಾರೆ.
Representative Image
ಸಂಗ್ರಹ ಚಿತ್ರ
Updated on: 

ಶಿವಮೊಗ್ಗ: ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು ಗಾಂಜಾ ಮತ್ತಿನಲ್ಲಿ ನಾಲ್ವರು ಯುವಕರು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ತನ್ನ ಬಳಿಯಿದ್ದ 500 ರೂಪಾಯಿ ಕೊಡುವಂತೆ ಯುವಕರು ಮಹ್ಮದ್ ಅಲಿಯನ್ನು ಒತ್ತಾಯಿಸಿದ್ದಾರೆ. ಆದರೆ ತನ್ನ ಬಳಿಯಿಂದ 500 ರೂಪಾಯಿ ಕೊಡದಿದ್ದಕ್ಕೆ ಯುವಕರು ಮಹ್ಮದ್ ಅಲಿಯನ್ನು ಡ್ರ್ಯಾಗನ್‌ನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಶಿವಮೊಗ್ಗದ ಅಶೋಕ ನಗರದ ತುಂಗಾ ಚಾನೆಲ್ ಬಳಿ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಎರಡು ಬೈಕ್​​ನಲ್ಲಿ ಬಂದ ಗಾಂಜಾ ಅಮಲಿನಲ್ಲಿದ್ದ ನಾಲ್ವರು ಯುವಕರು. ಮಹ್ಮದ್ ಅಲಿಗೆ ಹಣ ಕೊಡುವಂತೆ ಒತ್ತಾಯಿಸಿದ್ದರು. ಅಲ್ಲದೆ ಮಹ್ಮದ್ ಅಲಿಗೆ ಚೂರಿಯಿಂದ ಇರಿದು 500 ರೂಪಾಯಿ ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಹ್ಮದ್ ಅಲಿ ಸ್ಥಳದಲ್ಲೇ ಮೃತಪಟ್ಟಿದ್ದನು. ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ತೆರಳಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Representative Image
ಬೆಂಗಳೂರು: ಪತ್ನಿ ಜೊತೆಗಿದ್ದ ವಿಡಿಯೋ ಕಳುಹಿಸಿದ ಪ್ರಿಯಕರ; ಮನನೊಂದ ಆಟೋ ಚಾಲಕ ಆತ್ಮಹತ್ಯೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com