ಪೆನ್ ಡ್ರೈವ್ ಹಂಚಿ ಗೆದ್ದಿದ್ದೀನಾ? HDK ದೇವಸ್ಥಾನಕ್ಕೆ ಬರಲಿ, ಪ್ರಮಾಣ ಮಾಡ್ತೀನಿ: ಸಂಪುಟದಿಂದ ವಜಾ ಮಾಡುವಂತೆ ಮೋದಿಗೆ ದೂರು; ಶ್ರೇಯಸ್

ಜೆಡಿ(ಎಸ್) ನಾಯಕತ್ವವು ಸಾಕ್ಷ್ಯಾಧಾರಗಳನ್ನು ನೀಡುವ ಬದಲು, ಆಧಾರರಹಿತ ಹೇಳಿಕೆಗಳನ್ನು ನೀಡುತ್ತಾ ವೈಯಕ್ತಿಕ ದಾಳಿಗಳಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು.
Shreyas patel
ಶ್ರೇಯಸ್ ಪಟೇಲ್
Updated on: 

ಹಾಸನ: ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಂಪ್ಲೇಂಟ್ ಮಾಡ್ತೀನಿ ಕುಮಾರಸ್ವಾಮಿ ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಿ ಎಂದು ದೂರು ನೀಡುತ್ತೇನೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬಕ್ಕೆ ಸಂಬಂಧಿಸಿದ ವಿವಾದಾತ್ಮಕ 'ಪೆನ್ ಡ್ರೈವ್' ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳನ್ನು ಇತ್ಯರ್ಥಪಡಿಸಿಕೊಳ್ಳಲು, ಹಾಸನ ಜಿಲ್ಲೆಯ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಸಾರ್ವಜನಿಕವಾಗಿ ಪ್ರಮಾಣ ಮಾಡುವಂತೆ ಅವರು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ತಾವು ನಿರ್ದೋಷಿ ಎಂದು ಸಾಬೀತುಪಡಿಸಲು ದೇವಾಲಯದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧವಿರುವುದಾಗಿ ತಿಳಿಸಿದರು. ಈ ಸವಾಲನ್ನು ಸ್ವೀಕರಿಸಿ, ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸುವಂತೆ ಅವರು ಕುಮಾರಸ್ವಾಮಿ ಅವರಿಗೆ ಹೇಳಿದರು.

ಜೆಡಿ(ಎಸ್) ನಾಯಕತ್ವವು ಸಾಕ್ಷ್ಯಾಧಾರಗಳನ್ನು ಮಂಡಿಸುವ ಬದಲು, ಆಧಾರರಹಿತ ಹೇಳಿಕೆಗಳನ್ನು ನೀಡುತ್ತಾ ವೈಯಕ್ತಿಕ ದಾಳಿಗಳಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು.

Shreyas patel
ಜೈಲಿನಲ್ಲಿದ್ದರೂ ಹಳೆಯ ಚಾಳಿ ಬಿಡದ ಪ್ರಜ್ವಲ್ ರೇವಣ್ಣ: ಪೆನ್ ಡ್ರೈವ್ ನೋಡಿ ಪೊಲೀಸರು ಶಾಕ್!

ಹಾಸನದಲ್ಲಿ ಜೆಡಿ(ಎಸ್) ಅನುಭವಿಸಿದ ಚುನಾವಣಾ ಸೋಲಿನಿಂದಲೇ ತಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಪಟೇಲ್ ಆರೋಪಿಸಿದರು. ಈ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಬಲವರ್ಧನೆಗೊಂಡ ನಂತರ, ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಜೆಡಿ(ಎಸ್) ಪ್ರಯತ್ನಿಸುತ್ತಿದೆ ಎಂದು ಅವರು ದೂರಿದರು.

ಜಿಲ್ಲೆಯಲ್ಲಿ ದೀರ್ಘಕಾಲದಿಂದ ಒಂದೇ ಕುಟುಂಬದ ರಾಜಕೀಯ ಪ್ರಾಬಲ್ಯವಿರುವುದನ್ನು ಪ್ರಶ್ನಿಸಿದ ಅವರು, ಅಧಿಕಾರವು ಕೇವಲ ಒಂದು ವಂಶಕ್ಕೆ ಸೀಮಿತವಾಗಬಾರದು. ಇತರರಿಗೂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಅವಕಾಶ ಸಿಗಬೇಕು ಎಂದು ಪ್ರತಿಪಾದಿಸಿದರು.

ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಟೀಕಿಸಿದ ಪಟೇಲ್, ಹಾಸನದ ಅಭಿವೃದ್ಧಿ ಕಾರ್ಯಗಳಿಗೆ ತಾವು ನೀಡಿರುವ ಕೊಡುಗೆಗಳೇನು ಎಂಬುದನ್ನು ಸಾರ್ವಜನಿಕರಿಗೆ ವಿವರಿಸುವಂತೆ ಆಗ್ರಹಿಸಿದರು.

ವಿಶೇಷವಾಗಿ, ಪದೇ ಪದೇ ಮರುಕಳಿಸುತ್ತಿರುವ ಮಾನವ-ಆನೆ ಸಂಘರ್ಷ ಮತ್ತು ಜಿಲ್ಲೆಯಲ್ಲಿ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' (IIT) ಸ್ಥಾಪಿಸಬೇಕೆಂಬ ದೀರ್ಘಕಾಲದ ಬೇಡಿಕೆಯಂತಹ ಬಗೆಹರಿಯದ ಸಮಸ್ಯೆಗಳತ್ತ ಅವರು ಗಮನ ಸೆಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com