ಸಿದ್ದರಾಮಯ್ಯಗೆ ಗೌರವ ಡಾಕ್ಟರೇಟ್‌ ಪ್ರದಾನ: ಆದ್ರೂ ನಾನು ಡಾಕ್ಟರ್ ಅಲ್ಲ, ಲಾಯರ್ ಅಷ್ಟೇ ಎಂದ ಮಾಜಿ ಸಿಎಂ!

ರಾಜ್ಯ ಸರ್ಕಾರದ 17 ಬಜೆಟ್ ಮಂಡಿಸಿದ್ದೇನೆ, 8 ವರ್ಷ ಸಿಎಂ ಆಗಿದ್ದೆ. ದೇವರಾಜ ಅರಸು ಅವರನ್ನು ಹಿಂದಿಕಿದ್ದೇನೆ, ಬಹುಶಃ ಆ ಕಾರಣಕ್ಕೆ ನನಗೆ ಡಾಕ್ಟರೇಟ್ ಕೊಟ್ಟಿರಬೇಕು.
Former CM Siddaramaiah Receives Honorary Doctorate From Deemed University
ಸಿದ್ದರಾಮಯ್ಯಗೆ ಗೌರವ ಡಾಕ್ಟರೇಟ್‌ ಪ್ರದಾನ
Updated on: 

ಕೋಲಾರ: ಆರ್.ಎಲ್.ಜಾಲಪ್ಪ ಡೀಮ್ಡ್ ಯೂನಿವರ್ಸಿಟಿಯವರು ನನಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ. ಇದು ನನಗೆ ಗೊತ್ತೇ ಇಲ್ಲ, ಬೇಡ ಅಂತ ಹೇಳಿದ್ದೆ. ಆದರೂ ನನ್ನನ್ನು ಡಾಕ್ಟರ್ ಸಿದ್ದರಾಮಯ್ಯ ಅಂತ ಕರೆಯಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.

ಇಂದು ಕೋಲಾರದಲ್ಲಿ ಆರ್.ಎಲ್.ಜಾಲಪ್ಪ ಆಸ್ಪತ್ರೆ ಸಂಸ್ಥಾಪನಾ ದಿನಾಚರಣೆ ಹಾಗೂ ಹಾಸ್ಪಿಟಲ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ದೇವರಾಜ್ ಅರಸು ಉನ್ನತ ಶಿಕ್ಷಣ ಸಂಸ್ಥೆ ಹಾಗೂ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ಅರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಸೋಧನಾ ಸಂಸ್ಥೆಗೆ ನಾನು ಕೂಡ ಸಂಸ್ಥಾಪಕ ಟ್ರಸ್ಟಿ ಆಗಿದ್ದೆ. ನಾನು ಒಂದು ಬಾರಿ ಸಹ ಸಭೆಗೆ ಬಂದಿಲ್ಲ. ಹಾಗಾಗಿ ಫೋನ್ ಮಾಡಿ ನಿನ್ನನ್ನು ತೆಗೆದು ಬಿಡ್ತೀನಿ ಅಂದಿದ್ರು. ಹಾಗೆ ತೆಗೆದು ಹಾಕಿದ್ದಾರೆ ಎಂದರು.

ಈಗ ನಾನು ಟ್ರಸ್ಟಿ ಅಲ್ಲ. ಜಿ.ಎಚ್.ನಾಗರಾಜ್ ಅವರು ನನ್ನ ಮಗನನ್ನು ಟ್ರಸ್ಟಿ ಮಾಡಿಕೊಂಡಿದ್ದಾರೆ. ಅವನೂ ಬರುತ್ತಿಲ್ಲ ಎಂದು ಮಾಜಿ ಸಿಎಂ ಹಾಸ್ಯ ಚಟಾಕಿ ಸಿಡಿಸಿದರು.

Former CM Siddaramaiah Receives Honorary Doctorate From Deemed University
ರಾಜಕೀಯವಾಗಿ ಸಿದ್ದರಾಮಯ್ಯರನ್ನು ಮುಗಿಸಿದರೆ ಕೆಲವರ ಹಾದಿ ಸುಲಭ: 'ಸ್ಟಿಂಗ್' ಹಿಂದಿನ ಲೆಕ್ಕಾಚಾರ ಬಿಚ್ಚಿಟ್ಟ ಎಚ್‌ ವಿಶ್ವನಾಥ್!

ಈ ಡೀಮ್ಡ್ ಯೂನಿವರ್ಸಿಟಿಯವರು ನನಗೆ ಗೌರವ ಡಾಕ್ಟರೇಟ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ 17 ಬಜೆಟ್ ಮಂಡಿಸಿದ್ದೇನೆ, 8 ವರ್ಷ ಸಿಎಂ ಆಗಿದ್ದೆ. ದೇವರಾಜ ಅರಸು ಅವರನ್ನು ಹಿಂದಿಕಿದ್ದೇನೆ, ಬಹುಶಃ ಆ ಕಾರಣಕ್ಕೆ ನನಗೆ ಡಾಕ್ಟರೇಟ್ ಕೊಟ್ಟಿರಬೇಕು. ಆದ್ರೆ ನಾನು ಡಾಕ್ಟರ್ ಅಲ್ಲ, ನಾನು ಲಾಯರ್ ಅಷ್ಟೇ. ಜಿ.ಎಚ್.ನಾಗರಾಜ್ ಒತ್ತಡದಿಂದ ನನಗೆ ಡಾಕ್ಟರೇಟ್ ಸಿಕ್ಕಿದೆ ಅನ್ಸುತ್ತೆ. ಹಾಗಂತ ಇನ್ಮೇಲೆ ನನ್ನ ಡಾಕ್ಟರ್ ಸಿದ್ದರಾಮಯ್ಯ ಅಂತ ಕರೆಯಬೇಡಿ, ಸಿದ್ದರಾಮಯ್ಯ ಅಂತಾನೆ ಕರೆಯಿರಿ ಎಂದು ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com