ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ದಿನಾಂಕ ನಿಗದಿ; ವೇಳಾಪಟ್ಟಿ ನಿಗದಿ

ಬೆಂಗಳೂರು-ಮುಂಬೈ ನಡುವಿನ ಪ್ರಯಾಣಕ್ಕೆ 16 ಗಂಟೆ 5 ನಿಮಿಷ ಬೇಕಾಗಲಿದ್ದು, ಮುಂಬೈ-ಬೆಂಗಳೂರು ಪ್ರಯಾಣವು ಸ್ವಲ್ಪ ವೇಗವಾಗಿರಲಿದೆ. ಹಿಂತಿರುಗುವ ಪ್ರಯಾಣಕ್ಕೆ 15 ಗಂಟೆ 45 ನಿಮಿಷ ತಗುಲಲಿದೆ.
Vande Bharat train
ವಂದೇ ಭಾರತ್ ರೈಲು
Updated on: 

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಚಾಲನೆ ಸಿಗಲಿದೆ.

ದಕ್ಷಿಣ ಭಾರತದ ಮೊದಲ ಪ್ರೀಮಿಯಂ ರಾತ್ರಿ ಪ್ರಯಾಣದ ಈ ರೈಲು, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಸಂಚರಿಸಲಿದೆ. ನವೆಂಬರ್ 2ರಿಂದ ರೈಲಿನ ನಿಯಮಿತ ಸಂಚಾರ ಆರಂಭವಾಗಲಿದ್ದು, ವಾರದಲ್ಲಿ ಆರು ದಿನ ಸಂಚರಿಸಲಿದೆ.

ಈ ಕುರಿತು ರೈಲ್ವೆ ಮಂಡಳಿಯಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಸಂಸದ ಪಿ ಸಿ ಮೋಹನ್ ತಿಳಿಸಿದ್ದಾರೆ.

Vande Bharat train
ಕಾರವಾರ-ಬೆಂಗಳೂರು ವಂದೇ ಭಾರತ್ ರೈಲು ಮಾರ್ಗಕ್ಕೆ ಅಪಸ್ವರ: ಕರಾವಳಿ ಜಿಲ್ಲೆಗಳಲ್ಲಿ ಒಡಕು!

ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ, ರೈಲು ರಾತ್ರಿ 7.50ಕ್ಕೆ ಬೆಂಗಳೂರಿನ ಎಸ್‌ಎಂವಿಟಿಯಿಂದ ಹೊರಟು, ಮರುದಿನ ಬೆಳಗ್ಗೆ 11.55ಕ್ಕೆ ಮುಂಬೈನ ಸಿಎಸ್‌ಎಂಟಿ ತಲುಪಲಿದೆ. ಹಿಂತಿರುಗುವಾಗ ರಾತ್ರಿ 8.10ಕ್ಕೆ ಮುಂಬೈನಿಂದ ಹೊರಟು, ಮರುದಿನ ಬೆಳಗ್ಗೆ 11.55ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.

ಬೆಂಗಳೂರು-ಮುಂಬೈ ನಡುವಿನ ಪ್ರಯಾಣಕ್ಕೆ 16 ಗಂಟೆ 5 ನಿಮಿಷ ಬೇಕಾಗಲಿದ್ದು, ಮುಂಬೈ-ಬೆಂಗಳೂರು ಪ್ರಯಾಣವು ಸ್ವಲ್ಪ ವೇಗವಾಗಿರಲಿದೆ. ಹಿಂತಿರುಗುವ ಪ್ರಯಾಣಕ್ಕೆ 15 ಗಂಟೆ 45 ನಿಮಿಷ ತಗುಲಲಿದೆ.

ಈ ರೈಲು ಗುಂಟಕಲ್ ಮಾರ್ಗವಾಗಿ ಸಂಚರಿಸಲಿದೆ. ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೋಲಾಪುರ, ಪುಣೆ ಮತ್ತು ಕಲ್ಯಾಣ್ ನಿಲ್ದಾಣಗಳಲ್ಲಿ ನಿಲುಗಡೆ ನೀಡುವ ನಿರೀಕ್ಷೆಯಿದೆ.

ಭಾರತದ ಎರಡು ಪ್ರಮುಖ ನಗರಗಳ ನಡುವಿನ ರೈಲು ಪ್ರಯಾಣದ ಸಮಯವನ್ನು ಈ ಸೇವೆ ಕಡಿಮೆ ಮಾಡಲಿದೆ. ಪ್ರಸ್ತುತ ಈ ಮಾರ್ಗದಲ್ಲಿ ಸೂಪರ್‌ಫಾಸ್ಟ್ ರೈಲು ಸಂಪರ್ಕದ ಕೊರತೆಯಿದ್ದು, ಈಗಿರುವ ರೈಲುಗಳಲ್ಲಿ ಒಂದು ಕಡೆಯ ಪ್ರಯಾಣಕ್ಕೆ 22ರಿಂದ 24 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ.

ಬೆಂಗಳೂರು-ಮುಂಬೈ ಮಾರ್ಗದಲ್ಲಿ ಬಿಇಎಂಎಲ್ ನಿರ್ಮಿಸಿರುವ ತಲಾ 16 ಬೋಗಿಗಳ ಎರಡು ರೈಲು ಸೆಟ್‌ಗಳನ್ನು ಬಳಸಲಾಗುತ್ತದೆ. ಇತ್ತೀಚೆಗೆ ರೈಲ್ವೆ ಇಲಾಖೆ ಮುಂಬೈ-ಪುಣೆ ನಡುವಿನ ಘಾಟ್ ವಿಭಾಗದಲ್ಲಿ ಈ ರೈಲಿನ ಪ್ರಾಯೋಗಿಕ ಸಂಚಾರವನ್ನೂ ನಡೆಸಿದೆ.

ಆದರೆ, ರೈಲನ್ನು ನಗರದ ಪ್ರಮುಖ ನಿಲ್ದಾಣವಾದ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದಲೇ ಆರಂಭಿಸಿ, ಅಲ್ಲಿಯೇ ಕೊನೆಗೊಳಿಸಬೇಕು ಎಂದು ರೈಲ್ವೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com