ಹಾಸನಕ್ಕೆ ಇಂತಹ ಸಚಿವರು ಸಿಕ್ಕಿರುವುದು ದುರದೃಷ್ಟಕರ: ಶಿವಲಿಂಗೇಗೌಡ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ

185 ಕೋಟಿ ರೂ. ಮಹಾತ್ಮ ಗಾಂಧಿ ಯೋಜನೆಯ ಅನುದಾನದಡಿ ಕೈಗೊಳ್ಳಬೇಕಿದ್ದ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದಕ್ಕೆ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
Swaroop prakash
ಸ್ವರೂಪ್ ಪ್ರಕಾಶ್
Updated on: 

ಹಾಸನ: ಶಾಸಕ ಸ್ವರೂಪ್ ಪ್ರಕಾಶ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಸಚಿವ ಶಿವಲಿಂಗೇಗೌಡರು ದೊಡ್ಡಮಂಡಿಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗೈರು ಹಾಜರಾಗಿದ್ದರು. ಸಚಿವರು ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಶಾಸಕ ಸ್ವರೂಪ್ ಆರೋಪಿಸಿದರು.

185 ಕೋಟಿ ರೂ. ಮಹಾತ್ಮ ಗಾಂಧಿ ಯೋಜನೆಯ ಅನುದಾನದಡಿ ಕೈಗೊಳ್ಳಬೇಕಿದ್ದ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದಕ್ಕೆ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

ಸಭೆಯಲ್ಲಿ ಜನರ ಸಮಸ್ಯೆ ಆಲಿಸುವ ತಾಳ್ಮೆ ಇಲ್ಲದೆ, ಕೂಗಾಡುವುದು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಸಚಿವರ ವರ್ತನೆ ಸರಿಯಲ್ಲ ಎಂದು ಟೀಕಿಸಿದರು. 185 ಕೋಟಿ ರೂ. ಅನುದಾನದ ಕ್ರಿಯಾ ಯೋಜನೆ ಇನ್ನೂ ಸಿದ್ಧವಾಗಿಲ್ಲ. ಟೆಂಡರ್ ಪ್ರಕ್ರಿಯೆಯೂ ಆರಂಭವಾಗಿಲ್ಲ. ಕೇವಲ ಒಂದು ವಾರ್ಡ್‌ಗೆ ಭೇಟಿ ನೀಡಿ ಹೋಗುವುದರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸ್ವರೂಪ್ ಹೇಳಿದ್ದಾರೆ. ಹಾಸನಕ್ಕೆ ಇಂತಹ ಸಚಿವರು ಸಿಕ್ಕಿರುವುದು ದುರದೃಷ್ಟಕರ ಎಂದು ಅವರು ಅಭಿಪ್ರಾಯಪಟ್ಟರು.

Swaroop prakash
ಗೌರವಯುತವಾಗಿ ನಡೆದುಕೊಳ್ಳಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: 'ಗೌರವಯುತ ಲಂಚ'ದ ಹೇಳಿಕೆಗೆ ಶಿವಲಿಂಗೇಗೌಡ ಸ್ಪಷ್ಟನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com