ಪೊಲೀಸ್ ಇಲಾಖೆ ಇವರ ಮನೆ ಆಳುಗಳಾ? ಬ್ರಿಟಿಷರ ಗುಲಾಮ RSSನಿಂದ ನಾವ್ ಕಲೀಬೇಕಾ? ಪ್ರಿಯಾಂಕ್ ಖರ್ಗೆ ಕಿಡಿ

ನಾವು ಕೇಳಿರೋದರಲ್ಲಿ ತಪ್ಪೇನಿದೆ? ಏನಾದರೂ ಲೋಪ ಇದ್ರೆ ನಾವು ತಿದ್ದಿಕೊಳ್ಳುತ್ತೇವೆ. ಬಹಳಷ್ಟು ಕಡೆ ಆರ್‌ಎಸ್‌ಎಸ್ ಪಥಸಂಚಲದ ಬಗ್ಗೆ ಮಾಹಿತಿಗಾಗಿ ಅಂತ ಕೊಡ್ತಾ ಇದ್ದಾರೆ.
Priyank Kharge
ಪ್ರಿಯಾಂಕ್ ಖರ್ಗೆ
Updated on: 

ಬೆಂಗಳೂರು: ಪೊಲೀಸ್ ಇಲಾಖೆ ಅವರ ಮನೆ ಆಳು ಮಕ್ಕಳಾ? ಮಾಹಿತಿ ಕೊಟ್ಟಿದ್ದೇವೆ, ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಅನ್ನೋದಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಮಾಧ್ಯಮದವರೊಂದಿಗೆ ಆರ್‌ಎಸ್‌ಎಸ್‌ಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ನಾವು ಕೇಳಿರೋದರಲ್ಲಿ ತಪ್ಪೇನಿದೆ? ಏನಾದರೂ ಲೋಪ ಇದ್ರೆ ನಾವು ತಿದ್ದಿಕೊಳ್ಳುತ್ತೇವೆ. ಬಹಳಷ್ಟು ಕಡೆ ಆರ್‌ಎಸ್‌ಎಸ್ ಪಥಸಂಚಲದ ಬಗ್ಗೆ ಮಾಹಿತಿಗಾಗಿ ಅಂತ ಕೊಡ್ತಾ ಇದ್ದಾರೆ. ಮಾಹಿತಿಗಾಗಿ ಬೇಡ, ದಯವಿಟ್ಟು ಅನುಮತಿಗಾಗಿ ಅಂತ ಕೇಳಿ, ನಾವು ಮಾಡುತ್ತೇವೆ. ಅನುಮತಿ ಕೇಳಲಿ. ಅದರಲ್ಲಿ ಮಾಹಿತಿಗಾಗಿ ಅಂತ ಬರೆದಿದೆ, ಪೊಲೀಸ್ ಇಲಾಖೆ ಅವರ ಮನೆ ಆಳು ಏನ್ರಿ? ಎಂದು ಆಗ್ರಹಿಸಿದ್ದಾರೆ.

ಮಾಹಿತಿ ಕೊಟ್ಟಿದ್ದೇವೆ. ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳೋದಲ್ಲ. ಬಹಳ ಜನ ಹಬ್ಬದ ಆಚರಣೆ ಮಾಡುತ್ತಿದ್ದಾರೆ. ನೀವು ಅನುಮತಿ ಕೇಳಿ, ಸೂಕ್ತ ಅನಿಸಿದ್ರೆ ಭದ್ರತೆ ಕೊಡ್ತೀವಿ. ಗಣಪತಿ ಹಬ್ಬ, ಮನೆ ಕಾರ್ಯಕ್ರಮ ಅಂತ ಅನುಮತಿ ಕೇಳ್ತೀರಾ ಅಲ್ವಾ? ನಿಮಗೆ ಏನು ಕಾನೂನು ಅನ್ವಯಿಸುತ್ತದೆ, ಅದೇ ಆರ್‌ಎಸ್‌ಎಸ್‌ಗೂ ಕೂಡ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ಆರ್‌ಎಸ್ಎಸ್ ಪಥಸಂಚಲನಕ್ಕೆ ಸೂಕ್ತವಾಗಿ ಅನುಮತಿ ಕೇಳಬೇಕು. ಬಾಯಿಮಾತಿನಲ್ಲಿ ಹೇಳಿದರೆ ಆಗುವುದಿಲ್ಲ. ನಾನು ಕೇಳಿದ್ರಲ್ಲಿ ತಪ್ಪಿದ್ದರೆ, ಲೋಪ ಇದ್ದರೆ ತಿದ್ದಿಕೊಳ್ಳೋಕೆ ತಯಾರಿದ್ದೀನಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆರ್‌ಎಸ್ಎಸ್ ಪಥಸಂಚಲನ ಮಾಡುವಾಗ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಮಾಹಿತಿ ಬೇಡ, ಅನುಮತಿ ಕೇಳಿ ಪಡೆದುಕೊಳ್ಳಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Priyank Kharge
'ಸ್ಟಿಂಗ್' ಹಿಂದೆ ಕುಮಾರಸ್ವಾಮಿಯೇ ಯಾಕೆ ಇರಬಾರದು? ಅವರ ಬಳಿ ದಾಖಲೆ ಇದ್ದರೇ ನೀಡಲಿ: ಪ್ರಿಯಾಂಕ್ ಖರ್ಗೆ

ಪೊಲೀಸ್ ಇಲಾಖೆ RSSನ ಆಳು ಮಕ್ಕಳಲ್ಲ. ಮಾಹಿತಿ ಕೊಟ್ಟಿದ್ದೇವೆ, ವ್ಯವಸ್ಥೆ ಮಾಡಿ ಎಂದು ಹೇಳಿದರೆ ಪೊಲೀಸ್ ಇಲಾಖೆ ಮಾಡಲ್ಲ. ಬಹಳಷ್ಟು ಜನ ಹಬ್ಬ ಆಚರಿಸುತ್ತಾರೆ. ಆರ್‌ಎಸ್ಎಸ್ ಕಾನೂನು, ಸಂವಿಧಾನಕ್ಕಿಂತ ಮೇಲಲ್ಲ. ಮೊದಲು ಅನುಮತಿ ಕೇಳಿ, ಸೂಕ್ತ ಅನಿಸಿದರೆ ಕೊಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರೂಟ್ ಮಾರ್ಚ್ ಮೇಲೆ ಏನಾದ್ರು ತೊಂದ್ರೆ ಇದ್ರೆ ಲೋಕಲ್ ಅಲ್ಲಿ ಸರಿ ಮಾಡ್ಕೊಳಿ. ದಯವಿಟ್ಟು ಪೊಲೀಸ್ ಇಲಾಖೆಗೆ ಸರ್ಕಾರಗಳಿಗೆ ಗೌರವ ಕೊಡೋದು ಕಲಿಯಲಿ. ಮಾಡ್ತಾ ಇದೀವಿ ಸೂಕ್ತ ಕ್ರಮ ವಹಿಸಿ ಅಂದ್ರೆ ಇಲಾಖೆಯವರು ಅವರ ಮನೇಲಿ ಕೆಲಸ ಮಾಡೋರ? ಅನುಮತಿ ಪಡೆಯದೇ ಮಾಡೋದಕ್ಕೆ ಆಗೋದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆರ್‌ಎಸ್ಎಸ್‌ ನೂರು ವರ್ಷದ ಇತಿಹಾಸದಲ್ಲಿ ಯಾವ ಪ್ರತಿಭಟನೆ ಮಾಡಿದ್ದಾರೆ. ಬ್ರಿಟಿಷರ ಗುಲಾಮರು ಇವರು ಪೆನ್ಷನ್ ತಗೊಳೋವರ ಹತ್ರ ನಾವು ಕಲಿಬೇಕಾ. ಏನಾದ್ರು RSS ನಿಂದ ಕಲಿಯೋದು ಇದ್ಯಾ . ಅವರ ಇತಿಹಾಸ ತೆಗೆದು ನೋಡಿ. ಯಾರು ಬ್ರಿಟಿಷರ ಹತ್ರ 60 ರೂ ಪೆನ್ಷನ್ ತಗೋತಾ ಇದ್ರು ಸಾವರ್ಕರ್ ಅಂತವರು ಇವರ ಲೀಡರ್. ಇವರಿಂದ ನಾವು ಏನು ಕಲಿಯೋಕೆ ಇದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com