ಕಾಂಗ್ರೆಸ್​​ನಲ್ಲಿ 'ಸ್ಟಿಂಗ್'​​ ಕಂಪನ: ಯತೀಂದ್ರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾಗೆ ನೋಟಿಸ್!

ವಿಡಿಯೋದಲ್ಲಿ‌ ಯಾರಿದ್ದಾರೆ? ಅವರ‌‌ ಹಿಂದೆ ಯಾರಿದ್ದಾರೆ ಅಂತ‌ ತನಿಖೆ ಮಾಡೋಕೆ ಸಿಐಡಿ,‌ ಸಿಬಿಐ ಎಲ್ಲಾ ಇದೆ. ಆ ರೀತಿ ನೋಡೋಕೆ ಹೋದ್ರೆ ತನಿಖೆ ಬಹಳ ಹಿಂದಿಂದ ಆಗಬೇಕಾಗುತ್ತೆ ಎಂದು ಬಿಕೆ ಹರಿಪ್ರಸಾದ್​ ಅವರು ಬಿಜೆಪಿ ವಿರುದ್ಧವೂ ಕಿಡಿಕಾರಿದ್ರು.
kripa alwa and siddaramaiah
ಕೃಪಾ ಆಳ್ವಾ ಮತ್ತು ಸಿದ್ದರಾಮಯ್ಯ
Updated on: 

ಬೆಂಗಳೂರು: ಸಿದ್ದರಾಮಯ್ಯ ಅವರನ್ನ ಬ್ಲ್ಯಾಕ್ ಮೇಲ್​ ಮಾಡಲು ಸ್ಟಿಂಗ್​ ಆಪರೇಷನ್ ಮಾಡಿದ್ದು, ಕಾಂಗ್ರೆಸ್​​ನವರ ಕೈವಾಡವಿದೆ ಎಂದು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್​ ಮಹಿಳಾ ನಾಯಕಿ ಕೃಪಾ ಆಳ್ವಾಗೆ ನೋಟಿಸ್​ ನೀಡಲಾಗಿದೆ.

ವಿಡಿಯೋದಲ್ಲಿ ಕೈ ನಾಯಕಿ ಕೃಪಾ ಆಳ್ವಾ ಇದ್ದಾರೆ ಎಂದು ಹೆಚ್​ಡಿ ಕುಮಾರಸ್ವಾಮಿ ಕೂಡ ಆರೋಪ ಮಾಡಿದ್ದಾರೆ. ಸ್ಟಿಂಗ್ ಆಪರೇಷನ್​ ಬಗ್ಗೆ ಯತೀಂದ್ರ‌ ಸಿದ್ದರಾಮಯ್ಯ ಆರೋಪದ ಬಗ್ಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು, ನಾನು ಈಗಾಗಲೇ ಹೇಳಿದ್ದೇನೆ, ಸೇಡಿನ ರಾಜಕೀಯವಾಗಿ ಸೇಡು ತೀರಿಸಿಕೊಳ್ಳೋಕೆ ಕೆಲವರು ಮಾಡುವ ಹೀನ ಕೃತ್ಯ ಇದು.

ಅದು ಆಗಬಾರದು ಅಂತ ನಾನು ನಿರಂತರವಾಗಿ ಹೇಳಿಕೊಂಡೆ ಬಂದಿದ್ದೇನೆ. ಈ ತರ ಸ್ಟಿಂಗ್ ಆಪರೇಷನ್ ನಲ್ಲಿ ಯಾರಾದರೂ ಕಾಂಗ್ರೆಸ್ ಪಕ್ಷದವರು ಇದ್ದರೆ. ಅದರಲ್ಲಿ ಭಾಗಿಯಾಗಿದ್ದರು ಅದು ವಿಡಿಯೋ ಎಲ್ಲಾ ಹೊರಗಡೆ ಬರುತ್ತೆ. ಈಗಾಗಲೇ ಅವರಿಗೆ ಶೋಕಾಸ್ ನೋಟೀಸ್ ಕೊಡಿ ಅಂತ ಹೇಳಿದ್ದು, ಕ್ರಮ ತೆಗೆದುಕೊಳ್ಳೋದಾಗಿಯೂ ತಿಳಿಸಿದ್ದಾರೆ.

ವಿಡಿಯೋದಲ್ಲಿ‌ ಯಾರಿದ್ದಾರೆ? ಅವರ‌‌ ಹಿಂದೆ ಯಾರಿದ್ದಾರೆ ಅಂತ‌ ತನಿಖೆ ಮಾಡೋಕೆ ಸಿಐಡಿ,‌ ಸಿಬಿಐ ಎಲ್ಲಾ ಇದೆ. ಆ ರೀತಿ ನೋಡೋಕೆ ಹೋದ್ರೆ ತನಿಖೆ ಬಹಳ ಹಿಂದಿಂದ ಆಗಬೇಕಾಗುತ್ತೆ ಎಂದು ಬಿಕೆ ಹರಿಪ್ರಸಾದ್​ ಅವರು ಬಿಜೆಪಿ ವಿರುದ್ಧವೂ ಕಿಡಿಕಾರಿದ್ರು. ಈಗಾಗಲೇ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಸೂಚಿಸಿದ್ದೇನೆ. ನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಸ್ಪಷ್ಟಪಡಿಸಿದರು.

kripa alwa and siddaramaiah
ಪುತ್ತೂರು ಟಿಕೆಟ್ ಪಡೆಯಲು ಬ್ಲ್ಯಾಕ್‌ಮೇಲ್‌ ಯತ್ನ; ಸಿದ್ದರಾಮಯ್ಯ ಸ್ಟಿಂಗ್ ನಲ್ಲಿ ಕಾಂಗ್ರೆಸ್ ನವರ ಕೈವಾಡ: ಯತೀಂದ್ರ ಹೊಸ ಬಾಂಬ್; Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com