ಬೆಂಗಳೂರು: ನೈಟ್ ಡ್ಯೂಟಿ ಕೆಲಸದ ವಿಚಾರವಾಗಿ ಜಗಳ; ಇಬ್ಬರು ಪಿಜ್ಜಾ ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲು

ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಈ ಇಬ್ಬರು ಉದ್ಯೋಗಿಗಳು ನಿರಾಕರಿಸಿದಾಗ, ಅವರಿಗೂ ಮ್ಯಾನೇಜರ್‌ಗೂ ನಡುವೆ ವಾಗ್ವಾದ ನಡೆದಿದೆ.
Casual Images
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ವರ್ತೂರಿನಲ್ಲಿರುವ 'ಮೋಜೋ ಪಿಜ್ಜಾ' (Mojo Pizza) ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಡೆಲಿವರಿ ಸಿಬ್ಬಂದಿ, ರಾತ್ರಿ ಪಾಳಿಯ (ನೈಟ್ ಶಿಫ್ಟ್) ಕೆಲಸದ ವಿಚಾರವಾಗಿ ಮ್ಯಾನೇಜರ್ ಜೊತೆ ಜಗಳವಾಡಿದ್ದಾರೆ. ಬಳಿಕ ಅವರು ಮಳಿಗೆಯ ಪಿಠೋಪಕರಣಗಳನ್ನು ಜಖಂಗೊಳಿಸಿದ್ದು, ಸಿಬ್ಬಂದಿಯೊಬ್ಬರಿಗೆ ಚಾಕುವಿನಿಂದ ಬೆದರಿಕೆ ಹಾಕಿದ್ದಾರೆ. ಮ್ಯಾನೇಜರ್‌ಗೆ ಸೇರಿದ ಬೈಕ್ ಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.

ಗುರುವಾರ ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದ್ದು, ಮಳಿಗೆಯ ಮ್ಯಾನೇಜರ್ ಸತೀಶ್ ಕುಮಾರ್ ದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳಾದ ಸುಮನ್ ಕುಮಾರ್ ನಾಯಕ್ ಮತ್ತು ಜಿಬ್‌ಕಾಂತ್ ಪೋದ್ದಾರ್, ಚರ್ಚ್‌ವೊಂದರ ಸಮೀಪವಿರುವ ಈ ಮಳಿಗೆಯಲ್ಲಿ ಡೆಲಿವರಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಈ ಇಬ್ಬರು ಉದ್ಯೋಗಿಗಳು ನಿರಾಕರಿಸಿದಾಗ, ಅವರಿಗೂ ಮ್ಯಾನೇಜರ್‌ಗೂ ನಡುವೆ ವಾಗ್ವಾದ ನಡೆದಿದೆ.

Casual Images
'Pagal Kar Dete Ho.. Hat Na'.. ಅದು ಬೇಬಿ ಬಂಪ್ ಅಲ್ಲ, ಪಿಜ್ಜಾ ಬಂಪ್: 3ನೇ ಬಾರಿ ಗರ್ಭಿಣಿ ವದಂತಿಗೆ ನಟಿ ಕರೀನಾ ಕಪೂರ್ ತೆರೆ!

ನಂತರ ಕುಡಿದು ಮಳಿಗೆಗೆ ಮರಳಿದ ಇಬ್ಬರೂ, ಅಲ್ಲಿನ ಅಡುಗೆಮನೆಯಲ್ಲಿ ಬಳಸುವ ಎರಡು ಎಲ್‌ಇಡಿ ಪರದೆಗಳನ್ನು (Kitchen Display Systems - KDS) ಜಖಂಗೊಳಿಸಿದ್ದಾರೆ. ಅಲ್ಲದೆ, ಸಿಬ್ಬಂದಿಯೊಬ್ಬರಿಗೆ ಚಾಕುವಿನಿಂದ ಬೆದರಿಕೆ ಹಾಕಿದ ಅವರು, ಮ್ಯಾನೇಜರ್‌ಗೆ ಸೇರಿದ ಬೈಕ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.

ದೂರಿನ ಆಧಾರದ ಮೇಲೆ ವರ್ತೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com