ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಪತ್ನಿ ಬೆದರಿಕೆ: ಮದುವೆಯಾದ 6 ತಿಂಗಳಲ್ಲೇ ಯುವಕ ಆತ್ಮಹತ್ಯೆಗೆ ಶರಣು..!

ಮದುವೆಯಾದ ಕೆಲವು ತಿಂಗಳಿನಿಂದ ದಂಪತಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಗುತ್ತಿತ್ತು. ಕಳೆದ ಕೆಲವು ದಿನಗಳ ಮುನ್ನ ಪತ್ನಿ ರಕ್ಷಿತಾ, ಚಂದನ್ ಜೊತೆ ಗಲಾಟೆ ಮಾಡಿಕೊಂಡು ಚನ್ನಪಟ್ಟಣ ತಾಲೂಕಿನಲ್ಲಿರುವ ತನ್ನ ತವರು ಮನೆಗೆ ತೆರಳಿದ್ದರು.
Stop Suicide (file pic)
ಸಾಂಕೇತಿಕ ಚಿತ್ರonline desk
Updated on: 

ರಾಮನಗರ: ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮನನೊಂದ 26 ವರ್ಷದ ನವವಿವಾಹಿತ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಕನಕಪುರದಲ್ಲಿ ನಡೆದಿದೆ.

ಕನಕಪುರ ಟೌನ್‌ನ ಕುಲುಮೆ ಬೀದಿ ನಿವಾಸಿ ಜಿ. ಚಂದನ್ (26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸುಮಾರು ಆರು ತಿಂಗಳ ಹಿಂದೆಯಷ್ಟೇ ಚಂದನ್, ರಕ್ಷಿತಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ಮದುವೆಯಾದ ಕೆಲವು ತಿಂಗಳಿನಿಂದ ದಂಪತಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಗುತ್ತಿತ್ತು. ಕಳೆದ ಕೆಲವು ದಿನಗಳ ಮುನ್ನ ಪತ್ನಿ ರಕ್ಷಿತಾ, ಚಂದನ್ ಜೊತೆ ಗಲಾಟೆ ಮಾಡಿಕೊಂಡು ಚನ್ನಪಟ್ಟಣ ತಾಲೂಕಿನಲ್ಲಿರುವ ತನ್ನ ತವರು ಮನೆಗೆ ತೆರಳಿದ್ದರು.

ಅಲ್ಲಿಂದ ರಕ್ಷಿತಾ ಹಾಗೂ ಆಕೆಯ ಪೋಷಕರು ಚಂದನ್ ಅವರಿಗೆ ನಿರಂತರವಾಗಿ ಫೋನ್ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ನಿನ್ನ ಹಾಗೂ ನಿನ್ನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳದ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಚಂದನ್ ಅವರ ಕಿರಿಯ ಸಹೋದರ ಹಲವು ಬಾರಿ ಫೋನ್ ಮಾಡಿದರೂ ಚಂದನ್ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ಚಂದನ್ ಶವವಾಗಿ ಪತ್ತೆಯಾಗಿದ್ದಾರೆ.

ಮೃತದೇಹದ ಬಳಿ ಚಂದನ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ "ನನ್ನ ಸಾವಿಗೆ ಪತ್ನಿ ರಕ್ಷಿತಾ ಹಾಗೂ ಆಕೆಯ ಕುಟುಂಬದವರೇ ಕಾರಣ" ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆನ್ನಲಾಗಿದೆ.

Stop Suicide (file pic)
ಬೆಂಗಳೂರು: ಸೋದರನ ಜೊತೆಯೇ ಅನೈತಿಕ ಸಂಬಂಧ; ಪತ್ನಿಯ 'ರಾಸಲೀಲೆ' ವಿಡಿಯೋ ನೋಡಿ ಪತಿ ಆತ್ಮಹತ್ಯೆ!

ಮಗನ ಸಾವಿನಿಂದ ಕಂಗಾಲಾದ ತಾಯಿ ಜಯಲಕ್ಷ್ಮಿ ಅವರು ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಅನ್ವಯ ಪೊಲೀಸರು ಪತ್ನಿ ರಕ್ಷಿತಾ ಮತ್ತು ಆಕೆಯ ಪೋಷಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 108 (ಆತ್ಮಹತ್ಯೆಗೆ ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿ ಗ್ರಾಮದ ರಕ್ಷಿತಾ ಅವರನ್ನು ಚಂದನ್‌ ಪ್ರೀತಿಸಿ ಸುಮಾರು ಆರು ತಿಂಗಳ ಹಿಂದೆ ವಿವಾಹವಾಗಿದ್ದರು. ಬಳಿಕ ದಂಪತಿ ಕನಕಪುರ ಪಟ್ಟಣದ ಕುಲುಮೆ ಬೀದಿಯಲ್ಲಿ ವಾಸಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆದರಿಕೆ ಮತ್ತು ಕಿರುಕುಳದಿಂದಾಗಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ಮೃತನ ಪತ್ನಿ ಮತ್ತು ಆಕೆಯ ಪೋಷಕರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

(ಗಮನಿಸಿ: ಮಾನಸಿಕ ಒತ್ತಡ ಅಥವಾ ಆತ್ಮಹತ್ಯೆ ಆಲೋಚನೆಗಳಿದ್ದರೆ ಸಹಾಯ ಪಡೆಯಲು ಹಿಂಜರಿಯಬೇಡಿ. ತಕ್ಷಣದ ಬೆಂಬಲಕ್ಕಾಗಿ ಸ್ನೇಹ ಫೌಂಡೇಶನ್: 044-24640050, ಟೆಲಿ ಮಾನಸ್: 14416 (24 ಗಂಟೆಯೂ ಲಭ್ಯ), ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ: 022-25521111 (ಸೋಮವಾರದಿಂದ ಶನಿವಾರದವರೆಗೆ, ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ) ಸಹಾಯವಾಣಿಯನ್ನು ಸಂಪರ್ಕಿಸಿ).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com